ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಷ್ಟೇ ಹಿಜಬ್ ವಿವಾದ ನಡೆಯುತ್ತಿದ್ದು, ಇದು ಬಡ ಮಕ್ಕಳ ಭವಿಷ್ಯವನ್ನು ಬಲಿ ಪಡೆಯುವ ರಾಜಕೀಯ ದುರುದ್ದೇಶವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಜಬ್ ವಿವಾದದ ಕುರಿತು ಜಿಲ್ಲೆಯ ಚಿಂತಾಮಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಬಡ ಮಕ್ಕಳ ಭವಿಷ್ಯವನ್ನು ಬಲಿ ಪಡೆಯುವ ರಾಜಕೀಯ ದುರುದ್ದೇಶವಾಗಿದೆ. ಶ್ರೀಮಂತರ ಮಕ್ಕಳು ಓದುತ್ತಿರುವ ಖಾಸಗಿ ಶಾಲೆಗಳಲ್ಲಿ ಈ ವಿವಾದ ನಡೆಯುತ್ತಿಲ್ಲ. ಹಾಲಿ ಮಾಜಿ ಮಂತ್ರಿಗಳು ಶಾಸಕರ ಮಕ್ಕಳು ಓದುತ್ತಿರುವ ಶಾಲೆಗಳಲ್ಲಿ ವಿವಾದ ಇಲ್ಲ. ಅಮಾಯಕ ಮಕ್ಕಳಲ್ಲಿ ದ್ವೇಷದ ಭಾವನೆ ಹುಟ್ಟುಹಾಕುವುದು ಕೆಲವು ರಾಜಕೀಯ ಪಕ್ಷಗಳು ಬಲವರ್ಧನೆಗೆ ಷಡ್ಯಂತ್ರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!
Advertisement
Advertisement
ಇವರು ಸಮಾಜದಲ್ಲಿ ಕೋಮುಗಲಭೆ ಉಂಟುಮಾಡಿ ಅಶಾಂತಿ ಉಂಟುಮಾಡಲು ಹೊರಟಿದ್ದಾರೆ. ಹಿಜಬ್ ವಿವಾದ ಉದ್ಬವವಾದ ದಿನವೇ ಸರ್ಕಾರ ಸರಿಯಾದ ಕ್ರಮ ತೆಗದುಕೊಂಡಿಲ್ಲ. ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದರೆ ರಾಷ್ಟ್ರೀಯ ಮಟ್ಟದ ಚರ್ಚೆಗೆ ಅವಕಾಶ ಇರುತ್ತಿರಲಿಲ್ಲ. ರಾಜಕೀಯ ತೆವಲಿಗೆ ರಾಷ್ಟ್ರೀಯ ಪಕ್ಷಗಳು ಬಡ ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಹಿಜಾಬ್, ಕೇಸರಿ ಉಡುಪು ಧರಿಸುವ ವಿಚಾರದಲ್ಲಿ ಬಡಮಕ್ಕಳನ್ನ ಬಲಿ ಕೊಡುವ ಕೆಲಸ ನಡೆಯುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ, ಹಿಜಬ್, ಕೇಸರಿ ತಿಕ್ಕಾಟ ನಡೆಯುತ್ತಿದೆ ಎಂದು ಸಿಡಿದರು. ಇದನ್ನೂ ಓದಿ: ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು
Advertisement
Advertisement
ಖಾಸಗಿ ಶಾಲಾ ಕಾಲೇಜುಗಳಲ್ಲಿ ಈ ವಿಚಾರವಾಗಿ ಯಾವುದೇ ಸಮಸ್ಯೆ ಇಲ್ಲ. ಶಾಸಕರು, ಮಂತ್ರಿಗಳು, ಮಾಜಿ ಶಾಸಕರು, ಮಂತ್ರಿಗಳ ಮಕ್ಕಳು ಖಾಸಗಿ ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಬಡಪಾಯಿಗಳ ಮಕ್ಕಳು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸೇರುತ್ತಾರೆ. ಬಡಪಾಯಿಗಳ ಮಕ್ಕಳನ್ನು ಬೀದಿಗೆ ಬಿಟ್ಟು ರಾಜಕೀಯ ಪಕ್ಷಗಳು ಲೆಕ್ಕಾಚಾರ ಹಾಕುತ್ತಿವೆ ಎಂದರು.