ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗ್ತಿರಲಿಲ್ಲ: ಹೆಚ್‍ಡಿಕೆ ಕಿಡಿ

Public TV
2 Min Read
H D KUMARSWAMY

ಬೆಂಗಳೂರು: ತಾಜ್ ವೆಸ್ಟೆಂಡ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗುತ್ತಿರಲಿಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕುಮಾರಸ್ವಾಮಿಯವರು 14 ತಿಂಗಳು ತಾಜ್ ವೆಸ್ಟೆಂಡ್ ಹೊಟೆಲ್‍ನಲ್ಲಿದ್ದರು ಎಂಬ ಯೋಗೇಶ್ವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಸರ್ಕಾರಿ ಬಂಗಲೆ ಇರಲಿಲ್ಲ ಎನ್ನುವ ಕಾರಣಕ್ಕೆ ವಿಶ್ರಾಂತಿ ಪಡೆಯಲು ಆ ಹೊಟೆಲ್‍ಗೆ ಹೋಗುತ್ತಿದ್ದೆ. ಈಗಲೂ ನಾನು ತಾಜ್ ವೆಸ್ಟ್ ಹೊಟೆಲ್‍ಗೆ ಹೋಗುತ್ತಿರುತ್ತೇನೆ. ನನ್ನದು ತೆರೆದ ಪುಸ್ತಕ ಎಂದು ತಿರುಗೇಟು ನೀಡಿದರು.

CPYOGESHWAR 1

ನನ್ನ ಪಿಎ ಈಗಲೂ ಆ ಹೊಟೆಲ್‍ನಲ್ಲಿಯೇ ಇರುತ್ತಾರೆ. ನಾನು ಒಬ್ಬನೆ ಅಲ್ಲ ನನ್ನ ಜೊತೆ ಸಾ.ರಾ ಮಹೇಶ್ ಅವರು ಕೂಡಾ ಇರುತ್ತಿದ್ದರು. ಇದನ್ನೇಲ್ಲಾ ಇವನ ಹತ್ತಿರ ನೋಡಿ ಕಲಿಯಬೇಕಿತ್ತಾ? ನಾವೆಲ್ಲಾ ಹೋಟೆಲ್‍ನಲ್ಲಿದ್ದರೆ ಇವನೇನು ಗುಡಿಸಲಲ್ಲಿ ಇರುತ್ತಿದ್ದನಾ? ಇವನ ಬಗ್ಗೆ ನನಗೆ ಗೊತ್ತಿಲ್ಲವಾ ಇಲ್ಲೆ ಯು.ಬಿ ಸಿಟಿ ಪಕ್ಕದಲ್ಲಿ ಇವನು ಇದ್ದನು. ನನ್ನದು ಕದ್ದು ಮುಚ್ಚಿ ಯಾವುದೂ ಇಲ್ಲ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಚನ್ನಪಟ್ಟಣಕ್ಕೆ ಆಕಸ್ಮಿಕ ಅತಿಥಿಯಾಗಿ ಬರುತ್ತಿದ್ದರು ಎನ್ನುವ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಚನ್ನಪಟ್ಟಣದಲ್ಲಿ ನನ್ನದು ಮುಗಿದ ಅಧ್ಯಾಯ. ಅವನು ಖಾಸಗಿ ಬಸ್ ನಿಲ್ದಾಣಕ್ಕೆ 30ಕೋಟಿ ಪ್ರಾಜೆಕ್ಟ್ ಮಾಡಿ ಎಸ್ಟಿಮೇಟ್ ಮಾಡಿದ್ದನು. ಅವನ್ಯಾರೋ ಕಂಟ್ರಾಕ್ಟರ್ ಕೈಯಲ್ಲಿ ಗುಂಡಿ ಹೊಡೆಸಿದ್ದನು. ಅದಕ್ಕೆ ನಾನು ಹಣ ಕೊಡಿಸಬೇಕಾ. ಅಲ್ಲಿ ಹೋಗಿ ನೋಡಿ ಇನ್ನೂ ಅದಕ್ಕೆ ತಗಡು ಹೊಡೆಸಿ ಇಟ್ಟಿದ್ದಾನೆ ಎಂದು ಗುಡುಗಿದರು. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

jds logo

ಅಂಬೇಡ್ಕರ್ ಭವನದಲ್ಲಿ ಗುಂಡಿ ಆಗಿ, ನೀರು ನಿಂತಿದೆ. ಅದನ್ನು ನಾನು ಹೋಗಿ ಕ್ಲೀನ್ ಮಾಡಿಸಬೇಕಾ? ನಾನು ಕಣ್ಣೀರು ಹಾಕಿಕೊಂಡು ಹೋಗಿಲ್ಲ. ನಾನು ಸಿಎಂ ಆಗಿದ್ದು ಚನ್ನಪಟ್ಟಣಕ್ಕೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ. ಕರ್ನಾಟಕ ರಾಜ್ಯದ ಸಮಸ್ಯೆ ಬಗೆಹರಿಸಲು. ಚನ್ನಪಟ್ಟಣಕ್ಕೆ ಶಾಸಕನಾಗಿ ಏನು ಕೆಲಸ ಮಾಡಿಸಬೇಕೋ ಎಲ್ಲಾ ಮಾಡಿದ್ದೇನೆ. ಇವನು ಸರ್ಟಿಫಿಕೇಟ್ ಕೊಡೋದಲ್ಲ. ನನ್ನನು ಆರಿಸಿ ತಂದ ಜನರು ಇದರ ಬಗ್ಗೆ ಮಾತಾಡಲಿ. ಮೆಗಾಸಿಟಿ ಅಂತ ಪ್ರಾಜೆಕ್ಟ್ ಮಾಡಲು ಹೋಗಿ ಸಾವಿರಾರು ಜನರನ್ನ ಬೀದಿ ಪಾಲು ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ: ಎಚ್‍ಡಿಕೆ ವಿರುದ್ಧ ಏಕವಚನದಲ್ಲೇ ಸಿಪಿವೈ ಕಿಡಿ

ಈ ಹಿಂದೆ ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ. ಕಂಡೋರ ದುಡ್ಡು ತೆಗೆದುಕೊಂಡು ಹಾಳು ಮಾಡಿದ. ಇವನು ನನ್ನ ವಿರುದ್ಧ ಆರೋಪ ಮಾಡ್ತಾನಾ? ಯಾವುದೇ ಚರ್ಚೆಗೆ ನಾನು ಸಿದ್ಧ. ಬರಲಿ ಚನ್ನಪಟ್ಟಣದಲ್ಲಿಯೇ ಚರ್ಚೆ ಮಾಡೋಣ. ನಾನು ದಲಿತರ ಜಮೀನು ಹೊಡೆದಿದ್ದೇನಂತೆ. ಇವನೇನು ಸಾಚಾ ಅಲ್ಲ ಮೆಗಾಸಿಟಿ ಮಾಡಿ ಲೂಟಿ ಹೊಡೆದು ಜನರು ಬೀದಿ ಪಾಲಾಗಿದ್ದಾರೆ. ಸೈನಿಕ ಅಂತ ಸಿನಿಮಾ ಮಾಡಲು ಹೋಗಿದ್ದ. ಇಂದಿಗೂ ಆ ಚಿತ್ರಕ್ಕೆ ಹಣ ಹಾಕಿದವರು ಬೀದಿಪಾಲಾಗಿದ್ದಾರೆ. ಚನ್ನಪಟ್ಟಣದ ನಮ್ಮ ಸಂಬಂಧ ಇವನು ಚಡ್ಡಿ ಹಾಕಿದ್ದನೋ ಇಲ್ಲವೋ, ಆಗಲೇ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣದ ಸಂಬಂಧ ಇತ್ತು. ಮುಖಾಮುಖಿ ಚರ್ಚೆಗೆ ನಾನು ಸಿದ್ದ. ಬರಲಿ ಯಾವ ವಿಚಾರ ಚರ್ಚೆ ಮಾಡ್ತಾನೆ ನೋಡುತ್ತೇನೆ ಎಂದು ಸಿಡಿದರು.

Share This Article
Leave a Comment

Leave a Reply

Your email address will not be published. Required fields are marked *