ಕೊಪ್ಪಳ: ನಗರದ ಗಂಗಾವತಿ ತಾಲೂಕಿನ ವಿವಿಧ ಕಡೆ ಇಸ್ಪೀಟ್ ಜೂಜಾಟ ನಡೆಯುತ್ತಿದ್ದು, ಈ ಬಗ್ಗೆ 2 ದಿನದ ಹಿಂದಷ್ಟೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸದನದಲ್ಲಿ ಚರ್ಚೆ ಮಾಡಿದ್ದರು.
ಆದರೂ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರವಲಯದಲ್ಲಿ ಇಸ್ಪೀಟ್ ಆಡುವ ದೃಶ್ಯ ವೈರಲ್ ಆಗಿದೆ. ಇನ್ನು ವಾನಭದ್ರಪ್ಪ ದೇವಸ್ಥಾನ, ಆರಾಳ ಮಲಕನಮರಡಿ ಗುಡ್ಡ, ಹೇರೂರು ಕೆಸರಹಟ್ಟಿ ಕಾಲುವೆ, ಕೊರಂಕ್ಯಾಂಪ್ ಕಡೇಬಾಗಿಲು, ವಿದ್ಯಾನಗರ ಚಿಕ್ಕಜಂತಕಲ್, ವೆಂಕಟಗಿರಿ ಗುಡ್ಡದ ಸೇರಿ ಹತ್ತಾರು ಕಡೆ ದಿನವೂ ರಾತ್ರಿ ಅಂದರ್ ಬಾಹರ್ ಜೂಜಾಟ ನಡೆಯುತ್ತದೆ. ಇದನ್ನೂ ಓದಿ: ಸದನ ಬೀಗರ ಮನೆಯಲ್ಲ – ಸಚಿವರ ಗೈರಿಗೆ ಸಭಾಪತಿಗಳು ಗರಂ
Advertisement
Advertisement
ಪ್ರತಿಯೊಬ್ಬ ಜೂಜುಕೋರರಿಗೆ 2 ಸಾವಿರ ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ನೆರೆಯ ಹೊಸಪೇಟೆ, ಸಿಂಧನೂರು, ಬಳ್ಳಾರಿ ಮತ್ತು ಆಂಧ್ರ ಪ್ರದೇಶದಿಂದ ಜೂಜುಕೋರರು ಬರುತ್ತಾರೆ. ಗಂಗಾವತಿ ಗ್ರಾಮೀಣ ಠಾಣೆ ಪಿಐ ಉದಯ ರವಿ ಅವರೇ ಕಿಂಗ್‍ಪಿನ್ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಇದನ್ನೂ ಓದಿ: ಸಭಾಪತಿ ಹೊರಟ್ಟಿ ವಿರುದ್ಧ FIR ದಾಖಲಿಸಿದ್ದ ಇನ್ಸ್‌ಪೆಕ್ಟರ್ ಅಮಾನತು
Advertisement
Advertisement
ಅಂದರ್ ಬಾಹರ್ ದಂಧೆಕೋರರ ಜೊತೆ ಪೊಲೀಸ್ ಅಧಿಕಾರಿ ನಂಟು ಇದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಕೂಡ ಆರೋಪಿಸಿದ್ದರು. ಈ ಬಗ್ಗೆ ಕ್ರಮಕ್ಕೆ ಎಸ್ಪಿ ಮುಂದಾಗುತ್ತಾರೆಯೇ ಕಾದು ನೋಡಬೇಕಿದೆ.