ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಥವಾ ಡಿ.ಕೆ.ಶಿವಕುಮಾರ್ ಅವರ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಪ್ರಶ್ನಿಸಿದರು.
ನಗರದಲ್ಲಿ ಮಾತನಾಡಿದ ಅವರು, ಗುಂಡಿ ಮುಚ್ಚುವ ಡೆಡ್‌ಲೈನ್ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಕೇಳಿ ಎಂದಿದ್ದು ಸಿಎಂ ಅವರ ಬೇಜವಾಬ್ದಾರಿ ಹೇಳಿಕೆ ಎಂಬುದು ನನ್ನ ಅಭಿಪ್ರಾಯ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವ್ರಾ? ಅಥವಾ ಶಿವಕುಮಾರ್ ಅವ್ರಾ? ಮುಖ್ಯಮಂತ್ರಿಗಳ ಸಭೆ ಮಾಡಿ ಒಂದು ಡೆಡ್‌ಲೈನ್ ಕೊಟ್ರು. ಗುಂಡಿ ಮುಚ್ಚಲು ಕಾಲದ ಗಡುವು ಕೊಟ್ಟು ಮುಚ್ಚಿಲ್ಲ. ಮುಖ್ಯಮಂತ್ರಿ ಮಾತಿಗೂ ಸಹ ಎಷ್ಟು ಬೆಲೆ ಅಧಿಕಾರಿಗಳು ಕೋಡ್ತಾ ಇದ್ದಾರೆ ಗೊತ್ತಾಗ್ತಿದೆ. ರಾಜ್ಯದ ಸಿಎಂ ಆಗಿ ನಿರ್ವಹಣೆ ಮಾಡೋಕೆ ಅಸಮರ್ಥರಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ನ.21 ಕ್ಕೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರಂತೆ: ಪ್ರಶ್ನೆಗೆ ಸಿದ್ದರಾಮಯ್ಯ ಗರಂ
ನ.21 ಕ್ಕೆ ಡಿಕೆಶಿ ಪದಗ್ರಹಣ ಸುದ್ದಿ ಬಗ್ಗೆ ಮಾತನಾಡಿ, ಅದು ಅವರ ಪಕ್ಷದಲ್ಲಿನ ತೀರ್ಮಾನಗಳು. ಅವರಿಗೆ ಬಿಟ್ಟಿರೋದು ನಾನು ಈ ವಿಷಯದಲ್ಲಿ ನಾನು ಮಾತಾಡೋದಿಲ್ಲ. ಮಾತಾಡಿದರೆ ಸಣ್ಣತನವಾಗುತ್ತೆ. ಅವರ ಪಕ್ಷದಲ್ಲಿ ಏನು ತೀರ್ಮಾನ ಮಾಡ್ತಾರೋ ಮಾಡಲಿ ಎಂದು ತಿಳಿಸಿದರು.
ಜನರ ಮನೆ ಮುಂದೆ ಕಸ ಹಾಕಿರೋದು ನೋಡ್ದೆ. ಅವ್ರು ಕಸ ಹಾಕಿದ್ರು ಅಂತ ಬೀದಿಯಲ್ಲಿ ಇರೋ ಕಸ ತಂದು ಅವ್ರ ಮನೆ ಮುಂದೆ ಹಾಕಿದ್ರೆ ಅರ್ಥ ಇದೀಯಾ? ಅದರಿಂದ ಏನು ಸಾಧನೆ ಮಾಡ್ತಾರೆ? ಇಲ್ಲಿ ಸರ್ಕಾರ ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ಮಾಡುವ ಜವಾಬ್ದಾರಿ ಇದೆ. ವೈಜ್ಞಾನಿಕ ತೀರ್ಮಾನ ಮಾಡದೇ ಈ ರೀತಿ ಮಾಡೋದು ಸರಿಯಲ್ಲ. ಅವರಿಗೆ ಏನ್ ಆಗಿದೆ ಅಂದ್ರೆ ಕಸ ವಿಲೇವಾರಿ ಮಾಡೋಕೆ ಜಾಗ ಇಲ್ಲ. ಮನೆಗಳ ಮುಂದೆ ಹಾಕಿದ್ರೆ ಅವರ ಮನೆಯವರು ಎಲ್ಲಾದ್ರು ಹಾಕಬಹುದು ಅಂತ. ಸರ್ಕಾರ ಹೊಸ ಕಾರ್ಯಕ್ರಮ ಮಾಡಿದೆ ವ್ಯಂಗ್ಯವಾಡಿದರು.
ಜಾತಿಗಣತಿ ಸಮೀಕ್ಷೆ ನಡೆಸಿ ಏನು ಸಾಧನೆ ಮಾಡ್ತಾರೆ ಅದರಲ್ಲಿ. ಎಷ್ಟರಮಟ್ಟಿಗೆ ಸಮೀಕ್ಷೆ ನಡೆಸಿದ್ದಾರೆ. ಎಷ್ಟರಮಟ್ಟಿಗೆ ಜನ ಆ ಸಮೀಕ್ಷೆಗೆ ಸ್ಪಂದಿಸಿದ್ದಾರೆ. ಇಲ್ಲಿ ಇರೋದು ಸರ್ಕಾರದ ಕಾರ್ಯಕ್ರಮ. ಯಾರು ಬಡತನದಲ್ಲಿ ಇದ್ದಾರೆ. ಇಲ್ಲಿ ಜಾತಿ ಪ್ರಶ್ನೆ ಇಲ್ಲ. ಎಲ್ಲ ಜಾತಿಯಲ್ಲಿ ಬಡವರು ಇದ್ದಾರೆ. ಮೊದಲು ಶಿಕ್ಷಣ ಕೊಡುವ ಕೆಲಸ ಮಾಡಬೇಕು. ಇವತ್ತು 63 ಸಾವಿರ ಶಿಕ್ಷಕರ ಕೊರತೆ ಇದೆ ಅಂತ ನೋಡ್ದೆ. ನಿಮ್ಮ ಬೆಂಗಳೂರು ವಿವಿಯಲ್ಲಿ 150 ಶಿಕ್ಷಕರನ್ನ ಇಟ್ಟುಕೊಂಡಿದ್ದಾರೆ. ಇಂತಹ ಸರ್ಕಾರ ಯಾವ ಸಮೀಕ್ಷೆ ಮಾಡಿ ಏನು ಸಾಧನೆ ಮಾಡುತ್ತೆ. ಸರ್ಕಾರದಲ್ಲಿ ಹಲವಾರು ಲೋಪಗಳು ಇವೆ. ಅವರ ಹಿಡನ್ ಅಜೆಂಡಾಗಳಿಗೆ ಮಾಡಿರುವ ಸಮೀಕ್ಷೆ ಅದು. ನಾಡಿನ ಜನತೆ ಉದ್ಧಾರಕ್ಕೆ ಮಾಡಿರೋ ಸಮೀಕ್ಷೆ ಅಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನೇ ಬಿಟ್ಟುಕೊಟ್ಟರು – ನವೆಂಬರ್ ಕ್ರಾಂತಿ ಹೊತ್ತಲ್ಲೇ ಡಿಕೆಶಿ ತ್ಯಾಗದ ಮಾತು
ನೋಡೋಣ ಈಗ ಟನಲ್ ಕೆಲಸ ಪ್ರಾರಂಭ ಮಾಡ್ತಾರೆ. ನುರಿತ ತಜ್ಞರ ಅಭಿಪ್ರಾಯ ಪಡೆದು ಕೆಲಸ ಆರಂಭ ಮಾಡ್ತಾರೆ ನೋಡೋಣ. ಜನರಿಗೆ ಸಮಸ್ಯೆ ಬಗೆಹರಿಯಬೇಕು. ಇಲ್ಲಿ ಟನಲ್ ರೋಡ್ ಮಾಡ್ತಾರೋ ಎಲಿವೆಟೆಡ್ ರಸ್ತೆ ಮಾಡ್ತಿರೋ ಅದು ನಿಮಗೆ ಬಿಟ್ಟಿರೋದು. ಜನರು ಪ್ರತಿನಿತ್ಯ ಜನಪ್ರತಿನಿಧಿಗಳು ಮತ್ತು ಸರ್ಕಾರವನ್ನ ಗಮನಿಸ್ತಾರೆ. ಜನರ ಬದುಕಿನಲ್ಲಿ ಚೆಲ್ಲಾಟ ಆಡಬೇಡಿ ಎಚ್ಚರಿಸಿದರು.
ಅವಕಾಶ ಸಿಕ್ಕರೆ ಚುನಾವಣೆಗೆ ಸಿದ್ಧ ಎಂಬ ಆರ್.ಅಶೋಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವಕಾಶ ಸಿಕ್ಕರೆ ಚುನಾವಣೆಗೆ ಹೋಗಲೇ ಬೇಕಲ್ಲಾ? ಸರ್ಕಾರ ಬಿದ್ದು ಹೋದರೆ ಚುನಾವಣೆಗೆ ಹೋಗಲೇಬೇಕಲ್ಲ ಎಲ್ಲರೂ. ನಾವು ರೆಡಿಯಾಗಲೇಬೇಕಲ್ಲ ಅದು ನಮ್ಮ ಜವಾಬ್ದಾರಿ. ಎಲ್ಲ ಪಕ್ಷಗಳು ಚುನಾವಣೆಯ ವಾತಾವರಣ ಬಂದಾಗ ರೆಡಿ ಆಗಲೇಬೇಕು. ನಾನು ಮಧ್ಯಂತರ ಚುನಾವಣೆ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಜನ 136 ಸೀಟ್ ಕೊಟ್ಟಿದ್ದಾರೆ. ಸಂಪೂರ್ಣ ಅವಧಿ ಮುಗಿಸಿಕೊಳ್ಳಲು ಅವರಲ್ಲಿರುವ ಸಮಸ್ಯೆ ಬಗೆಹರಿಸಿಕೊಂಡು ಕೆಲಸ ಮಾಡಲಿ. ಸೋಮವಾರ ನಿವೃತ್ತ ಐಎಎಸ್ ಅಧಿಕಾರಿಯ ಸರ್ವೆ ರಿಪೋರ್ಟ್ ಒಂದನ್ನು ನೋಡಿದೆ. ಕೊಟ್ಟಿದ್ದ 138 ಭರವಸೆಗಳಲ್ಲಿ ಹಲವು ಭರವಸೆಗಳು ಈಡೇರಿಲ್ಲ ಅಂತ ವರದಿ ನೋಡಿದ್ದೇನೆ. ಕೇವಲ ಘೋಷಣೆಗೆ ಸೀಮಿತವಾಗದೆ ಜನರ ಸಮಸ್ಯೆಗಳಿಗೆ ಪರಿಹಾರ ತರಲಿ ಎಂದು ಆಗ್ರಹಿಸಿದರು.
ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಪ್ನ ಬುಕ್‌ಹೌಸ್‌ನಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಕನ್ನಡ ಬರಹಗಾರರ ಸಮ್ಮಿಲನ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದೆ ಸುಧಾಮೂರ್ತಿ, ನಟ ಅನಿರುದ್ಧ, ನಟಿ ಅಂಕಿತಾ ಅಮರ್, ಜಾಣಗೇರೆ ವೆಂಕಟೇಶ್ ರಾಮಯ್ಯ ಉಪಸ್ಥಿತರಿದ್ದರು.


