ಬೆಂಗಳೂರು: ಕೇಂದ್ರ ಸರ್ಕಾರ ಈಗ ಕೊಟ್ಟಿರುವ ಪರಿಹಾರವೇ ಸಾಕು ಬಿಡಿ ಎಂದು ಕುಮಾರಸ್ವಾಮಿ (H.D.Kumaraswamy) ಹೇಳಿದ್ದಾರೆ. ನೀವೊಬ್ಬ ನಾಡದ್ರೋಹಿ ಎಂದು ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡಿದ್ದೇವೆ ಎಂಬ ಪತ್ರ ಬಂದಿದೆ. ಆದರೆ ಖಾತೆಗೆ ಯಾವಾಗ ಜಮೆ ಆಗುತ್ತೋ ಗೊತ್ತಿಲ್ಲ. ಅವರು ಮಾಡಲಿ ಬಿಡಲಿ, ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಇದು ರಾಜಕೀಯ ವಿಚಾರ ಅಲ್ಲ. ರಾಜ್ಯಕ್ಕೆ ಆಗುತ್ತಿರುವ ದೊಡ್ಡ ದ್ರೋಹದ ಬಗ್ಗೆ ಮಾತನಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಬರ ಪರಿಹಾರ; ಕೇಂದ್ರದ ವಿರುದ್ಧ ಭಾನುವಾರ ಕಾಂಗ್ರೆಸ್ ಪ್ರತಿಭಟನೆ: ಡಿಕೆಶಿ
ಇದರ ಮಧ್ಯೆ ಕೆಲವು ರಾಜಕಾರಣಿಗಳು ಹೇಳ್ತಾರೆ. ಸಾಕು ಬಿಡಿ ಈಗ ಕೊಟ್ಟಿರೋದು ಅಂತಾರೆ. ಅದೇನು ಇವರ ಮನೆ ಆಸ್ತಿನಾ? ದೇಶಕ್ಕಲ್ಲ, ರಾಜ್ಯಕ್ಕೆ ಇವರು ದ್ರೋಹಿಗಳು. ಕುಮಾರಸ್ವಾಮಿ ಹೇಳಿದ್ದರಂತೆ, ಸಾಕು ಬಿಡಿ ಕೊಟ್ಟಿರುವುದು ಅಂತಾ. ನೀನೊಬ್ಬ ನಾಡದ್ರೋಹಿ ಎಂದು ವಾಗ್ದಾಳಿ ನಡೆಸಿದರು.
ಈಗ ಕುಮಾರಸ್ವಾಮಿ ಏನೇನೋ ಮಾತನಾಡ್ತಿದ್ದಾರೆ. ಒಂದೇ ದಿನ ಕೈಹಿಡಿದು ಬರೆಸ್ತಾರಂತೆ. ಕುಮಾರಸ್ವಾಮಿ ಮೊದಲೇ ಮಾಡಬಹುದಿತ್ತಲ್ಲ? ನಮಗೆ ವೋಟು ಕೊಡಿ ನಾವು ಮಾಡಿಸ್ತೇವೆ ಅಂತಾರೆ. ಅಧಿಕಾರ ಕೊಟ್ರೆ ಮಾತ್ರ ಇವರಿಗೆ ರಾಜ್ಯದ ಹಿತ. ಅಧಿಕಾರ ಇಲ್ಲದಿದ್ರೆ ಯಾವ ಹಿತವಿಲ್ಲ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಲೋಕಸಭಾ ಚುನಾವಣೆ: ಹನೂರು ಭಾಗದ ಒಂದು ಮತಗಟ್ಟೆಗೆ ಏ.29 ರಂದು ಮರು ಮತದಾನ