– ವ್ಯವಸ್ಥೆಯಲ್ಲಿ ನೀವು ಮಾಡಿದ ಕರ್ಮ ತೊಳೆಯಲು ಸಾಧ್ಯವಿಲ್ಲ: ಸರ್ಕಾರದ ವಿರುದ್ಧ ಗುಡುಗು
– ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆಗೆ ಹೋಗಬೇಡಿ: ಸಿಎಂ ಸಿದ್ದರಾಮಯ್ಯಗೆ ಸಲಹೆ
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಆಗ್ರಹಿಸಿದ್ದಾರೆ. ಸಿಎಂ ಮನೆಯಲ್ಲಿ ಕೂತು ಡಿಸಿಗಳಿಗೆ ಹೇಳಿದ್ರೆ ಕೆಲಸ ಮಾಡ್ತಾರಾ ಎಂದು ಸಿದ್ದರಾಮಯ್ಯ (Siddaramaiah) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೆಚ್‌ಡಿಕೆ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ಲೋಪಗಳ ಬಗ್ಗೆ ಚರ್ಚೆ ಮಾಡಲು ಸುದ್ದಿಗೋಷ್ಠಿ ಕರೆದಿದ್ದೇನೆ. ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ನೋಡಿದ್ದೀರಿ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ ಪ್ರಾರಂಭವಾಯ್ತು. ಹಲವಾರು ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ರೈತರು ಸೇರಿ ಎಲ್ಲರೂ ಸಂತೋಷದಲ್ಲಿದ್ದರು. ಕೃಷಿ ಚಟುವಟಿಕೆಗಳು ಆರಂಭವಾಗಿದ್ದವು, ಉತ್ತಮ ಬೆಳೆ ನಿರೀಕ್ಷೆ ಇತ್ತು. ಈಗ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿ, ಕಾರವಾರ, ಚಿಕ್ಕಮಗಳೂರು ಕಡೆ ಮೊದಲು ಪ್ರವಾಹ ಆಯ್ತು. ಈಗ ಹೈದ್ರಾಬಾದ್, ಮುಂಬೈ ಕರ್ನಾಟಕದಲ್ಲಿ ನಿರೀಕ್ಷೆ ಮೀರಿ ಮಳೆಯಾಗುತ್ತಿದೆ. ಹಲವಾರು ಹಳ್ಳಿಗಳು ಜಲಾವೃತವಾಗಿವೆ. ಆರು ಜಿಲ್ಲೆಗಳ ಅಧಿಕಾರಿಗಳ ಜೊತೆಗೆ ಪರಿಸ್ಥಿತಿ ಚರ್ಚೆ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ನಾಶವಾಗಿದೆ. ಭತ್ತ, ಹತ್ತಿ, ತೊಗರಿ ಬೆಳೆ ನಾಶವಾಗಿದೆ. ರೈತ ಚೇತರಿಸಿಕೊಳ್ಳಲು ಆಗುವುದಿಲ್ಲ. ಕಲ್ಯಾಣ ಕರ್ನಾಟಕದ ರೈತರು ನೋವಿನಲ್ಲಿದ್ದಾರೆ. ಮನೆಗಳಿಗೂ ಸಾಕಷ್ಟು ಹಾನಿಯಾಗಿದೆ, 12 ಗೋ ಶಾಲೆಗಳು ಮುಳುಗಿ ಹೋಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ವರುಣಾರ್ಭಟ – ನಿರಂತರ ಮಳೆಗೆ ಕಲ್ಯಾಣ ಕರ್ನಾಟಕ ತತ್ತರ
ಮಂತ್ರಿಗಳು ಕಾಟಾಚಾರಕ್ಕೆ ಹೋಗಿದ್ದಾರೋ ಬಿಟ್ಟಿದ್ದಾರೋ ನಾನು ಅದನ್ನು ಮಾತನಾಡುವುದಿಲ್ಲ. 36 ಜನರು ಮಂತ್ರಿಗಳಿದ್ದಾರೆ, ಎಲ್ಲೆಲ್ಲಿ ಭೇಟಿ ಕೊಟ್ಟಿದ್ದಾರೆ. ಸಿಎಂ ಬೆಂಗಳೂರಿನಲ್ಲಿ ಕೂತು ಡಿಸಿಗಳಿಗೆ ನಿರ್ದೇಶನ ನೀಡಿದ್ರೆ ಅವರು ಕೆಲಸ ಮಾಡ್ತಾರ? ಚಿಕ್ಕಮಗಳೂರು ಭಾಗದಲ್ಲಿ ಅಡಿಕೆ ನಾಶ ಆಯ್ತು, ಮನೆ ಕುಸಿದವು. ಪ್ರಾಣ ಹೋದ ವ್ಯಕ್ತಿಗೆ ಪರಿಹಾರ ಕೊಟ್ಟಿದ್ದು ಬಿಟ್ಟು ಉಳಿದವರಿಗೆ ಸರ್ಕಾರ ಏನು ನೆರವು ನೀಡಿದೆ ಎಂದು ಪ್ರಶ್ನಿಸಿದ್ದಾರೆ.
ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮ ಆಗಬೇಕಿತ್ತು. ಸಮೀಕ್ಷೆ ಪೂರ್ಣಗೊಂಡಿಲ್ಲ, ರೈತರಿಗೆ ಬೆಳೆ ನಾಶದ ಮಾಹಿತಿ ಕೇಳುತ್ತಿದ್ದಾರಂತೆ. ಕೆಲವು ರೈತರು ನನಗೆ ದೂರವಾಣಿ ಮೂಲಕ ಹೇಳುತ್ತಿದ್ದಾರೆ. ನನಗೆ ಆರೋಗ್ಯದ ಸಮಸ್ಯೆ ಇಲ್ಲದಿದ್ದರೆ ಅಲ್ಲೇ ಒಂದು ವಾರ ಕ್ಯಾಂಪ್ ಮಾಡುವೆ. ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಸನ್ನಿವೇಶದಲ್ಲ ಹೇಗೆ ನಿರ್ವಹಿಸಬೇಕು ಕಲಿತಿದ್ದೇನೆ. ಹಿಂದೆ ಸಿಎಂ ಆಗಿದ್ದಾಗ ಪರಿಹಾರ ಕೊಟ್ಟು, ಮನೆಗೆ ಕಟ್ಟಿಸಿಕೊಟ್ಟೆ, ಮನೆ ಕಟ್ಟುವವರೆಗೂ ಬಾಡಿಗೆ ನೀಡಿದೆ. ನಾವು ಈಗ ಮಾತನಾಡಿದರೆ ನೀವು ಏನ್ ಮಾಡಿದ್ರಿ ಅಂತಾ ಕೇಳ್ತಾರೆ. ನೀವು ಪದೇ ಪದೇ ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆಗೆ ಹೊಗಬೇಡಿ. ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ನಂಬಿಕೆ ಇದೆ. ಸರಿಯಾದ ರೀತಿಯಲ್ಲಿ ಸೌಜನ್ಯಯುತವಾಗಿ ಬಂದು ನೆರವು ಕೇಳಬೇಕು. ಅಲ್ಲಿ ಬೆಂಗಳೂರಿನಲ್ಲಿ ಕೂತು ಅನ್ಯಾಯ ಆಗಿದೆ ಅಂದರೆ. ನಾನು ಸಿಎಂ ಆಗಿದ್ದಾಗ ಮನಮೋಹನ್ ಸಿಂಗ್ ಸರ್ಕಾರ ಇತ್ತು. ನಾನು ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆ ಮಾಡಲಿಲ್ಲ. ಕೊಡಗಿನಲ್ಲಿ ಅನಾಹುತ ಆದಾಗ ಮೋದಿ ಕರೆ ಮಾಡಿದ್ದರು. ಈ ಬಾಂಧವ್ಯ ರಾಜ್ಯ ಸರ್ಕಾರ ಉಳಿಸಿಕೊಂಡು ಹೋಗಬೇಕು. ಈಗಲೂ ಒರಟು ಮಾತುಗಳನ್ನು ಬಿಡಬೇಕು. ರಾಜ್ಯದ ಒಬ್ಬ ಮಂತ್ರಿ ಈ ಸಂಬಂಧ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿದ್ದಾರಾ, ಯಾವುದಾದರೂ ನಿಯೋಗ ಬಂದಿದ್ಯಾ? ಅದ್ಯಾವೋದು ಜಾತಿ ಗಣತಿ ಅಂತೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಮಧ್ಯದಲ್ಲೇ ಲಾಕ್
ಬೇಕಾದಷ್ಟು ಸಮಸ್ಯೆ ಇದಾವೆ, ಈಗ ಹೊಸ ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ಎರಡು ವರ್ಷ ಸಿಎಂ ಗಾದಿ ಬಗ್ಗೆ ಚರ್ಚೆ ನಡೆಯಿತು. ಎರಡು ಸಾವಿರ ಕೊಟ್ಟ ತಕ್ಷಣ ಆ ಕುಟುಂಬಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾ? ನಿನ್ನೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವತಿ ಮೃತಪಟ್ಟಳು. ನಿನ್ಮೆ ಸಿಎಂ ಬೆಂಗಳೂರು ಉಸ್ತುವಾರಿ ಬಿಟ್ಟು ನಗರ ಪ್ರದರ್ಕ್ಷಣೆ ಹಾಕಿದರು. ಸಿಎಂ ಪರಿಶೀಲನೆ ಬೆನ್ನಲೆ ರಸ್ತೆ ಕಿತ್ತು ಬಂದ ಉದಾಹರಣೆ ಇದೆ. ಇದು ಆಡಳಿತವಾ, ಅಧಿಕಾರಿಗಳಿಗೆ ಭಯ ಇದಿಯಾ ಎಂದು ಕೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಗಂಜಿ ಕೇಂದ್ರ ತೆಗೆದು ಎರಡು ಊಟ ಹಾಕಿದ್ರಾ ಸಾಕಾ? ಖಾಲಿ ಕೈಯಲ್ಲಿ ಮನೆಯಲ್ಲಿ ಹೋಗಿ ಅವರು ಏನ್ ಮಾಡಬೇಕು. ಪರಿಹಾರ ಏನ್ ಕೊಡಬೇಕು ಅಂದುಕೊಂಡಿದ್ದೀರಿ. ಪಕ್ಕದ ಆಂಧ್ರದಲ್ಲಿ ಈರುಳ್ಳಿ ಬೆಳೆ ನಾಶ ಬೆನ್ನಲೆ ಪರಿಹಾರ ನೀಡಲಾಯಿತು. ಅಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಿ ಪರಿಹಾರ ಕೊಡಿಸಲಾಯಿತು. ಗ್ಯಾರಂಟಿ ಕೊಟ್ಟು ಖಜಾನೆ ಖಾಲಿಯಾಗಿದೆ ಎಂದು ನಾನು ಹೇಳಲ್ಲ. ಈಗ ಮೈಸೂರ್‌ಗೆ ಬಸ್ ಪ್ರಯಾಣದ ದರ ಏರಿಕೆ ಮಾಡಿದ್ದೀರಿ. ಬೆಲೆ ಏರಿಕೆಯಲ್ಲಿ ಖಾಸಗಿ ಬಸ್‌ಗಳಗೆ ಪೈಪೊಟಿ ನಡೆಸಿದೆ ಸರ್ಕಾರ. ಯಾವ ಸಚಿವರು ಪ್ರವಾಹ ಪೀಡಿತ ಸ್ಥಳಕ್ಕೆ ಹೋಗಿಲ್ಲ, ಇದ್ಯಾವ ರೀತಿಯ ಸರ್ಕಾರ ಸಿದ್ದರಾಮಯ್ಯ ಅವರೇ ಜನರು ಹೈದ್ರಾಬಾದ್ ಕರ್ನಾಟಕ ಪರಿಸ್ಥಿತಿಯಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಬೆಂಗಳೂರು ಮೈಸೂರು ರೀತಿ ಕಲಬುರಗಿ ಆದರೆ ಸಾಕು ಎಂದು ಖರ್ಗೆ ಹೇಳ್ತಾರೆ. ಅವರ ಮಂತ್ರಿ ಇದ್ದರು, ಮಗ ಮಂತ್ರಿ ಇದಾರೆ ಏನ್ ಮಾಡಿದರು ಎಂದು ಕೇಳಿದ್ದಾರೆ.
ನಾನು ಭತ್ತ ಬೆಳೆಯಲು ಪ್ರೊತ್ಸಾಹ ಧನ ನೀಡುತ್ತಿದ್ದೆ, ಆ ಯೋಜನೆ ನಿಲ್ಲಿಸಿದ್ದೀರಿ. ಹತ್ತು ಲಕ್ಷ ಸಾಲ ನೀಡುವ ಭರವಸೆ ನೀಡಿದ್ದೀರಿ, ಎಲ್ಲಿ ಸಾಲ ಕೊಟ್ಟಿದ್ದೀರಿ? ಎಷ್ಟು ಪರ್ಸೆಂಟ್ ರೈತರಿಗೆ ಸಾಲ ನೀಡಿದ್ದೀರಿ? 37% ಇದ್ದಿದ್ದು 17% ಗೆ ಸಾಲ ನೀಡುವುದು ಇಳಿಕೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಎರಡು ದಿನದ ಹಿಂದೆ ನಾನೇ ಹೋಗಬೇಕು ಎಂದು ಮನಸ್ಸು ಮಾಡಿದೆ. ಇನ್ನು ಮಳೆ ಇದೆ, ಬರಬೇಡಿ ಎಂದು ಡಿಸಿ ಹೇಳಿದರು. ಮನಸ್ಸು ತಡೆಯದೇ ಫೋನ್ ಮಾಡಿದ್ದೆ. ಡಿಸಿಗಳು ಬೇಡ ಅಂದ್ರು ಅದಕ್ಕೆ ಹೋಗಲಿಲ್ಲ. ಏರಿಯಲ್ ಸರ್ವೆ ಮಾಡಿ, ಜಾತಿ ಸಮೀಕ್ಷೆ ಬಗ್ಗೆ ಮಾತನಾಡಿದ್ರೆ ರೈತರ ಕಥೆ ಏನು? ಜಾತಿ ಸಮೀಕ್ಷೆ ಮಾತನಾಡ್ತಾ ಓಡಾಡುತ್ತಿದ್ದಾರೆ. ಸೋಮಾರಿತನ ಬಿಟ್ಟು ಕೂಡಲೇ ಸಿಎಂ ಪರಿಹಾರ ನೀಡುವುದು ಆರಂಭಿಸಬೇಕು. ಗಂಜಿ ಕೇಂದ್ರದಲ್ಲಿ ಸರಿಯಾಗಿ ಊಟನೂ ಹಾಕ್ತಿಲ್ಲ, ಹೊದಿಕೆ ಕೊಡ್ತಿಲ್ಲ. ಐದಾರು ಜಿಲ್ಲೆಗಳಿಗೆ ತಲಾ ಇಬ್ಬರು ಮಂತ್ರಿಗಳನ್ನು ಹಾಕಿ. ಎಸಿ ರೂಂ ಬಿಟ್ಟು, ಅಲ್ಲಿ ಹೋಗಿ ಕ್ಯಾಂಪ್ ಮಾಡ್ಲಿ ಎಂದು ಸವಾಲು ಹಾಕಿದರು.
ಮಹಾರಾಷ್ಟ್ರದಿಂದ ಹೆಚ್ಚು ನೀರು ಬಿಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗುತ್ತಿದೆ. ಸುಮಾರು 8.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗದೆ. ನಾನು ಸಿಎಂ ಆಗಿದ್ದಾಗ ಈ ವಿಷಯ ಗೊತ್ತಿರಲಿಲ್ಲ. ನಾನು ನೀರಾವರಿ ಮಂತ್ರಿಯೂ ಆಗಿರಲಿಲ್ಲ. ನಮ್ಮ ದಮ್ ಆಮೇಲೆ ನೋಡೊಣ. ದಮ್ಮು ತಾಕತ್ತಿನ ಬಗ್ಗೆ ಮಾತನಾಡುವವರಿಗೆ ಏನಾಗಿದೆ. ದಿನ ಬೆಳಗ್ಗೆ ಕೇಂದ್ರ ಸರ್ಕಾರ ಬೈದಾಡಿಕೊಂಡು ಓಡಾದ್ರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವರು ದಿನಾ ಕೇಂದ್ರ ಸರ್ಕಾರ ಬೈದರೆ ನಾವು ಇಲ್ಲಿ ಮಾತನಾಡುವುದು ಹೇಗೆ? ಮೇಕೆದಾಟು ಬಗ್ಗೆ ಅವರು ಏನ್ ಮಾಡಿದ್ರು. ಎತ್ತಿನಹೊಳೆ ಯೋಜನೆಗೆ ಭೂಮಿ ಪೂಜೆ ಮಾಡಿದ್ದು ಯಾರು? ಸಿದ್ದರಾಮಯ್ಯ ಮೂರು ವರ್ಷದಲ್ಲಿ ನೀರು ಕೊಡ್ತೀನಿ ಅಂದ್ರು. ಎತ್ತಿನಹೊಳೆಯಲ್ಲಿ ಯಾರು ಹಿಡ್ಕೊಂಡ್ರು. ಕೇಂದ್ರ ಸರ್ಕಾರದ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಕೆಲಸ ಮಾಡಿದೆ. ನಮ್ಮ ದಮ್ಮು ತಾಕತ್ತು ತೋರಿಸಲು ಬಂದಿಲ್ಲ. ನನ್ನ ಇಲಾಖೆ ಮೂಲಕ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ, ಹೆಚ್.ಎಂಟಿಗೂ ಹೊಸ ಕಾಯಕಲ್ಪ ಕೊಡುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೇನೆ. ರಸ್ತೆಯಲ್ಲಿ ನಿಂತು ಏನ್ ಮಾಡ್ತಿದ್ದೀರಿ ಅಂದ್ರೆ ಎಂದು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.
ಬಿಡದಿ ಟೌನ್ ಶಿಫ್ ಸಣ್ಣ ಪುಟ್ಟವರು ಮಾತನಾಡಿದ್ದಕ್ಕೆ ಉತ್ತರ ಕೊಡುವ ಅಗತ್ಯ ಇಲ್ಲ. 2006 ರಲ್ಲಿ ಐದು ಟೌನ್ ಶಿಫ್ ಮಾಡಲು ನಿರ್ಧರಿಸಿದ್ದೆ. ಮೊದಲ ಯೋಜನೆ ಬಿಡದಿಯಲ್ಲಿ ಮಾಡುವ ಉದ್ದೇಶ ಹೊಂದಿದ್ದೆ. ನಾಲ್ಕೈದು ಸಭೆ ಮಾಡಿದ್ದೆ, ರೈತರ ಜೊತೆಗೆ ಮಾತನಾಡಿದ್ದೇನೆ. ಡಿಕೆ ಶಿವಕುಮಾರ್ ಅವರಿಗೆ ಕೇಳಲು ಬಯಸುತ್ತೇನೆ. ಹೆಚ್.ಕೆ ಪಾಟೀಲ್ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ಮಾಡಿದ್ರಲ್ಲ ಅದನ್ನು ತೆಗೆದು ನೋಡಿ. ನಾನು ಬೆಂಗಳೂರು ಭೂಮಿ ಹೊಡೆಯಲು ಪ್ರಯತ್ನ ಮಾಡಿದರು ಅಂದ್ರು. ಈಗ ನನ್ನ ಕನಸಿನ ಯೋಜನೆ ಜಾರಿ ಮಾಡಲು ಹೊರಟಿದ್ದಾರೆ. ನೀವು ಭೂಮಿ ಹೊಡೆಯಲು ಯೋಜನೆ ರೂಪಿಸುತ್ತಿದ್ದೀರಾ. ಎರಡು ವರ್ಷದಲ್ಲಿ ಇದು ಸಾಧ್ಯವಾ? ಭೂಸ್ವಾಧೀನ ಪ್ರಕ್ರಿಯೆ ನಾನು ಮಾಡಿರಲಿಲ್ಲ. ರೈತರನ್ನು ಆರ್ಥಿಕವಾಗಿ ಉಳಿಸಿಕೊಳ್ಳಲು ಸ್ವಾಧೀನ ಮಾಡಿರಲಿಲ್ಲ. ನೀವು 2000-3000 ಎಕರೆ ಏನ್ ಮಾಡಿದ್ದೀರಿ ಗೊತ್ತಿದೆ. ವ್ಯವಸ್ಥೆಯಲ್ಲಿ ನೀವು ಮಾಡಿದ ಕರ್ಮ ತೊಳೆಯಲು ಸಾಧ್ಯವಿಲ್ಲ. ಜನರು ಐದು ವರ್ಷ ಸಮಯ ಕೊಟ್ಟರೆ, ಕರ್ನಾಟಕ ಲೂಟಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಹೆಚ್‌ಡಿಡಿ, ಹೆಚ್‌ಡಿಕೆ ಮುಗಿಸಲು ಈ ಸರ್ಕಾರ ಯಾವ ಪ್ರಯತ್ನ ಮಾಡ್ತಿದ್ದಾರೆ ಗೊತ್ತಿದೆ. ದೇವಸ್ಥಾನಕ್ಕೆ ಓಡಾಡಿ ಪೂಜೆ ಮಾಡ್ತರಲ್ಲ ಎದೆ ಮುಟ್ಟಿಕೊಂಡು ಹೇಳಲಿ. ಶಾಂತಿನಗರ ಸೊಸೈಟಿ ದಲಿತರಿಗೆ ಸೈಟ್ ಕೊಡಲು ಮಾಡಿದ್ದರು. ಬೇರೆ ಬೇರೆ ನಗರಗಳಲ್ಲಿ ಸೊಸೈಟಿಗಳ ಭೂಮಿ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರೌದ್ರರೂಪ ತಾಳಿದ ಭೀಮಾ ನದಿ – ಪ್ರವಾಹದಲ್ಲಿ ಸಿಲುಕಿದ್ದ 8 ಜನರ ರಕ್ಷಣೆ
ದುಡ್ಡಿಗೆ ಸರ್ಕಾರ ಸಾಲ ಮಾಡಬೇಕಿಲ್ಲ. ಬೆಂಗಳೂರಿನಲ್ಲೇ ಸಾಕಷ್ಟು ಸಂಪತ್ತು ಇದೆ. ಇಡೀ ರಾಜ್ಯ ಅಭಿವೃದ್ಧಿ ಮಾಡುವ ಶಕ್ತಿ ಬೆಂಗಳೂರಿಗೆ ಇದೆ. ಆದರೆ, ಇದನ್ನು ಕೆಲವೇ ಕೆಲವು ವ್ಯಕ್ತಿಗಳು ಲೂಟಿ ಮಾಡುತ್ತಿದ್ದಾರೆ. ಈಗ ಸುರಂಗ ಮಾಡುತ್ತೇನೆ ಅನ್ನುತ್ತಾರೆ. ನಾನು ಸಾಕಷ್ಟು ಕೆಲಸ ಮಾಡಿದೆ, ಪ್ರಚಾರ ಪಡೆಯಲಿಲ್ಲ. ವೈಮಾನಿಕ ಸಮೀಕ್ಷೆ ಮಾಡಿ ಕೇಂದ್ರದ ಕಡೆ ಬೊಟ್ಟು ಮಾಡಬೇಡಿ, ನಿಮ್ಮ ಜವಾಬ್ದಾರಿ ಏನು? ಲೋಕಸಭೆಯಲ್ಲಿ ಐದು ಸ್ಥಾನ ಕೊಟ್ಟಿದ್ದಾರೆ ಖುಣ ತೀರಿಸಿ. ಬಡವರ ಉದ್ಧಾರಕ್ಕೆ ಜಾತಿ ಜನಗಣತಿಯೇ ಬೇಕಾ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜಕೀಯ ತೆವಲಿಗೆ ಜಾತಿಗಣತಿ ಮಾಡಿ, ಜಾತಿ ಜಾತಿಗಳ ನಡುಗೆ ಸಂಘರ್ಷ ಏರ್ಪಡಿಸುತ್ತಿದ್ದಾರೆ. ತಕ್ಷಣ ಪರಿಹಾರ ನೀಡಬೇಕು. ಕುಣಿಗಲ್ ಅಲ್ಲ ಮಂಗಳೂರನ್ನು ಬೆಂಗಳೂರಿಗೆ ಸೇರಿಸ್ತಾರೆ. ಮಾಡೊ ಕೆಲಸ ಬಿಟ್ಟು ಅದನ್ನು ಸೇರಿಸ್ತೀನಿ, ತೆಗಿತೀನಿ ಅಂತಾ ಹೊರಟ್ಟಿದ್ದಾರೆ. ಅಲ್ಲಿ ಸಂಬಂಧಿ ಇದಾರಲ್ಲ ಅವರು ಒತ್ತಾಯ ಮಾಡಿರಬೇಕು. ನಾನು ನಿಮ್ಮ ಜೊತೆಗೆ ಲೂಟಿ ಹೊಡೆಯುತ್ತೇನೆ ಅಂದಿರಬೇಕು. ಬೆಂಗಳೂರು ಸೇರಿದರೆ ಭೂಮಿ ಬೆಲೆ ಬರುತ್ತಂತಲ್ಲ. ಅದಕ್ಕೆ ಬೆಂಗಳೂರಿಗೆ ಸೇರಿಸಲು ಹೊರಟಿರಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.