ಮಂಡ್ಯ: ಮಾಜಿ ಸಂಸದ ಶಿವರಾಮೇಗೌಡ ಪಕ್ಷದಿಂದ ಹೊರಹಾಕಲು ಸೂಚನೆ ಕೊಟ್ಟಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಮೇಗೌಡ ತಿದ್ದಿಕೊಳ್ಳುತ್ತಾರೆ ಎಂದು ಸುಮ್ಮನಿದ್ದೆ. ಪದೇ-ಪದೇ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇದೆ. ಅವರಿಲ್ಲದ ಸಮಯದಲ್ಲಿ ಇಂಥಹ ಪದ ಬಳಕೆಯನ್ನು ಮಾಡುವುದು ಸರಿಯಲ್ಲ, ದಿ. ಮಾದೇಗೌಡ ಅವರ ವಿರುದ್ಧವಾಗಿ ಶಿವರಾಮೇಗೌಡ ನೀಡಿರುವ ಹೇಳಿಕೆಗೆ ಕೆಂಡ ಕಾರಿದ್ದಾರೆ.
ನಾನು ರಾಷ್ಟ್ರೀಯ ನಾಯಕರ ಅನುಮತಿ ಪಡೆದು ಅವರನ್ನು ತಕ್ಷಣ ಪಕ್ಷದಿಂದ ಹೊರ ಹಾಕುವಂತೆ ಸೂಚನೆ ನೀಡಿದ್ದೇನೆ. ಮಾದೇಗೌಡರಂತಹ ಒಬ್ಬ ಹಿರಿಯ ನಾಯಕರ ಬಗ್ಗೆ ಅಷ್ಟು ಲಗುವಾಗಿ ಮಾತನಾಡಿದ್ದು, ಮತ್ತು ಅವರ ಬಗ್ಗೆ ಪದ ಬಳಕೆಯನ್ನು ಮಾಡಿದವರನ್ನು ನಮ್ಮ ಪಕ್ಷದಲ್ಲಿ ಇಟ್ಟುಕೊಳ್ಳುವುದು ಶೋಭೆ ತರುವುದಿಲ್ಲ. ಶಿವರಾಮೇಗೌಡ ಅವರ ಈ ನಡುವಳಿಕೆ ಪದೆ ಪದೆ ಮರುಕಳಿಸುತ್ತಿದೆ ಎಂದು ವಾಗ್ಧಾಳಿ ಮಾಡಿದ್ದಾರೆ. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ
ಹಣ ಇವರು ಒಬ್ಬರೆ ಕಂಡಿರುವಂತದ್ದಾ? ಮಾತನಾಡಿದ್ರೆ ಕೋಟಿಗಟ್ಟಲೆ ಹಣದ ಬಗ್ಗೆ ಚರ್ಚೆ ಮಾಡುತ್ತಾರೆ. ಚುನಾವಣೆಗೆ 30 ಕೋಟಿ ಹಣ ಖರ್ಚು ಮಡಿದ್ದೇನೆ ಅಂತಾ ಹೇಳುತ್ತಾರೆ. ಆ ಹಣವನ್ನು ಯಾರಿಗೆ ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ಸಾರ್ವಜನಿಕವಾಗಿ ಹೀಗೆಲ್ಲ ಮಾತನಾಡಿ ಪಕ್ಷದ ಗೌರವವನ್ನು ಹಾಳು ಮಾಡುತ್ತಿದ್ದಾರೆ. ತಕ್ಷಣ ಅವರಿಗೆ ನೋಟಿಸ್ ಕೊಟ್ಟು ಪಕ್ಷದಿಂದ ಹೊರ ಹಾಕಲು ನಮ್ಮ ಅಧ್ಯಕ್ಷರಿಗೆ ನಾನು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.