– ಎ. ಮಂಜು, ಪ್ರೀತಂಗೌಡ ಅವರಿಗೆ ಪ್ರಜ್ವಲ್ ತಿರುಗೇಟು
ಹಾಸನ: ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸುವುದು ದೇವೇಗೌಡರ ಹಕ್ಕು. ಈ ಕ್ಷೇತ್ರದಿಂದ ದೇವೇಗೌಡರೇ ನಮ್ಮ ಅಭ್ಯರ್ಥಿಯಾದ್ರೆ 3.5 ಲಕ್ಷ ಅಲ್ಲ, 5 ಲಕ್ಷ ಮತಗಳ ಅಂತರಿಂದ ಅವರನ್ನು ಗೆಲ್ಲಿಸುವ ಜವಬ್ದಾರಿ ನನ್ನದು ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಭರವಸೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ನಾನು ಬದ್ಧ. ದೇವೇಗೌಡ ಸಾಹೇಬ್ರು ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ನಿಜ. ಹಾಸನದಲ್ಲಿ ಸ್ಪರ್ಧೆ ಮಾಡುವುದು ದೇವೇಗೌಡರ ಹಕ್ಕು. ಕೊನೆಗೂ ಅವರೇ ನಿಲ್ಲಲಿ ಎಂದು ನಾನು ಬಯಸುತ್ತೇನೆ ಎಂದರು.
ಇದೇ ವೇಳೆ ಎ.ಮಂಜು ಅವರು ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ನಿಲ್ಲುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಬೇಕಾದ್ರೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಹಾಕಿಕೊಳ್ಳಲಿ ನಮಗೇನು. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಮ್ಮ ಪಕ್ಷದ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ನರೇಂದ್ರ ಮೋದಿಯವರೇ ದೇವೇಗೌಡರ ಬಗ್ಗೆ ಮಾತನಾಡುವುದಕ್ಕೆ ಯೋಚನೆ ಮಾಡುತ್ತಾರೆ. ಅಂತದ್ದರಲ್ಲಿ ಮೊದಲನೇ ಬಾರಿ ಶಾಸಕನಾಗಿರುವ ಪ್ರೀತಂ ಗೌಡ ಅವರು ದೇವೇಗೌಡರ ವಿರುದ್ಧ ಮಾತನಾಡುವ ಮೊದಲು ಅವರ ವ್ಯಕ್ತಿತ್ವ ಏನು, ಘನತೆಯೇನು ಅಂತ ತಿಳಿಯಬೇಕು. ನಂತರ ಮಾತನಾಡಬೇಕು. ಅದು ಅವನ ಸಂಸ್ಕೃತಿಯನ್ನು ತೋರಿಸುತ್ತದೆ. ಆತ ಪೊಳ್ಳು ಪೊಳ್ಳಾಗಿ ಮಾತನಾಡುತ್ತಾನೆ ಅಂತ ನಾನು ಅವನ ಬಗ್ಗೆ ಮಾತನಾಡಿದರೆ ನಾನೂ ಪೊಳ್ಳೆದ್ದು ಹೋಗುತ್ತೆನೆ. ಈಗ ತಾನೇ ಆತ ಹೊಸದಾಗಿ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಜನ ಎಲ್ಲವನ್ನು ನೋಡಿರುತ್ತಾರೆ ಎಂದು ಶಾಸಕ ಪ್ರೀತಂ ಗೌಡ ವಿರುದ್ಧ ಪ್ರಜ್ವಲ್ ಹರಿಹಾಯ್ದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv