ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರಿಗೆ ಇಂದು 85 ವರ್ಷದ ಹುಟ್ಟುಹಬ್ಬದ ಸಂಭ್ರಮ.
ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. “ಜೆಡಿ(ಎಸ್) ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ವಿರೋಧಪಕ್ಷದ ನಾಯಕರಾಗಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕೀರ್ತಿ ನಿಮ್ಮದು. ನಾಡಿನ ನೆಲ, ಜಲ, ಭಾಷೆ ಬಗೆಗಿನ ನಿಮ್ಮ ಬದ್ಧತೆ ನಮಗೆಲ್ಲರಿಗೂ ಸ್ಪೂರ್ತಿದಾಯಕ. ನೂರು ಕಾಲ ಆಯುಷ್ಯ- ಆರೋಗ್ಯ ನಿಮ್ಮದಾಗಲಿ ” ಎಂದು ಬರೆದು ಅವರು ಫೋಟೋ ಹಾಕಿ ವಿಶ್ ಮಾಡಿದ್ದಾರೆ.
Advertisement
ಗುರುವಾರ ಪಕ್ಷದ ವರಿಷ್ಠ ಎಚ್‍ಡಿ ದೇವೇಗೌಡರು, ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪುತ್ರ ಹೆಚ್‍ಡಿ ಕುಮಾರಸ್ವಾಮಿಯ ಶ್ರೇಯಸ್ಸು ಕೋರಿ ತಿರುಪತಿ ತಿಮ್ಮಪ್ಪನಿಗೆ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement
ದೇವೇಗೌಡರು ಮೇ 12, 1933 ರಲ್ಲಿ ಜನಿಸಿದ್ದು, ಇಂದಿಗೆ ಅವರಿಗೆ 85 ವರ್ಷವಾಗಿದೆ. ಮೂಲತಃ ಇವರು ಹಾಸನ ಜಿಲ್ಲೆಯವರಾಗಿರೋ ಇವರು ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿದ್ದಾರೆ. ಬಳಿಕ ಜನತಾ ದಳಕ್ಕೆ ರಾಜ್ಯ ಮಟ್ಟದಲ್ಲಿ ಅಧ್ಯಕ್ಷರಾದ ಇವರು 1994ರಲ್ಲಿ ಕರ್ನಾಟಕ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಂತರ 1996ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
Advertisement
ಜೆಡಿ(ಎಸ್) ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ವಿರೋಧಪಕ್ಷದ ನಾಯಕರಾಗಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕೀರ್ತಿ ನಿಮ್ಮದು. ನಾಡಿನ ನೆಲ,ಜಲ,ಭಾಷೆ ಬಗೆಗಿನ ನಿಮ್ಮ ಬದ್ಧತೆ ನಮಗೆಲ್ಲರಿಗೂ ಸ್ಪೂರ್ತಿದಾಯಕ. ನೂರು ಕಾಲ ಆಯುಷ್ಯ- ಆರೋಗ್ಯ ನಿಮ್ಮದಾಗಲಿ. pic.twitter.com/unSy5hhJH0
— Siddaramaiah (@siddaramaiah) May 18, 2018