ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಬಿರುಗಾಳಿಯೊಂದು ಎದ್ದಿದ್ದು, ಕಾಂಗ್ರೆಸ್ ಹೈಕಮಾಂಡ್‍ಗೆ ಮಾಜಿ ಪ್ರಧಾನಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ
ಎಐಸಿಸಿ ನಾಯಕ ಗುಲಾಂ ನಭೀ ಅಜಾದ್ ಜತೆ ದೇವೇಗೌಡರು ಮಾತುಕತೆ ನಡೆಸಿದ್ದು, ಈಗಾಗಲೇ ಗುಲಾಂ ನಭೀ ಅಜಾದ್ ಮೂಲಕ ದೇವೇಗೌಡರು ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ದಾರೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
Advertisement
ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣವಾಗಿದ್ದಾರೆ. ಆದ್ದರಿಂದ ಅವರಿಗೆ ಕಡಿವಾಣ ಹಾಕಬೇಕು. ಸಿದ್ದರಾಮಯ್ಯ ಅವರನ್ನು ಸರಿಪಡಿಸಿ. ಸಿದ್ದರಾಮಯ್ಯ ಸರಿ ಇಲ್ಲದಿದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಕೈ ಹೈಕಮಾಂಡ್‍ಗೆ ದೇವೇಗೌಡರು ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement
Advertisement
ಅಷ್ಟೆ ಅಲ್ಲದೇ ನನ್ನ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗಿನಿಂದ ಕಿರುಕುಳ ನಿಲ್ಲುತ್ತಿಲ್ಲ. ಬರೀ ಇದೆ ಆಯಿತು, ನೀವು ಮಧ್ಯಪ್ರವೇಶ ಮಾಡಿ ಸರಿ ಮಾಡಿ ಇಲ್ಲದಿದ್ದರೆ ನಮಗೂ ಗೊತ್ತಿದೆ. ಲೋಕಸಭೆ ಚುನಾವಣೆ ನಿಮ್ಮಷ್ಟೇ ನಮಗೂ ಕೂಡ ಮುಖ್ಯವಾಗಿದೆ. ಮೇಲಾಟಗಳನ್ನ ನಿಲ್ಲಿಸದಿದ್ದರೇ ನಮಗೂ ದಾರಿ ಬದಲಿಸೋದಕ್ಕೆ ಬರುತ್ತದೆ ಅಂತ ಖಡಕ್ ಆಗಿ ನುಡಿದಿದ್ದಾರೆ ಎನ್ನಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv