– ಸರ್ವೆ ದಿನಾಂಕ ವಿಸ್ತರಿಸದಂತೆ ಸಿಎಂಗೆ ಆಗ್ರಹ
ಬೆಂಗಳೂರು: ಕೆಲವರು ಜಾತಿ ಹೆಸರು ಹೇಳಲು ಹಿಂದೇಟು ಹಾಕ್ತಿದ್ದಾರೆ. ಅಪಾರ್ಟ್ಮೆಂಟ್, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸ ಮಾಡೋರು ಒಳಗೆ ಬಿಟ್ಟುಕೊಳ್ಳಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ (H Anjaneya) ಹೇಳಿದ್ದಾರೆ.
ಸರ್ವೆ ಮಾಡದೇ ಸ್ಟಿಕ್ಕರ್ ಅಂಟಿಸೋದು ಸರಿ ಅಲ್ಲ. ಸರ್ವೆ ಮಾಡಿದ್ಮೇಲೆ ಸ್ಟಿಕ್ಕರ್ ಹಾಕಬೇಕಿತ್ತು. ಸಾಮೂಹಿಕವಾಗಿ ಸ್ಟಿಕ್ಕರ್ ಹಾಕಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಳ ಮೀಸಲಾತಿ ಸರ್ವೆ ಗೊಂದಲದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಸರ್ವೆ ದಿನಾಂಕ ವಿಸ್ತರಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ
ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಸಿಬ್ಬಂದಿ ಇಲ್ಲ ಅಂತೇಳಿ ಎಲ್ಲರ ಹತ್ರ ಸರ್ವೆ ಮಾಡಿಸ್ತಿದ್ದಾರೆ. ಬೆಂಗಳೂರಲ್ಲಿ 100% ಸರ್ವೆ ಸಾಧ್ಯವಿಲ್ಲ. ಬೆಂಗಳೂರಲ್ಲಿ 110 ಬಡಾವಣೆಗಳಲ್ಲಿ ಹೆಚ್ಚು ಎಸ್‌ಸಿ ಸಮುದಾಯವರು ಇದ್ದಾರೆ. ಅಲ್ಲಿ ಚೆನ್ನಾಗಿ ಸರ್ವೆ ಮಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮ್ಮ, ಸೋದರನಿಗೆ ಡ್ರಗ್ಸ್ ಚಟ | ಬಾಲಕನಿಗೆ ನಾಯಿಗಳೇ ಆಸರೆ – ಬೊಗಳುವ ಮೂಲಕ ಮಾತ್ರ ಸಂವಹನ!
ಅಪಾರ್ಟ್ಮೆಂಟ್, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸ ಮಾಡೋರು ಒಳಗೆ ಬಿಟ್ಟುಕೊಳ್ಳಲ್ಲ. ಕೆಲವರು ಜಾತಿ ಹೆಸರು ಹೇಳಲು ಹಿಂದೇಟು ಹಾಕ್ತಿದ್ದಾರೆ. ನೀವು ಹಿಂದೇಟು ಹಾಕಬೇಡಿ, ಆನ್‌ಲೈನ್‌ನಲ್ಲಿ ಮಾಡ್ರಪ್ಪ. ಜುಲೈ 6ಕ್ಕೆ ಒಳಮೀಸಲಾತಿ ಸರ್ವೆ ಮುಕ್ತಾಯ ಆಗಬೇಕು. ಈ ತಿಂಗಳ ಒಳಗೆ ಒಳಮೀಸಲಾತಿ ಜಾರಿ ಆಗಬೇಕು ಅಂತಾ ಆಗ್ರಹಿಸಿದ್ದಾರೆ.