ಮಂಡ್ಯ: ನಟ ಪುನೀತ್ ರಾಜ್ಕುಮಾರ್ ಅವರ ಸಾವಿಗೆ ಜಿಮ್, ವರ್ಕೌಟ್ ಕಾರಣ ಅಲ್ಲ ಎಂದು ನಟ ಪ್ರೇಮ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಅಪ್ಪು ಸಾವಿಗೆ ಜಿಮ್ ಕಾರಣ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿಸಲಾಗುತ್ತಿದೆ. ಇದರಿಂದ ಜಿಮ್ನಲ್ಲಿ ವರ್ಕೌಟ್ ಮಾಡುವವರಿಗೆ ಆತಂಕ ಶುರುವಾಗಿದೆ. ಬಹುತೇಕ ನಗರಗಳಲ್ಲಿ ಜಿಮ್ ಶೇ. 90 ಅಡ್ಮಿಷನ್ ಕಡಿಮೆಯಾಗಿದೆ. ಈ ರೀತಿಯಾಗಿ ಜಿಮ್ ಬಗ್ಗೆ ತಪ್ಪು ಅಭಿಪ್ರಾಯ ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು
ಅಪ್ಪು ಅವರು ತೀರಿಕೊಂಡ ಮೇಲೆ ನನಗೆ ಹಲವರಿಂದ ಕರೆ ಬಂದಿತ್ತು. ಜಿಮ್ ಮಾಡುವುದನ್ನು ಬಿಟ್ಟು ಬಿಡಿ ಎನ್ನುತ್ತಿದ್ದರು. ಜಿಮ್ನಿಂದಲೇ ಅಪ್ಪು ನಿಧನರಾದರು ಎನ್ನುವುದು ತಪ್ಪು ಕಲ್ಪನೆ ಎಂದರು. ಇದನ್ನೂ ಓದಿ: ಪುನೀತ್ ವೀಡಿಯೋ ಫೂಟೇಜ್ ರಿವೀಲ್ ಮಾಡಿ – ಡಾ. ರಮಣ್ ರಾವ್ ವಿರುದ್ಧ ಅಪ್ಪು ಅಭಿಮಾನಿ ಕಿಡಿ
ನನಗೆ ಹಾಗೂ ನನ್ನ ಕುಟುಂಬಕ್ಕೆ ಆತ್ಮೀಯವಾದ ಗೆಳೆಯ ಅಪ್ಪು. ನನ್ನ ಮಕ್ಕಳ ಹುಟ್ಟುಹಬ್ಬದ ದಿನ ನೆನಪಿಟ್ಟಿಕೊಂಡು ಫೋನ್ ಮಾಡಿದ್ದರು. ಬಹಳ ಆತ್ಮೀಯ ಗೆಳೆಯನ ಸಾವಿನಿಂದ ಚಿತ್ರರಂಗಕ್ಕೆ ತುಂಬಾಲಾರದ ನಷ್ಟವಾಗಿದೆ. ಕನ್ನಡ ಚಿತ್ರರಂಗದ ದೊಡ್ಡ ಆಸ್ತಿಯನ್ನು ನಾವು ಕಳೆದಕೊಂಡಿದ್ದೇವೆ ಎಂದು ನೆನೆದು ಭಾವುಕರಾದರು.