– ಕಿಟ್ಟಿಯಿಂದ ರಾಜಿ ಸಂಧಾನದ ಸುಳಿವು
ಬೆಂಗಳೂರು: ನಟ ದುನಿಯಾ ವಿಜಿಯಿಂದ ಹಲ್ಲೆಗೊಳಗಾದ ಜಿಮ್ ಟ್ರೈನರ್ ಮಾರುತಿ ಗೌಡ ಅವರು ವಿಕ್ರಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದ್ರೆ ಮಾತೋಡ್ತಾನೂ ಇಲ್ಲ. ನಡೆಯೋದಕ್ಕೂ ಆಗ್ತಿಲ್ಲ. ಈ ಮಧ್ಯೆ ಪಾನಿಪುರಿ ಕಿಟ್ಟಿ ರಾಜಿ ಸಂಧಾನದ ಸುಳಿವು ಕೊಟ್ಟಿದ್ದಾರೆ.
ಇಂದು ದುನಿಯಾ ವಿಜಯ್ ಅವರ ಜಾಮೀನು ಅರ್ಜಿ ವಿಚಾರಣೆ ಬೆನ್ನಲ್ಲೇ ಡಿಸ್ಚಾರ್ಜ್ ಮಾಡಿದ್ದು, ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ದುನಿಯಾ ವಿಜಿಯಿಂದ ಹಲ್ಲೆಗೊಳಗಾದ ಮಾರುತಿ ಗೌಡ ಒಂದು ವಾರಗಳ ಬಳಿಕ ವಿಕ್ರಮ್ ಆಸ್ಪತ್ರೆಯಿಂದ ಶುಕ್ರವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಮಾರುತಿ ಗೌಡ ಅವರಿಗೆ ಹಲ್ಲೆ ವೇಳೆ ತುಟಿಗೆ ಮತ್ತು ಕಣ್ಣಿನ ಭಾಗಕ್ಕೆ ಹೊಡೆತ ಬಿದ್ದು ಊತ ಬಂದಿತ್ತು. ಈ ಹಿನ್ನೆಲೆ 15 ಹೊಲಿಗೆ ಬಿದ್ದಿದ್ದು, ಸದ್ಯ ಆರೋಗ್ಯದಲ್ಲಿ ಸುಧಾರಿಸಿದೆ. ಇದನ್ನೂ ಓದಿ: ನಟ ದುನಿಯಾ ವಿಜಯ್ ಗೆ ಜಾಮೀನು?
Advertisement
Advertisement
ಮಾರುತಿ ಗೌಡನಿಗೆ 15 ಹೊಲಿಗೆ ಬಿದ್ದಿರೋ ಕಾರಣದಿಂದಾಗಿ ಮಾತನಾಡಲು ಸಾಧ್ಯಾವಾಗದೇ ಓಡಾಡಲು ವೀಲ್ ಚೇರ್ ಬಳಸಿ ಮನೆ ತಲುಪಿದ್ದು, ಎರಡು ದಿನಕ್ಕೊಮ್ಮೆ ಆಸ್ಪತ್ರೆಯ ಭೇಟಿ ನೀಡಿ ಆರೋಗ್ಯ ಪರಿಶೀಲನೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ ಅಂತ ಚಿಕ್ಕಪ್ಪ ಪಾನಿಪುರಿ ಕಿಟ್ಟಿ ತಿಳಿಸಿದ್ದಾರೆ.
Advertisement
Advertisement
ಮಾರುತಿ ಗೌಡ ಆಸ್ಪತ್ರೆಯಲ್ಲಿದ್ದಾಗಲೇ ಸಂಧಾನಕ್ಕಾಗಿ ದುನಿಯಾ ವಿಜಿಯ ಮೊದಲನೇ ಹೆಂಡತಿ ನಾಗರತ್ನ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಬಗ್ಗೆ ಪಾನಿಪುರಿ ಕಿಟ್ಟಿಯನ್ನ ಪ್ರಶ್ನೆ ಮಾಡಿದ್ರೆ, ನಾಗರತ್ನ ಅವರು ನನ್ನ ಹತ್ತಿರ ಮಾತಾಡಿಲ್ಲ. ರಾಜಿ ಸಂಧಾನದ ಬಗ್ಗೆನೂ ನನಗೆ ಗೊತ್ತಿಲ್ಲ. ಸಂಧಾನ ಮಾಡಿಕೊಳ್ಳಲ್ಲ ಕಾನೂನು ಹೋರಾಟ ಮಾಡ್ತೇನೆ. ದುನಿಯಾ ವಿಜಿ ಮತ್ತು ಪತ್ನಿ ಸಂಧಾನಕ್ಕೆ ಬಂದರೆ ನನ್ನ ಮಗ ಗುಣವಾದ ಮೇಲೆ ಸಂಧಾನದ ಬಗ್ಗೆ ಮಾತಾಡೋಣ ಅಂತ ಹೇಳಿದ್ದರು. ಇದನ್ನೂ ಓದಿ: ದುನಿಯಾ ವಿಜಿಯಿಂದ ಹಲ್ಲೆಗೊಳಗಾಗಿದ್ದ ಮಾರುತಿ ಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್
ಒಟ್ಟಿನಲ್ಲಿ ವಿಕ್ರಮ್ ಆಸ್ಪತ್ರೆಯಿಂದ ಮಾರುತಿಗೌಡ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ ಮಾರುತಿಗೌಡಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv