ಜಿಮ್ ರವಿ ನಾಯಕನಾಗಿ ನಟಿಸಿರುವ ಪುರುಷೋತ್ತಮ ಸಿನಿಮಾ ಐವತ್ತು ದಿನಗಳನ್ನು ಪೂರೈಸಿದೆ. ಈ ದಿನಗಳಲ್ಲಿ ಸಿನಿಮಾವೊಂದು 50 ದಿನ ಪೂರೈಸುವುದು ಸಾಮಾನ್ಯ ಮಾತೇನಲ್ಲ. ಅದಕ್ಕಾಗಿ ರವಿ ಕಾರ್ಯಕ್ರಮವನ್ನೂ ಆಯೋಜನೆ ಮಾಡಿ, ಚಿತ್ರಕ್ಕೆ ಶ್ರಮಿಸಿದವರನ್ನು ನೆನಪಿಸಿಕೊಂಡರು. ಅಲ್ಲದೇ, ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಾ.ಮ.ಹರೀಶ್ ಮಾತನಾಡಿ ಜಿಮ್ ರವಿರವರು ಬಹುಕಾಲದ ಗೆಳಯ. ಪರದೆ ಮೇಲೆ ಹೀರೋ ಅಲ್ಲದೆ ಯಾವಗಲೂ ಬೆಂಗಳೂರಿಗೆ ಹೀರೋ. ರವಿ ಅಂತ ಕರೆಯುವಾಗ ಗೊತ್ತಿಲ್ಲದಯೇ ಜಿಮ್ ಅಂತ ಸೇರಿಸಿಕೊಳ್ಳುತ್ತೇವೆ. ಅಂತಹ ಹೊಗಳಿಕೆಯನ್ನು ಸಂಪಾದಿಸಿದ್ದಾರೆ. ಮುಂದೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಸಂಗೀತ ಸಂಯೋಜಕ ಶ್ರೀಧರ್‌ಸಂಭ್ರಮ್ ಗಾಯಕರುಗಳಿಂದ ಗೀತೆಯ ಸಾಲುಗಳನ್ನು ಹಾಡಿಸಿದರು. ಕತೆ ನನ್ನದಲ್ಲ ಅದಕ್ಕಾಗಿ ಇಲ್ಲಿಯವರೆಗೂ ಹೆಚ್ಚು ಮಾತನಾಡಿಲ್ಲ. ಯುವಕರು ಡ್ರಗ್ಸ್ ತೆಗೆದುಕೊಂಡರೆ ಏನೇನು ಅನಾಹುತಗಳು ಆಗುತ್ತದೆ ಎಂಬುದನ್ನು ಹೇಳಲಾಗಿದೆ ಎಂದು ಕಡಿಮೆ ಸಮಯ ತೆಗೆದುಕೊಂಡುದ್ದು ನಿರ್ದೇಶಕ ಎಸ್.ವಿ.ಅಮರ್‌ನಾಥ್. ನಾಯಕಿ ಅಪೂರ್ವ, ಸಂಕಲನಕಾರ ಅರ್ಜುನ್‌ಕಿಟ್ಟು, ಛಾಯಾಗ್ರಾಹಕ ಕುಮಾರ್ ಸೇರಿದಂತೆ ಸಣ್ಣ ಮಟ್ಟದಿಂದ ಕೆಲಸ ಮಾಡಿದವರೆಲ್ಲನ್ನು ಗುರುತಿಸಿ ಅವರುಗಳನ್ನು ವೇದಿಕೆಗೆ ಆಹ್ವಾನಿಸಿ ಫಲಕಗಳನ್ನು ನೀಡಿದ್ದು ರವಿರವರ ದೊಡ್ಡಗುಣಕ್ಕೆ ಸಾಕ್ಷಿಯಾಗಿತ್ತು. ಇದನ್ನೂ ಓದಿ:ದಿಗಂತ್ ಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ : ಅಬ್ಸರ್ವೇಶನ್ ನಲ್ಲಿ ನಟ
ಗೀತಾ ಎನ್ನುವವರು ಚಿತ್ರವನ್ನು 19 ಬಾರಿ ವೀಕ್ಷಣೆ ಮಾಡಿದ್ದರಿಂದ ಅವರಿಗೆ ’ಅತ್ಯುತ್ತಮ ಪ್ರೇಕ್ಷಕಿ’ ಎಂದು ಸನ್ಮಾನ ಮಾಡಲಾಯಿತು. ಕಾಗಿನೆಲೆ ಮಠದ ಸ್ವಾಮಿಗಳು ಶುಭ ಹಾರೈಕೆಯ ಪತ್ರವನ್ನು ಕಳುಹಿಸಿಕೊಟ್ಟಿದ್ದರು. ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಎಲ್ಲರೂ ಹೊರಗೆ ಹೋಗದಂತೆ ಸಮಾರಂಭಕ್ಕೆ ಕಳೆ ತಂದುಕೊಟ್ಟರು.