ಲಕ್ನೋ: ಉತ್ತರ ಪ್ರದೇಶದ (Uttar Pradesh) ಜ್ಞಾನವಾಪಿ ಮಸೀದಿಯ (Gyanvapi mosque) ಆವರಣದೊಳಗೆ ಶಿವಲಿಂಗ ಪತ್ತೆಯಾದ ಹಿನ್ನೆಲೆಯಲ್ಲಿ ಆರಾಧನೆಗೆ ಅವಕಾಶ ನೀಡಬೇಕೆಂದು ಹಿಂದೂ ಸಂಘಟನೆಗಳು (Hindus) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ವಾರಣಾಸಿ ನ್ಯಾಯಾಲಯ (Varanasi Court) ನವೆಂಬರ್ 14ಕ್ಕೆ ಮುಂದೂಡಿದೆ.
ಸಂಬಂಧಪಟ್ಟ ನ್ಯಾಯಾಧೀಶರು ಇಂದು ಕೋರ್ಟ್‌ನಲ್ಲಿ (Court) ಹಾಜರಾಗದ ಕಾರಣ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ರೂಪದ ಆಕೃತಿ ಪತ್ತೆ – ವೈಜ್ಞಾನಿಕ ಪರೀಕ್ಷೆ ಸಾಧ್ಯವಿಲ್ಲ ಎಂದು ಕೋರ್ಟ್
Advertisement
Advertisement
ಬೇಡಿಕೆಗಳೇನಿತ್ತು?
ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರರ ಆರಾಧನೆಗೆ ಕೂಡಲೇ ಅನುಮತಿ ನೀಡಬೇಕು, ಇಡೀ ಜ್ಞಾನವಾಪಿ ಸಂಕೀರ್ಣವನ್ನು (Gyanvapi Mosque Premises) ಹಿಂದೂಗಳಿಗೆ (Hindus) ಬಿಟ್ಟುಕೊಡಬೇಕು ಹಾಗೂ ಮುಸ್ಲಿಮರ (Muslims) ಪ್ರವೇಶ ನಿಷೇಧಿಸಬೇಕು ಎಂಬ ಬೇಡಿಕೆಗಳ ಕುರಿತು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
Advertisement
Advertisement
ಪ್ರಸ್ತುತ ಮುಸ್ಲಿಮರಿಗೆ ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಕಳೆದ ತಿಂಗಳು ಅಕ್ಟೋಬರ್ ನಲ್ಲಿ ನಡೆಸಿದ ವಿಚಾರಣೆ ವೇಳೆ ಶಿವಲಿಂಗವನ್ನು ವೈಜ್ಞಾನಿಕ ತಪಾಸಣೆ ನಡೆಸಲು ವಾರಣಾಸಿ ಕೋರ್ಟ್ ಅವಕಾಶ ನೀಡಲು ನಿರಾಕರಿಸಿತು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್
ಮಸೀದಿಯೊಳಗಿನ ಕಟ್ಟಡ ರಚನೆಗಳ ಮೇಲೆ ಕಾರ್ಬನ್ ಡೇಟಿಂಗ್ (Carbon Dating) ನಡೆಸಲು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಆದರೆ ಅಲ್ಲಿ ಶಿವಲಿಂಗವಿಲ್ಲ ಎನ್ನುವುದು ಮುಸ್ಲಿಮರ ವಾದವಾಗಿದೆ. ಹೀಗಾಗಿ ಮಸೀದಿಯನ್ನು ಕೆಡವಿ ದೇವಾಲಯಕ್ಕೆ, ಪೂಜೆ-ಪುನಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಹಿಂದೂ ಸಂಘಟನೆಗಳು ಸೆಪ್ಟೆಂಬರ್ 22ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದವು. ಜೊತೆಗೆ ಶಿವಲಿಂಗವಿದೆ ಎಂದು ಹೇಳುವ ಜಾಗದಲ್ಲಿ ಕಾರ್ಬನ್ ಡೇಟಿಂಗ್ ಮಾಡಬೇಕೆಂಬುದು ಸಂಘಟನೆಗಳು ಒತ್ತಾಯಿಸಿದ್ದವು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್ ಹೇಳಿದ್ದೇನು?
ಏನಿದು ಕಾರ್ಬನ್ ಡೇಟಿಂಗ್?
ಕಾರ್ಬನ್ ಡೇಟಿಂಗ್ (Carbon Dating) ಎಂಬುದು ವೈಜ್ಞಾನಿಕ ಪ್ರಕ್ರಿಯೆ. ಪುರಾತತ್ವ ವಸ್ತುಗಳು ಅಥವಾ ಪುರಾತತ್ವ ರಚನೆಗಳು, ಪಳೆಯುಳಿಕೆಗಳು ಪತ್ತೆಯಾದರೆ ಅವುಗಳು ಎಷ್ಟು ವರ್ಷ ಹಳೆಯದು ಎಂದು ಪತ್ತೆಹಚ್ಚಲಾಗುತ್ತದೆ.