LatestMain PostNational

ಜ್ಞಾನವಾಪಿ ಮಸೀದಿ ಪ್ರಕರಣ- ದೂರುದಾರಳ ಪತಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆ

ಲಕ್ನೋ: ಜ್ಞಾನವಾಪಿ ಮಸೀದಿ ಹಾಗೂ ಶೃಂಗಾರ ಗೌರಿ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ 5 ಮಹಿಳೆಯರಲ್ಲಿ ಒಬ್ಬರ ಪತಿಗೆ ಅರ್ಜಿಯನ್ನು ಹಿಂಪಡೆಯುವಂತೆ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬಂದಿವೆ ಎಂಬ ಆರೋಪ ಕೇಳಿ ಬರುತ್ತಿದೆ.

ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಮಸೀದಿಯ ಹಿಂಭಾಗದಲ್ಲಿರುವ ಶೃಂಗಾರ ಗೌರಿ ದೇವರಿಗೆ ನಿತ್ಯ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ಐವರು ಮಹಿಳೆಯರು ಸ್ಥಳೀಯ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ನಂಬರ್‌ನಿಂದ ಹಲವಾರು ಬಾರಿ ಅರ್ಜಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಬೆದರಿಕೆ ಕರೆಗಳು ಬಂದಿವೆ. ಆದರೆ ನಾವು ಯಾವುದೇ ಬೆದರಿಕೆಗೂ ಹೆದರುವುದಿಲ್ಲ ಎಂದು ಸೋಹನ್ ಲಾಲ್ ಆರ್ಯ ತಿಳಿಸಿದ್ದಾರೆ.

ಸೋಹನ್ ಲಾಲ್ ಆರ್ಯ ಅವರ ಪತ್ನಿ ಲಕ್ಷ್ಮಿ ದೇವಿ ಹಾಗೂ ವಾರಣಾಸಿ ಮೂಲದ ಮೂವರು ಮಹಿಳೆಯರು, ಇನ್ನೊಬ್ಬರು ದೆಹಲಿಯ ಮಹಿಳೆಯೊಬ್ಬರು ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ಸಿಗರೇಟ್‍ನಿಂದ ಸುಟ್ಟ ವ್ಯಕ್ತಿಯ ಬಂಧನ

ಘಟನೆಗೆ ಸಂಬಂಧಿಸಿ ಲಕ್ಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಅವರ ಭದ್ರತೆಗಾಗಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಪೊಲೀಸ್ ಆಯುಕ್ತ ಅವಧೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಇದನ್ನೂ ಓದಿ: ಕಾಣೆಯಾಗಿ ಮತ್ತೆ ಸಿಕ್ಕಿದ್ದ ಗಿಳಿಯನ್ನು ಗುಜರಾತ್ ಝೂಗೆ ಬಿಟ್ಟ ಮಾಲೀಕರು

Live Tv

Leave a Reply

Your email address will not be published.

Back to top button