ನವದೆಹಲಿ: ಜ್ಞಾನವ್ಯಾಪಿ ಮಸೀದಿ (Gyanvapi Mosque) ಆವರಣದಲ್ಲಿ ಸೀಲ್ ಆಗಿರುವ ವಜುಖಾನ (Wazu Khana) ಪ್ರದೇಶವನ್ನು ಡಿ-ಸೀಲ್ ಮಾಡುವಂತೆ ಹಿಂದೂ ಪರ ವಕೀಲರು ಸುಪ್ರೀಂಕೋರ್ಟಿಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ. ಮಸೀದಿ ಸ್ಥಳದಲ್ಲಿ 17ನೇ ಶತಮಾನಕ್ಕೂ ಮುನ್ನ ಮಂದಿರ ಇತ್ತು ಎಂದು ಪುರಾತತ್ವ ಇಲಾಖೆ ವರದಿ ನೀಡಿದ ಬೆನ್ನಲ್ಲೆ ಈ ಅರ್ಜಿಯನ್ನು ಸಲ್ಲಿಸಲಾಗಿದೆ.
Advertisement
ಪುರಾತತ್ವ ಇಲಾಖೆಯ ಸರ್ವೆ (Archaeological Survey of India) ಪ್ರಕಾರ, 17ನೇ ಶತಮಾನದಲ್ಲಿ ಜ್ಞಾನವ್ಯಾಪಿ ಮಸೀದಿಯೂ ಮಂದಿರವಾಗಿತ್ತು, ಈಗಿನ ವಜುಖಾನದಲ್ಲಿ ಇರುವುದು ಶಿವಲಿಂಗ ಎನ್ನುವುದು ಸಾಬೀತಾಗಿದೆ. ಸುಪ್ರೀಂಕೋರ್ಟ್ ಈ ಹಿಂದೆ ಅದನ್ನು ಸೀಲ್ ಮಾಡಿದೆ. ಪುರಾತತ್ವ ವರದಿ ಆಧಾರದ ಮೇಲೆ ಡಿ-ಸೀಲ್ ಮಾಡಬೇಕು ಮತ್ತು ಅಲ್ಲಿ ಸೇವಾ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಇದನ್ನೂ ಓದಿ: ಪರೀಕ್ಷೆ ಆತಂಕ ಕಾಡ್ತಿದೆಯಾ? – ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಧಾನಿ ಮೋದಿಯ ಟಾಪ್-10 ಟಿಪ್ಸ್!
Advertisement
Advertisement
ಜ್ಞಾನವ್ಯಾಪಿ ಮಸೀದಿಯೂ ಮಂದಿರವಾಗಿತ್ತು ಎನ್ನುವುದು ಪುರಾತತ್ವ ಇಲಾಖೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಮಸೀದಿಯನ್ನು ಹಿಂದೂ ದೇವಾಲಯ ಎಂದು ಘೋಷಿಸಿ ಅದನ್ನು ಹಿಂದೂಗಳಿಗೆ ಹಸ್ತಾಂತರ ಮಾಡಬೇಕು ಎಂದು ವಿಹೆಚ್‍ಪಿ ಆಗ್ರಹಿಸಿದೆ. ಎಎಸ್‍ಐ (ASI) ಒದಗಿಸಿದ ಮಾಹಿತಿಗಳ ಪ್ರಕಾರ, 1947 ರ ಆಗಸ್ಟ್ 15 ರಂದು ಈ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಅಸ್ತಿತ್ವದಲ್ಲಿದೆ ಮತ್ತು ಪ್ರಸ್ತುತ ಹಿಂದೂ ದೇವಾಲಯವಾಗಿದೆ ಎಂದು ಸಾಬೀತುಪಡಿಸುತ್ತದೆ ಎಂದು ವಿಎಚ್‍ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.
Advertisement
ಆದ್ದರಿಂದ 1991ರ ಪೂಜಾ ಸ್ಥಳಗಳ ಕಾಯಿದೆಯ ಸೆಕ್ಷನ್ 4ರ ಪ್ರಕಾರ, ಈ ರಚನೆಯನ್ನು ಹಿಂದೂ ದೇವಾಲಯವೆಂದು ಘೋಷಿಸಬೇಕು, ಜ್ಞಾನವಾಪಿ ಮಸೀದಿಯನ್ನು ಮತ್ತೊಂದು ಸೂಕ್ತ ಸ್ಥಳಕ್ಕೆ “ಗೌರವಯುತವಾಗಿ” ಸ್ಥಳಾಂತರಿಸಲು ಮತ್ತು ಕಾಶಿ ವಿಶ್ವನಾಥನ ಮೂಲ ಸ್ಥಳವನ್ನು ಹಿಂದೂ ಸಮಾಜಕ್ಕೆ ಹಸ್ತಾಂತರಿಸಲು ಒಪ್ಪಿಕೊಳ್ಳುವಂತೆ ಮಸೀದಿಯನ್ನು ನಿರ್ವಹಿಸುವ ಇಂತೇಜಾಮಿಯಾ ಸಮಿತಿಗೆ ವಿಹೆಚ್‍ಪಿ (Vishwa Hindu Parishad) ಒತ್ತಾಯಿಸಿದೆ.