ಪವಿತ್ರ ಕಡ್ತಲ
– ಕನ್ನಡ ಬರಹದ ಬಗ್ಗೆ ಇತಿಹಾಸಕಾರರು ಹೇಳೋದೇನು?
– ಕನ್ನಡ ಶಾಸನ ಸಿಕ್ಕಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ವಿಚಾರ ಎಂದ ಇತಿಹಾಸತಜ್ಞ
Advertisement
ಬೆಂಗಳೂರು: ಜ್ಞಾನವಾಪಿ ಮಸೀದಿ (Gyanvapi Mosque) ಇರುವ ಜಾಗದಲ್ಲಿ ಪ್ರಾಚೀನ ಕಾಲದ ಶಾಸನಗಳು (Kannada Inscription ) ಪತ್ತೆಯಾಗಿವೆ. ಅದರಲ್ಲಿ ಕನ್ನಡದ ಶಾಸನವೂ ಇದೆ ಎಂಬ ವಿಚಾರ ಎಎಸ್‌ಐ (ASI) ವರದಿಯಿಂದ ಬಹಿರಂಗವಾಗಿದೆ. ಕನ್ನಡ ಬರಹವಿರುವ ಪ್ರೂಫ್ ಕೂಡ ಎಎಸ್‌ಐ ವರದಿಯಲ್ಲಿದೆ.
Advertisement
ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವರದಿ ಈಚೆಗೆ ಬಹಿರಂಗವಾಗಿದೆ. ಮಸೀದಿ ಇರುವ ಜಾಗದಲ್ಲಿ ಸಿಕ್ಕ ಪ್ರಾಚೀನ ಶಾಸನದಲ್ಲಿ ‘ದೊಡ್ಡರಸಯ್ಯನ ನರಸಂಣನಭಿಂನಹ’ (ದೊಡ್ಡರಸಯ್ಯನ ನರಸಿಂಹನ ಭಿನ್ನಹ) ಎಂದು ಕನ್ನಡದಲ್ಲಿ ಬರಹವಿರುವ ಸಾಕ್ಷಿ ಕೂಡ ವರದಿಯಲ್ಲಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಜಾಗದಲ್ಲೇ ಹಿಂದೂ ದೇವಾಲಯವಿತ್ತು – ಪುರಾತತ್ವ ಇಲಾಖೆ ವರದಿ ಬಹಿರಂಗ
Advertisement
Advertisement
ಇತಿಹಾಸಕಾರರು ಹೇಳೋದೇನು?
ಇದು ವಿಜಯನಗರದ ಪಾಳಯಗಾರರ ಅಥವಾ ಅಧಿಕಾರಿಗಳ ಕಾಲದಲ್ಲಿ ನೀಡಿರುವ ಸೇವಾರ್ಥ ಇರಬಹುದು. ಸುಮಾರು 16ನೇ ಶತಮಾನದ್ದು. ಸಾಮಾನ್ಯವಾಗಿ ದೇವರಿಗೆ ಸೇವಾರ್ಥವನ್ನು ನೀಡುವ ಸಮಯದಲ್ಲಿ ಈ ರೀತಿ ಕಲ್ಲಿನಲ್ಲಿ ಸೇವಾರ್ಥಿಯ ಹೆಸರನ್ನು ಹಾಕಿರುತ್ತಾರೆ.
ಕಾಶಿ ವಿಶ್ವನಾಥನಿಗೆ ಪ್ರತಿ ವರ್ಷವೂ ದತ್ತಿಯನ್ನು ನೀಡೋದು ಸಂಪ್ರದಾಯ. ದತ್ತಿ ಅಂದ್ರೆ ಒಂದೆರಡು ಹಳ್ಳಿ ಅಥವಾ ಗ್ರಾಮವನ್ನು ಸಂಪೂರ್ಣವಾಗಿ ದೇವರಿಗಾಗಿಯೇ ಮೀಸಲಿಟ್ಟು ಅಲ್ಲಿ ಬೆಳೆ ಬೆಳೆದು, ಬರುವ ದುಡ್ಡನ್ನು ವಾರ್ಷಿಕವಾಗಿ ಗ್ರಾಮದ ಬ್ರಾಹ್ಮಣರ ಮುಖಾಂತರ ಆಯಾಯ ಪಾಳೆಯಗಾರರು/ಅಧಿಕಾರಿಗಳ ಹೆಸರಿನಲ್ಲಿ ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ ಪೂಜೆ ಮಾಡಿಸುತ್ತಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯೊಳಗಿರುವ ವಜುಖಾನಾದ ಸಂಪೂರ್ಣ ಸ್ವಚ್ಛತೆಗೆ ಸುಪ್ರೀಂ ಗ್ರೀನ್ ಸಿಗ್ನಲ್
ಸಾಮಾನ್ಯವಾಗಿ ಈ ದುಡ್ಡನ್ನು ದೇವಸ್ಥಾನಕ್ಕೆ ಬಳಸಿ ತದನಂತರ ಅಲ್ಲಿ ಕಟ್ಟಡಕ್ಕೆ ಬಳಸುತ್ತಾರೆ. ಈ ವೇಳೆ ಸೇವಾರ್ಥಿಗಳ ಹೆಸರನ್ನು ಹಾಕಲಾಗಿದೆ. ಕೋಲಾರ ಮೂಲದ ಪಾಳೆಯಗಾರರು ಅಥವಾ ಅಧಿಕಾರಿಗಳು ಇರಬಹುದು. ದಕ್ಷಿಣದ ರಾಜರಿಗೆ ಕಾಶಿ ವಿಶ್ವನಾಥನ ಮೇಲೆ ಅಪಾರ ನಂಬಿಕೆ. ಕೆಂಪೇಗೌಡರು ಕೂಡ ಕಾಶಿ ವಿಶ್ವನಾಥ ದೇವರ ಹೆಸರಿನಲ್ಲಿ ದತ್ತಿಯನ್ನು ನೀಡುತ್ತಿದ್ದರು. ಇದರಿಂದ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಎಂದು ಕನ್ನಡದ ಶಾಸಕನದ ಕುರಿತು ಇತಿಹಾಸಕಾರರು ಮಾಹಿತಿ ನೀಡಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕನ್ನಡ ಶಾಸನ ಸಿಕ್ಕಿರೋ ಬಗ್ಗೆ ಕನ್ನಡಿಗರಾದ ನಾವು ಹೆಮ್ಮೆ ಪಡಬೇಕಾದ ವಿಚಾರ. 16ನೇ ಶತಮಾನದ ಶಾಸನ ಇದು. ಈ ಹಿಂದೆ ಕನ್ನಡದ ರಾಜರು ಉತ್ತರದ ಪ್ರಸಿದ್ಧ ದೇವಾಲಯಗಳಿಗೆ ದತ್ತಿ ಕೊಡುತ್ತಿದ್ದರು. ಆ ರೀತಿ ದತ್ತಿ ಕೊಟ್ಟಿರುವವರೇ ದೊಡ್ಡರಸಯ್ಯ ಮತ್ತು ನರಸಿಂಹ. ಇವರು ಕರ್ನಾಟಕದ ಯಾವುದಾದರೂ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳೇ ಆಗಿರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಕೇಸ್- ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ, ಮುಸ್ಲಿಮರು ಸಲ್ಲಿಸಿದ್ದ 5 ಅರ್ಜಿ ವಜಾ
ಹಿಂದೆ ಅವರು ದತ್ತಿಕೊಟ್ಟ ಕಾರಣಕ್ಕೆ ಅವರ ಹೆಸರನ್ನ ಹಾಕಿದ್ದಾರೆ. ಈ ಶಾಸನ ಸರ್ವೇಗೆ ಪೂರಕವಾಗಲಿದೆ. ಮತ್ತಷ್ಟು ಕನ್ನಡದ ಶಾಸನಗಳು ಪತ್ತೆಯಾದರು ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.
839 ಪುಟಗಳ ಸರ್ವೆ ವರದಿ
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಸಮುಚ್ಛಯದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ನಡೆಸಲಾಗಿದ್ದ ಸರ್ವೆ ವರದಿಯನ್ನು ಜ.25 ರಂದು ಬಹಿರಂಗಗೊಳಿಸಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸರ್ವೆ ನಡೆಸಿತ್ತು. 839 ಪುಟಗಳ ಸರ್ವೆ ವರದಿ ಈಗ ಬಹಿರಂಗವಾಗಿದೆ. ಇದನ್ನೂ ಓದಿ: ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿ ಸಲ್ಲಿಕೆ
ಎಎಸ್‌ಐ ವರದಿಯಲ್ಲಿ, ಮಸೀದಿ ನಿರ್ಮಾಣಕ್ಕೂ ಮೊದಲು ವಿವಾದಿತ ಸ್ಥಳದಲ್ಲಿ ಬೃಹತ್ ರೂಪದ ಭವ್ಯ ಮಂದಿರ ಇತ್ತು. ದೇಗುಲ ಕೆಡವಿ ಅದರ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋರ್ಟ್ ಆದೇಶದಂತೆ ಎಎಸ್‌ಐ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸರ್ವೆ ನಡೆಸಿತ್ತು. ಮಸೀದಿಯನ್ನು ಹಿಂದೆ ಇದ್ದ ದೇಗುಲದ ಕಂಬಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.