ನವದೆಹಲಿ: ಹೊಸದಾಗಿ ನೇಮಕಗೊಂಡ ಇಬ್ಬರು ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ (Gyanesh Kumar) ಮತ್ತು ಡಾ. ಸುಖ್ಬೀರ್ ಸಿಂಗ್ (Sukhbir Singh Sandhu) ಸಂಧು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಶುಕ್ರವಾರ ಆಯೋಗಕ್ಕೆ ಸೇರ್ಪಡೆಯಾದ ಇಬ್ಬರು ನೂತನ ಚುನಾವಣಾ ಆಯುಕ್ತರನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸ್ವಾಗತಿಸಿದರು ಎಂದು ಚುನಾವಣಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗದ ಆಯುಕ್ತರಾಗಿ ಇಬ್ಬರ ನೇಮಕ
ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತ (CEC) ಮತ್ತು ಚುನಾವಣಾ ಆಯುಕ್ತರ (EC) ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿಗೆ ಬಂದ ನಂತರ ಅವರು ಚುನಾವಣಾ ಸಮಿತಿಯ ಸದಸ್ಯರಾಗಿ ನೇಮಕಗೊಂಡ ಮೊದಲಿಗರಾಗಿದ್ದಾರೆ.
ಫೆಬ್ರವರಿ 14 ರಂದು ಅನುಪ್ ಚಂದ್ರ ಪಾಂಡೆ ನಿವೃತ್ತಿ ಮತ್ತು ಮಾರ್ಚ್ 8 ರಂದು ಅರುಣ್ ಗೋಯಲ್ ಅವರು ಹಠಾತ್ ರಾಜೀನಾಮೆ ನೀಡಿದ ನಂತರ ಚುನಾವಣಾ ಆಯೋಗದಲ್ಲಿ ಖಾಲಿಯಾಗಿದ್ದ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಇದನ್ನೂ ಓದಿ: ಬಾಕಿ ಉಳಿದ ಬಿಜೆಪಿಯ 5 ಕ್ಷೇತ್ರಗಳಲ್ಲೂ ಹಾಲಿ ಸಂಸದರಿಗೆ ಟಿಕೆಟ್ ಮಿಸ್? – ಕಾರಣ ಏನು?
1988ರ ಬ್ಯಾಚ್‌ನ IAS ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸಂಧು ಕ್ರಮವಾಗಿ ಕೇರಳ ಮತ್ತು ಉತ್ತರಾಖಂಡ್ ಕೇಡರ್‌ಗೆ ಸೇರಿದವರಾಗಿದ್ದಾರೆ.