Connect with us

Cricket

ಆಸೀಸ್ ಆಟಗಾರರ ಮೇಲೆ ಕಲ್ಲುತೂರಾಟ: ಕ್ಷಮೆಯಾಚಿಸಿದ ಗುವಾಹಟಿ ಅಭಿಮಾನಿಗಳು

Published

on

ಗುವಾಹಟಿ: ಭಾರತ- ಆಸ್ಟ್ರೇಲಿಯಾ ನಡುವಿನ ಎರಡನೇ ಟಿ-20 ಕ್ರಿಕೆಟ್ ಪಂದ್ಯದ ಮುಕ್ತಾಯದ ನಂತರ ಆಸ್ಟ್ರೇಲಿಯಾ ಆಟಗಾರರು ತೆರಳುತ್ತಿದ್ದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಗುವಾಹಟಿಯ ಅಭಿಮಾನಿಗಳು ಬೋರ್ಡ್ ಗಳನ್ನು ಹಿಡಿದು ಕೊಂಡು ಕ್ಷಮೆಯಾಚಿಸಿದ್ದಾರೆ.

ಎರಡನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧದ ಗೆಲುವು ಸಾಧಿಸಿದ ಸಂಭ್ರಮದಲ್ಲಿ ಹೋಟೆಲ್‍ಗೆ ತೆರಳುತ್ತಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರ ಬಸ್ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರು. ಇದರ ಪರಿಣಾಮ ಬಸ್‍ನ ಕಿಟಕಿ ಗ್ಲಾಸುಗಳು ಪುಡಿಪುಡಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಆಟಗಾರನಿಗೂ ಯಾವುದೇ ರೀತಿಯ ಅಪಾಯವಾಗಿಲಿಲ್ಲ.

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಸ್ಟ್ರೇಲಿಯಾ ಆಟಗಾರರು ತಂಗಿದ್ದ ಹೋಟೆಲ್ ಬಳಿ ಕ್ಷಮೆಯಾಚಿಸುವ ಬ್ರೋರ್ಡ್‍ಗಳನನ್ನು ಹಿಡಿದು ನಿಂತಿರುವುದು ಕಂಡು ಬಂತು. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಲ್ಲು ತೂರಾಟದಿಂದ ನಮಗೇ ಬಹಳ ಅಘಾತ ಮತ್ತು ನಿರಾಸೆ ಉಂಟಾಗಿದೆ ಎಂದು ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಆಡಮ್ ಜಂಪಾ ಮತ್ತು ಫಿಂಚ್ ಟ್ವೀಟ್ ಮಾಡಿದ್ದರು.

ಕಳೆದ ಬಾರಿ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ವೇಳೆ ಇದೇ ಮಾದರಿ ದಾಳಿಗೆ ತುತ್ತಾಗಿತ್ತು. ಬಾಂಗ್ಲಾದೇಶ ವಿರುದ್ಧ ಚಿತ್ತಗಾಂಗ್‍ನಲ್ಲಿ ನಡೆದ ಟೆಸ್ಟ್ ಪಂದ್ಯ ಮುಗಿಸಿ ಹೋಟೆಲ್‍ಗೆ ತೆರಳುತ್ತಿದ್ದ ಆಸಿಸ್ ತಂಡದ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು.

https://twitter.com/Atheist_mrigen/status/918113967062450176?

Click to comment

Leave a Reply

Your email address will not be published. Required fields are marked *