ಬೆಂಗಳೂರು: ನವರಸ ನಾಯಕ ಜಗ್ಗೇಶ್ ತಮ್ಮ ಮಗ ಗುರುರಾಜ್ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಕುಮಾರ್ ಹೇಳಿಕೆಗೆ ಟ್ವಿಟರ್‍ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿವಕುಮಾರ್ ಹೇಳಿಕೆಯ ಬಗ್ಗೆ ಪಬ್ಲಿಕ್ ಟಿವಿ ಸುದ್ದಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, ಇಂದು ಕತೆ ತಿರುಚುವ ಬದಲು ಅಂತ ತಪ್ಪಾಗಿದ್ದರೆ ಸಾರ್ವಜನಿಕರ ಸಹಾಯದಿಂದ ಅಂದೆ ಗುರುಗೆ ಠಾಣೆಗೆ ಕರೆದುಕೊಂಡು ಹೋಗಬೇಕಿತ್ತು! ಸಾತ್ವಿಕ ಪ್ರಚಾರಕ್ಕೆ ಅದ್ಭುತನಾಟಕ! ಚಾಕುಹಿಡಿದವ! ಎಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಶಿವಕುಮಾರ್ ಹೇಳಿದ್ದೇನು?: ಅವತ್ತು ನಮ್ಮಿಬ್ಬರ ಕಾರುಗಳು ಪರಸ್ಪರ ಡಿಕ್ಕಿ ಹೊಡೆದವು. ಮೊದಲು ನಾನು ಅಚಾನಕ್ ಆಗಿ ಕಾರನ್ನು ಡಿಕ್ಕಿ ಹೊಡೆದೆ. ಬಳಿಕ ಅವರು ನನ್ನನ್ನ ಓವರ್‍ಟೇಕ್ ಮಾಡಿ ನನ್ನ ಕಾರನ್ನು ಅಡ್ಡ ಹಾಕಿದ್ರು. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದದ್ದು ನಿಜ. ಆ ಸಂದರ್ಭದಲ್ಲಿ ಕಾರಿನ ಒಳಗೆ ಇದ್ದ ಬೇಸ್ ಬ್ಯಾಟ್ ತೆಗೆದು ನನ್ನ ತಲೆಗೆ ಹೊಡೆದ್ರು. ಗುರುರಾಜ್ ಇನ್ನೂ ಹೆಚ್ಚಾಗಿ ಹಲ್ಲೆ ಮಾಡೋದಕ್ಕೆ ಬಂದಿದ್ದಕ್ಕೆ ನಾನು ಅನಿವಾರ್ಯವಾಗಿ ಚಾಕುವಿನಿಂದ ಚುಚ್ಚಿದ್ದೇ ಹೊರತು ನಾನು ಉದ್ದೇಶಪೂರ್ವಕವಾಗಿ ಚುಚ್ಚಿಲ್ಲ ಅಂತಾ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
Advertisement
ಗುರು ನನ್ನ ಮೇಲೆ ಹಲ್ಲೆಯ ನಂತರ ಬೇಸ್ ಬ್ಯಾಟ್ ಬಸ್ಸಿನ ಒಳಗೆ ಎಸೆದಿದ್ದಾರೆ ಎಂದು ಆರ್.ಟಿ.ನಗರ ಪೊಲೀಸರ ಮುಂದೆ ತಿಳಿಸಿದ್ದಾರೆ. ಸದ್ಯ ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.
Advertisement
ಇಂದು ಕತೆ ತಿರುಚುವಬದಲು ಅಂತ ತಪ್ಪಾಗಿದ್ದರೆ ಸಾರ್ವಜನಿಕರ ಸಹಾಯದಿಂದ ಅಂದೆಗುರುಗೆ ಠಾಣೆಗೆ ಕರೆದುಕೊಂಡು ಹೋಗಬೇಕಿತ್ತು!ಸಾತ್ವಿಕ ಪ್ರಚಾರಕ್ಕೆ ಅದ್ಭುತನಾಟಕ!ಚಾಕುಹಿಡಿದವ! https://t.co/0AAV3fxfgd
— ನವರಸನಾಯಕ ಜಗ್ಗೇಶ್ (@Jaggesh2) September 5, 2017
Advertisement
ನಟ ಜಗ್ಗೇಶ್ ಪುತ್ರ ಗುರುರಾಜ್‍ಗೆ ಚಾಕು ಇರಿತ ಪ್ರಕರಣಕ್ಕೆ ಸ್ಫೋಟಕ ತಿರುವು https://t.co/TOppU0CrK9#Jaggesh #GururajJaggesh pic.twitter.com/ezhfoTcvdv
— PublicTV (@publictvnews) September 5, 2017
https://www.youtube.com/watch?v=D0ClnHX7l64
https://www.youtube.com/watch?v=-OiNofzJW-o