ದಾವಣಗೆರೆ: ನಗರದ (Davanagere) ಗುರುಕುಲ ಶಾಲೆಯ (Gurukula School) ವಿದ್ಯಾರ್ಥಿಗಳು (Students) 100 ಜನ ನಿರಾಶ್ರಿತರಿಗೆ ಉಚಿತವಾಗಿ ಬ್ಲಾಂಕೆಟ್ ವಿತರಣೆ ಮಾಡಿ ವಿನೂತನವಾಗಿ ಹೊಸ ವರ್ಷ (New year 2026) ಆಚರಣೆ ಮಾಡಿದ್ದಾರೆ.
ನಿರಾಶ್ರಿತರಿಗೆ ಬ್ಲಾಂಕೆಟ್, ಸ್ವೆಟರ್ ಮತ್ತು ಸಿಹಿ ವಿತರಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. ಈ ವೇಳೆ ನಿಮಗೆ ಏನೇ ಸಹಾಯ ಬೇಕಿದ್ದಲ್ಲಿ ನಮ್ಮ ಗುರುಕುಲ ಸೇವಾ ಫೌಂಡೇಶನ್ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ನಿರಾಶ್ರಿತರಿಗೆ ಮಕ್ಕಳು ಧ್ಯರ್ಯ ತುಂಬಿದ್ದಾರೆ. ಮಕ್ಕಳಿಗೆ ಮಾನವೀಯತೆಯ ಸಂದೇಶದ ಜೊತೆಗೆ ಸಮಾಜದಲ್ಲಿ ಭಾವೈಕ್ಯತೆ ಮತ್ತು ಸಹಾಯದ ಪ್ರೇರಣೆ ಬೆಳೆಸಲು ಸಂಸ್ಥೆಯಿಂದ ಈ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಹೊಸ ವರ್ಷಕ್ಕೆ ಮೆಟ್ರೋ ಧಮಾಕಾ – ಒಂದೇ ದಿನ 8.93 ಲಕ್ಷ ಪ್ರಯಾಣಿಕರ ಸಂಚಾರ, 3.08 ಕೋಟಿ ಆದಾಯ
ವಿದ್ಯಾರ್ಥಿಗಳ ವಿನೂತನ ಹೊಸ ವರ್ಷಾಚರಣೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಸ್ವಿಸ್ ಸ್ಕೀ ರೆಸಾರ್ಟ್‌ನ ಬಾರ್‌ನಲ್ಲಿ ಸ್ಫೋಟ: ಹಲವರು ಸಾವು


