ಅತೀ ಹೆಚ್ಚು ಮಾತನಾಡುವ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಮತ್ತು ಸೋನು ಶ್ರೀನಿವಾಸ್ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆರ್ಯವರ್ಧನ್ ಗುರೂಜಿ ಅಡುಗೆ ಮಾಡುತ್ತಿರುವ ಸಮಯದಲ್ಲಿ, ಈ ಜಗಳ ನಡೆದಿದ್ದು ಸೋನು ಶ್ರೀನಿವಾಸ್ ಗೌಡ ಅವರನ್ನು ಸುಮ್ಮನಿರಿಸಲು ಆಡಬಾರದ ಮಾತುಗಳನ್ನು ಆಡಿದ್ದಾರೆ ಗುರೂಜಿ. ಅದನ್ನು ಕೇಳಿಸಿಕೊಂಡ ಸೋನು, ಗುರೂಜಿ ನೀವು ಆ ರೀತಿ ಮಾತಡಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.
ಊಟದ ವಿಚಾರಕ್ಕಾಗಿ ನಡೆದ ಮಾತು, ಜಗಳಕ್ಕೆ ತಿರುಗಿದ್ದು ಈ ಸಮಯದಲ್ಲಿ ಸುಮ್ಮನಿರುವಂತೆ ಸೋನು ಶ್ರೀನಿವಾಸ್ ಗೌಡಗೆ ಹೇಳುತ್ತಲೇ ಇರುತ್ತಾರೆ ಗುರೂಜಿ. ಆದರೆ, ಸೋನು ಮಾತನಾಡುತ್ತಲೇ ಹೋಗುತ್ತಾರೆ. ನೀವು ಮಾತನಾಡುತ್ತೀರಿ ಎಂದು ಗುರೂಜಿಗೆ ಹೇಳುತ್ತಾರೆ. ನಾನ್ ಸ್ಟಾಪ್ ಮಾತುಗಳನ್ನು ಕೇಳಿದ ಗುರೂಜಿ ಕೋಪ ಮಾಡಿಕೊಂಡು ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ? ಸುಮ್ನಿರ್ತಿಯಾ’ ಎಂದು ಆವಾಜ್ ಹಾಕುತ್ತಾರೆ. ಅದನ್ನು ಕೇಳಿಸಿಕೊಂಡ ಸೋನು, ನೀವು ಈ ರೀತಿ ಮಾತನಾಡಬೇಡಿ ಎಂದು ತಿರುಗೇಟು ನೀಡುತ್ತಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್
ಸೋನು ಶ್ರೀನಿವಾಸ್ ಗೌಡ ಸದಾ ಮಾತನಾಡುತ್ತಲೇ ಇರುತ್ತಾಳೆ ಮತ್ತು ಗೌರವ ಕೊಡುವುದಿಲ್ಲ ಎನ್ನುವುದನ್ನು ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕರು ಮಾತನಾಡಿದ್ದಾರೆ. ಇದೇ ಕಾರಣಕ್ಕಾಗಿ ಸುದೀಪ್ ಕೂಡ ಸೋನುಗೆ ಬುದ್ದಿವಾದ ಹೇಳಿದ್ದಾರೆ. ಆದರೂ, ಸೋನು ತಿದ್ದಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿಯೇ ಆಡಬಾರದ ಪದಗಳಿಂದ ಆಕೆಯನ್ನು ನಿಂದಿಸುತ್ತಲೇ ಇರುತ್ತಾರೆ ಬಿಗ್ ಬಾಸ್ ಸ್ಪರ್ಧಿಗಳು. ಅದರಲ್ಲಿ ಗುರೂಜಿ ಆಡಿದ ಈ ಮಾತೂ ಒಂದಾಗಿದೆ.