‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಭವ್ಯಾ ಗೌಡ ಅವರು ತ್ರಿವಿಕ್ರಮ್ (Trivikram) ಜೊತೆಗಿನ ಸ್ನೇಹ ವಿಚಾರವಾಗಿ ಹೈಲೆಟ್ ಆಗಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದಾರೆ. ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ ಎಂದು ಭವ್ಯಾಗೆ (Bhavya Gowda) ಗುರೂಜಿ ಕಿವಿ ಮಾತೊಂದನ್ನು ಹೇಳಿದ್ದಾರೆ. ಇದನ್ನೂ ಓದಿ:ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ
ಭವ್ಯಾ ಅವರನ್ನು ಕರೆದು ವಿದ್ಯಾಶಂಕರಾನಂದ ಸರಸ್ವತಿ ಅವರು ಭವಿಷ್ಯ ಹೇಳಿದ್ದಾರೆ. ಈ ವೇಳೆ ಅವರಿಗೆ ಎಚ್ಚರಿಕೆ ನೀಡುವ ಕೆಲಸ ಆಗಿದೆ. ಜಾತಕದ ಅನ್ವಯ ಪ್ರಸ್ತುತ ಶನಿ ದಶಾ ನಡೆಯುತ್ತಿದೆ. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಕೂದಲು ಉದುರುವುದು, ಹಲ್ಲು ನೋವು, ಜಾಯಿಂಟ್ ಪೇನ್ ಬರುತ್ತದೆ. ಶನಿ ಸಣ್ಣಪುಟ್ಟ ಸಮಸ್ಯೆ ಕೊಡುತ್ತಾನೆ. ಇದನ್ನು ನಿರ್ಲಕ್ಷ್ಯ ಮಾಡಬಹುದು. ಶನಿ ಹೋದಮೇಲೆ ಅದೂ ಹೋಗುತ್ತದೆ ಎಂದಿದ್ದಾರೆ ಗುರೂಜಿ.
2027ರಿಂದ ನಿನ್ನ ಭವಿಷ್ಯದಲ್ಲಿ ಸುವರ್ಣಯುಗ. ನೀನು ಫ್ಯಾಷನ್ ಇಂಡಸ್ಟ್ರೀಗೆ ಸಂಬಂಧಿಸಿ ಉದ್ಯಮ ಆರಂಭಿಸುತ್ತೀಯ ಎಂದಿದ್ದಾರೆ ಅವರು. ಆ ಬಳಿಕ ವೀಳ್ಯದ ಎಲೆ ಎತ್ತಲು ಗುರೂಜಿ ಹೇಳಿದರು. 15 ಎಲೆಯನ್ನು ಭವ್ಯಾ ಎತ್ತಿಕೊಟ್ಟರು. ನಿನಗೆ ಮೋಹ, ಪ್ರೀತಿ ಅಡ್ಡಿಯಾಗುತ್ತಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ:ಸೈಫ್ ಕುಟುಂಬಕ್ಕೆ ಸೇರಿದ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಕೇಂದ್ರದ ವಶಕ್ಕೆ?
ಇನ್ನೂ ಬಿಗ್ ಬಾಸ್‌ನಲ್ಲಿ ತ್ರಿವಿಕ್ರಮ್ ಅವರು ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಅದನ್ನು ಇಬ್ಬರೂ ಒಪ್ಪಿಕೊಂಡಿಲ್ಲ. ನಮ್ಮೀಬ್ಬರ ನಡುವೆ ಏನಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಇದನ್ನೇ ಗುರೂಜಿ ಪರೋಕ್ಷವಾಗಿ ಭವ್ಯಾಗೆ ಹೇಳಿದ್ರಾ? ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.