ಟಾಸ್ಕ್ ಗಳ ಜೊತೆ ಅಡುಗೆ ಮಾಡುವಲ್ಲೂ ಆರ್ಯವರ್ಧನ್ ಗುರೂಜಿ (Aryavardhan Guruji) ಬಿಗ್ ಬಾಸ್ (Bigg Boss Season 9) ಮನೆಯ ಸದಸ್ಯರ ಮನಸ್ಸು ಕದಿಯುತ್ತಿದ್ದಾರೆ. ಅನ್ನ ಸಾಂಬರ್ ಮಾಡದೇ ಇದ್ದರೆ, ನಾನು ಊಟವನ್ನೇ ಮಾಡೊಲ್ಲ ಅಂತ ಹಠ ಹಿಡಿದು ಕೂತಿದ್ದ ಗುರೂಜಿಯನ್ನು ಊಟಕ್ಕೆ ಕರೆದುಕೊಂಡು ಹೋಗಲು ರಾಕೇಶ್ ಅಡಿಗ ಹರಸಾಹಸವನ್ನೇ ಪಡಬೇಕಾಯಿತು. ಆದರೆ, ಗುರೂಜಿ ಮಾತ್ರ ಉಳಿದವರ ಇಷ್ಟದಂತೆ ಅಡುಗೆ ಮಾಡಿ ಕೊಡುತ್ತಿದ್ದಾರೆ.
ಗುರೂಜಿ ಈವರೆಗೂ ಮಾಡಿರುವ ಅಷ್ಟೂ ಅಡುಗೆಗಳು ಕೂಡ ದೊಡ್ಮನೆಯ ಸದಸ್ಯರಿಗೆ ಇಷ್ಟವಾಗಿವೆ. ಅವೆಲ್ಲಕ್ಕಿಂತಲೂ ಇಷ್ಟವಾಗಿದ್ದು ಎಗ್ಗಿ ಇಲ್ಲದೇ ಮಾಡಿರೋ ಎಗ್ ರೈಸ್. ಮೊಟ್ಟೆ ಇಲ್ಲದೇ ಎಗ್ ರೈಸ್ (Egg Rice) ಮಾಡಲು ಸಾಧ್ಯವಾ? ಬಹುಶಃ ಸಾಧ್ಯವೇ ಇಲ್ಲ. ಆದರೆ, ಬಿಗ್ ಬಾಸ್ ಮನೆಯಲ್ಲಿ ಅಂಥದ್ದೊಂದು ಮ್ಯಾಜಿಕ್ ಮಾಡಿ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಅವರ ಪ್ರಶಂಸೆಗೆ ಕಾರಣರಾಗಿದ್ದಾರೆ ಗುರೂಜಿ. ಆ ರೈಸ್ ಅನ್ನು ಹೇಗೆ ಮಾಡುವುದು ಎನ್ನುವ ರೆಸಿಪಿಯನ್ನೂ ಗುರೂಜಿ ಹೇಳಿಕೊಟ್ಟಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ
ಎಗ್ ಇಲ್ಲದ ಎಗ್ ರೈಸ್ ಅನ್ನು ತಿಂದ ರೂಪೇಶ್ ಶೆಟ್ಟಿ, ಆ ರೈಸ್ ಬಗ್ಗೆ ಹಾಡಿಹೊಗಳುತ್ತಾ ‘ಜಗತ್ತಿನಲ್ಲೇ ಎಗ್ ಇಲ್ಲದೇ ಎಗ್ ರೈಸ್ ಮಾಡುವ ವ್ಯಕ್ತಿ ಯಾರಾದರೂ ಇದ್ದರೆ, ಅವರು ಬದುಕಿದ್ದರೆ ಅದು ಕೇವಲ ಆರ್ಯವರ್ಧನ್ ಗುರೂಜಿ ಮಾತ್ರ’ ಎನ್ನುತ್ತಾರೆ. ಅದಕ್ಕೆ ಧ್ವನಿಗೂಡಿಸುವ ಸಾನ್ಯ ಅಯ್ಯರ್ (Sanya Iyer) ‘ಎಗ್ ಇಲ್ಲದೇ ಎಗ್ ರೈಸ್ ಮಾಡೋ ಏಕೈಕ ವ್ಯಕ್ತಿ ಅಂದರೆ, ಅದು ಮೊಟ್ಟೆವರ್ಧನ’ ಎಂದು ರೇಗಿಸುತ್ತಾರೆ. ಮೊಟ್ಟೆವರ್ಧನ ಅಂತ ಕರೆದಿದ್ದಕ್ಕೆ ಮೊಟ್ಟೆ ತಲೆ ಸವರಿಕೊಂಡು ಗುರೂಜಿ ನಗ್ತಾರೆ.
ನಂತರ ಎಗ್ ಇಲ್ಲದೇ ಎಗ್ ರೈಸ್ ಮಾಡೋ ವಿಧಾನವನ್ನೂ ಹೇಳಿಕೊಡುವ ಗುರೂಜಿ, ಹದವಾಗಿ ರೈಸ್ ಬೇಯಿಸೋದು, ಪೆಪ್ಪರ್ ಪೌಡರ್ ಹಾಕೋದು ಮತ್ತು ಅದನ್ನು ಬೆರೆಸುವ ರೀತಿಯನ್ನೂ ಹೇಳಿಕೊಟ್ಟು ಸಂಭ್ರಮಿಸುತ್ತಾರೆ. ಅಲ್ಲದೇ, ಈಗಾಗಲೇ ರೂಪೇಶ್ ಶೆಟ್ಟಿಗೆ ಮಗನ ಸ್ಥಾನ ಕೊಟ್ಟಿರುವ ಗುರೂಜಿ ‘ಸ್ವಲ್ಪ ಮಗನ ಪ್ರೀತಿಯನ್ನೂ ರೈಸ್ ಗೆ ಬೆರೆಸಿದರೆ ಅದ್ಭುತವಾದ ಎಗ್ ರೈಸ್ ಆಗತ್ತೆ’ ಅಂತ ರೂಪೇಶ್ ಶೆಟ್ಟಿಯನ್ನು (Rupesh Shetty) ಇಂಪ್ರೆಸ್ ಮಾಡುತ್ತಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಥೆ ಶುರುವಾಗಿದೆ. ಗುರೂಜಿ ಮೇಲೂ ಮನೆಯವರಿಗೆ ಪ್ರೀತಿ ಹೆಚ್ಚಾಗುತ್ತಲೇ ಸಾಗುತ್ತಿದೆ.