ಗುರುಗ್ರಾಮ: ಸಾಮಾನ್ಯ ಜನರೊಂದಿಗೆ ಸಂಪರ್ಕವನ್ನು ಹೆಚ್ಚಿಸಲು ಮತ್ತು ಪೊಲೀಸರು ಕೆಲಸ ಮಾಡುವುದು ಜನರಿಗಾಗಿ ಎಂದು ತೋರಿಸಲು, ಗುರುಗ್ರಾಮ್ ನೂತನ ಮತ್ತು ಮೊದಲ ಮಹಿಳಾ ಪೊಲೀಸ್ ಕಮಿಷನರ್ ಕಲಾ ರಾಮಚಂದ್ರನ್ ಪ್ರತಿದಿನ ಬೆಳಗ್ಗೆ 10 ರಿಂದ 11 ವರೆಗೆ ಗ್ರಾಮದ ನಿವಾಸಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದಾರೆ.
ಜಿಲ್ಲಾಧಿಕಾರಿಗಳು, ಸಹಾಯಕ ಪೊಲೀಸ್ ಆಯುಕ್ತರು ಮತ್ತು ಠಾಣಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಐದು ಗಂಟೆಗಳ ಕಾಲ ಮ್ಯಾರಥಾನ್ ಸಭೆ ನಡೆಸಿದರು. ಸಭೆಯ ನಂತರ ರಾಮಚಂದ್ರನ್ ಅವರು, ನಾವು ಇನ್ನು ಮುಂದೆ ದಿನನಿತ್ಯ ಗ್ರಾಮದ ಜನರನ್ನು ಭೇಟಿಯಾಗುತ್ತೇನೆ ಎಂದು ಸಾರ್ವಜನಿಕ ಸಭೆಗಳಿಗೆ ಆದೇಶಗಳನ್ನು ನೀಡಿದರು. ಇದು ನಗರದ ನಿವಾಸಿಗಳೊಂದಿಗೆ ನೇರವಾಗಿ ಸಾಮಾಜಿಕ ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ
Advertisement
Advertisement
ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಗ್ರಾಮದ ನಿವಾಸಿಗಳಿಗೆ ಅವಶ್ಯಕತೆ ಇರುವಾಗ ಒಂದು ಗಂಟೆಯೊಳಗೆ ಜನರನ್ನು ಸಂಪರ್ಕಿಸಬಹುದು. ಪೋಲೀಸಿಂಗ್‍ಗೆ ಸಂಬಂಧಿಸಿದ ತಮ್ಮ ಕುಂದುಕೊರತೆಗಳು, ಸಮಸ್ಯೆಗಳು ಮತ್ತು ಸಲಹೆಗಳನ್ನು ನೀಡಬಹುದು. ಇದರಿಂದ ಗ್ರಾಮದ ಎಲ್ಲರಿಗೂ ಹೆಚ್ಚು ಸುರಕ್ಷತೆಯ ವಾತಾವರಣ ಒದಗಿಸಬಹುದು ಎಂದು ಹೇಳಿದರು.
Advertisement
ಸಂಚಾರ ಸುಗಮಗೊಳಿಸಲು, ರಸ್ತೆಗಳ ದಟ್ಟಣೆ ಕಡಿಮೆ ಮಾಡಲು ಮತ್ತು ವೇಗವಾಗಿ ವಾಹನ ಓಡಿಸುವವರನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಅವರು ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಗುರುಗ್ರಾಮದಲ್ಲಿ ಜನರ ಅಪಘಾತಗಳಿಗೆ ಕಾರಣವಾಗುವ ಅನೇಕ ಪ್ರದೇಶಗಳಿವೆ. ಆ ಕಡೆ ನಾವು ಹೆಚ್ಚು ಗಮನವನ್ನು ಕೊಡುತ್ತೇವೆ. ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ಅಮೂಲ್ಯ ಜೀವಗಳನ್ನು ಉಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
Advertisement
ನಾನು ಡಿಸಿಪಿ(ಟ್ರಾಫಿಕ್) ಅವರೊಂದಿಗೆ ನಗರದ ಹಲವಾರು ರಸ್ತೆಗಳಿಗೆ ಭೇಟಿ ನೀಡಿದ್ದೇನೆ. ಸಂಚಾರ ನಿಯಮಗಳು ಮತ್ತು ಹೆಚ್ಚು ವೇಗದಲ್ಲಿ ವಾಹನವನ್ನು ಓಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನಾವು ಜನಸಾಮಾನ್ಯರಲ್ಲಿ ಸಂಚಾರ ಜಾಗೃತಿಯನ್ನು ಹೆಚ್ಚಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!
ರಾಮಚಂದ್ರನ್ ಅವರು ಗುರುಗ್ರಾಮದಲ್ಲಿ ವರದಿಯಾಗುತ್ತಿರುವ ಅಪರಾಧಗಳ ಪ್ರಕರಣಗಳು ಮತ್ತು ಕಳೆದ ಹಲವಾರು ತಿಂಗಳುಗಳಲ್ಲಿ ವರದಿಯಾದ ಪ್ರಮುಖ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು.