– ಮಹಿಳೆ ವಿರುದ್ಧ ಕ್ಯಾಬ್ ಚಾಲಕ ದೂರು
ಚಂಡೀಗಢ: ಮಹಿಳೆಯೊಬ್ಬಳು ಕ್ಯಾಬ್‌ನಲ್ಲಿ ನೂರಾರು ಕಿ.ಮೀ. ಸಂಚರಿಸಿ ಹಣ ಕೇಳಿದ ಕ್ಯಾಬ್ ಚಾಲಕನಿಗೆ (Cab Driver) `ಲೈಂಗಿಕ ದೌರ್ಜನ್ಯ’ ಹಾಕ್ತೀನಿ ಅಂತ ಬೆದರಿಸಿರೋ ಘಟನೆ ಗುರುಗ್ರಾಮದಲ್ಲಿ (Gurugram )ನಡೆದಿದೆ.
ಜ್ಯೋತಿ ದಲಾಲ್ ಎಂಬ ಮಹಿಳೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಜಿಯಾವುದ್ದೀನ್ ಎಂಬ ಚಾಲಕನ ಕಾರು ಹತ್ತಿ ಹಲವು ಕಡೆ ಓಡಾಡಿದ್ದಾಳೆ. ಜೊತೆಗೆ ಚಾಲಕನ ಬಳಿಯೇ 700 ರೂ. ಹಣ ಪಡೆದುಕೊಂಡಿದ್ದಾಳೆ. ಮಧ್ಯಾಹ್ನದ ವೇಳೆಗೆ ಹಣ ಪಾವತಿಸಿ ಪ್ರಯಾಣವನ್ನು ಕೊನೆಗೊಳಿಸುವಂತೆ ಕ್ಯಾಬ್ ಡ್ರೈವರ್ ಕೇಳಿದಾಗ ಪೊಲೀಸ್ ಕಂಪ್ಲೆಂಟ್ ಕೊಡೋದಾಗಿ ಬೆದರಿಸಿದ್ದಾಳೆ. ಆದರೂ, ಚಾಲಕ ಸೆಕ್ಟರ್ 29 ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾನೆ. ಅಲ್ಲಿ ಗಲಾಟೆ ಮಾಡಿಕೊಂಡು ಆಕೆ ಪೊಲೀಸ್ ಠಾಣೆಯಿಂದ ಹೊರ ಹೋದ ನಂತರ ಚಾಲಕ ಪೂರ್ತಿ ಕಥೆ ಬಿಚ್ಚಿಟ್ಟಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ- ರಾಜ್ಯವೇ ತಲೆ ತಗ್ಗಿಸೋ ಘಟನೆ: ವಿಜಯೇಂದ್ರ
ಅಂದಹಾಗೆ, ಜ್ಯೋತಿ ದಲಾಲ್ ಎಂಬ ಮಹಿಳೆಯದ್ದು ಇದೇ ವೃತ್ತಿಯಾದಂತಿದೆ. ಈಕೆ ಈ ಹಿಂದಿನ ಕ್ಯಾಬ್ ಡ್ರೈವರ್ 2,000 ಹಾಗೂ ಬ್ಯೂಟಿ ಪಾರ್ಲರ್‌ನಲ್ಲಿ 20,000 ರೂ. ಕೊಡಬೇಕಿತ್ತಂತೆ. ಈಕೆ ವಿರುದ್ಧ ಇದೀಗ ಸೆಕ್ಟರ್ 29 ಪೊಲೀಸರು ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಡಿಸಿಎಂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ಯಾಕೆ? – ರಾಜ್ಯದಲ್ಲಿರೋದು ಹೆಬ್ಬೆಟ್ಟು ಗೃಹ ಸಚಿವರಾ?: HDK ಪ್ರಶ್ನೆ

