ನವದೆಹಲಿ: ಹೋಟೆಲ್‍ನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಲು ಬಿಹಾರ ಕ್ರಿಕೆಟ್ ಮುಖ್ಯಸ್ಥರು ಪ್ರಯತ್ನಿಸುತ್ತಿದ್ದರು ಎಂದು ಗುರುಗ್ರಾಮದ ಮಹಿಳೆ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯಾಧ್ಯಕ್ಷ ರಾಕೇಶ್ ತಿವಾರಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ರಾಕೇಶ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
Advertisement
Advertisement
ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, ಕಳೆದ ವರ್ಷ ಜುಲೈನಲ್ಲಿ ಈ ಘಟನೆ ನಡೆದಿತ್ತು. ಭಾನುವಾರ ಮಹಿಳೆ ದೂರು ನೀಡಿದ್ದು, ಮರುದಿನ ಎಫ್‍ಐಆರ್ ದಾಖಲಾಗಿದೆ. ಕಳೆದ ವರ್ಷ ದೆಹಲಿಯಲ್ಲಿ ಬಿಹಾರ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರನ್ನು ಜಾಹೀರಾತು ಸಂಸ್ಥೆಯ ನಿರ್ದೇಶಕಿ ಬಾಕಿ ಪಾವತಿಗಾಗಿ ಭೇಟಿಯಾದಾಗ ಅವರು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಡ್ರಗ್ಸ್ ನಶೆಯಲ್ಲಿ ಕಲರ್ ಲೈಟ್ ನೋಡಿದ್ರೆ ಮತ್ತಷ್ಟು ಕಿಕ್ ಸಿಕ್ತಿತ್ತು
Advertisement
Advertisement
ಗುರುಗ್ರಾಮದಲ್ಲಿ ವಾಸಿಸುವ ಮಹಿಳೆ ತನ್ನ ದೂರಿನಲ್ಲಿ ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥ ಕಳೆದ ವರ್ಷ ಮಾರ್ಚ್‍ನಲ್ಲಿ ಆಯೋಜಿಸಿದ್ದ ಟೂರ್ನಮೆಂಟ್‍ಗೆ ಜಾಹೀರಾತು ಕೆಲಸಕ್ಕಾಗಿ ತನ್ನ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಕೆಲಸ ಮುಗಿದರೂ ಸಹ ನಮಗೆ ಅವರು ಹಣ ನೀಡಿಲ್ಲ. ಇದನ್ನು ಕೇಳಲು ಹೋದಾಗ ನನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ.
ಕಳೆದ ವರ್ಷ ಜುಲೈ 12 ರಂದು, ರಾಕೇಶ್ ತಿವಾರಿ ದೆಹಲಿಯಲ್ಲಿದ್ದಾಗ, ಮಹಿಳೆಯು ಬಾಕಿಯನ್ನು ಪಾವತಿಸಲು ವಿನಂತಿ ಮಾಡಿಕೊಂಡಿದ್ದು, ಅವರನ್ನು ಭೇಟಿ ಮಾಡಲು ಹೋಗಿದ್ದಾರೆ. ಆದರೆ ಈ ವೇಳೆ ರಾಕೇಶ್ ಮಹಿಳೆ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು, ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ತಪ್ಪಿತು ಮಹಾ ದುರಂತ – ಕೂದಲೆಳೆ ಅಂತರದಲ್ಲಿ ನೂರಾರು ಜನ ಪಾರು
ಪ್ರಸ್ತುತ ಈ ಪ್ರಕರಣದಲ್ಲಿ ರಾಕೇಶ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ರಾಕೇಶ್ ತಿವಾರಿ ಅವರು ದೇಶದ ಉನ್ನತ ಕ್ರಿಕೆಟ್ ಆಡಳಿತಗಾರರು ಮತ್ತು ಪ್ರಮುಖ ರಾಜಕೀಯ ನಾಯಕರಾಗಿದ್ದಾರೆ.