ಲಕ್ನೋ: 14 ವರ್ಷದ ಬಾಲಕಿಯ ಮೇಲೆ 10-15 ಪುರುಷರು ಅನೇಕ ಬಾರಿ ಅತ್ಯಾಚಾರವೆಸಗಿದ ಘಟನೆ ಗುರುಗ್ರಾಮದ(Gurugram) ಸ್ಥಳೀಯ ಸ್ಪಾವೊಂದರಲ್ಲಿ(Spa) ನಡೆದಿದೆ.
ಅಪ್ರಾಪ್ತೆಯ ದೂರಿನ ಆಧಾರದ ಮೇಲೆ ಸ್ಪಾ ಆಪರೇಟರ್, ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಜುಮಾ, ಪೂಜಾ, ರುಬೆಲ್ ಹಾಗೂ ಸದ್ದಾಂ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿ ಬಾಲಕಿಯು ಮಾತನಾಡಿ, ಇದು ಪೊಲೀಸರಿಗೆ(Police) ನೀಡುತ್ತಿರುವ 2ನೇ ದೂರಾಗಿದೆ. ಮೊದಲನೇ ಬಾರಿಗೆ ಆರೋಪಿಗಳಲ್ಲಿ ಒಬ್ಬಾತ ತನ್ನನ್ನು ಪ್ರೀತಿಸುವುದಾಗಿ ಹೇಳಿದ್ದು, ಇದರಿಂದಾಗಿ ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದ. ಈ ಹಿನ್ನೆಲೆಯಲ್ಲಿ ದೂರನ್ನು ಹಿಂತೆಗೆದುಕೊಂಡಿದ್ದೆ. ಆದರೆ ದೂರು ಹಿಂತೆಗೆದುಕೊಂಡ ನಂತರ ಆರೋಪಿಯು ತನ್ನನ್ನು ಮದುವೆ ಆಗಲು ನಿರಾಕರಿಸಿದ್ದಾನೆ. ಅಷ್ಟೇ ಅಲ್ಲದೇ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್
ಬಾಲಕಿಯು ನೀಡಿರುವ ದೂರಿನ ಪ್ರಕಾರ, ಆರೋಪಿ ಪೂಜಾ ಎಂಬಾಕೆ ಒಂದು ತಿಂಗಳ ಹಿಂದೆ ಕ್ಲಿನಿಕ್‍ವೊಂದರಲ್ಲಿ ಕೆಲಸ ನೀಡಿದ್ದರು. ಆದರೆ ಕೇವಲ 2 ದಿನಗಳ ನಂತರ ಕೆಲಸದಿಂದ ತೆಗೆದುಹಾಕಲಾಯಿತು. ಅದಾದ ಬಳಿಕ ಪೂಜಾಳನ್ನು ಮತ್ತೆ ಭೇಟಿಯಾದಾಗ ಗುರುಗ್ರಾಮದ ಮಾಲವೊಂದರಲ್ಲಿರುವ ಸ್ಪಾದಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ನೀಡಿದ್ದಳು.
ಅಲ್ಲಿ ಹೋದ ಮೊದಲ ದಿನದಿಂದಲೇ ನನ್ನ ಮೇಲೆ ಅತ್ಯಾಚಾರ ನಡೆದಿದೆ. ಅಲ್ಲಿ ವ್ಯಕ್ತಿಯೊಬ್ಬನೊಂದಿಗೆ ನನ್ನನ್ನು ಬಲವಂತವಾಗಿ ಸ್ಪಾದ ಕೊಠಡಿಯೊಳಗೆ ಕಳುಹಿಸಿದ್ದರು. ಅಲ್ಲಿ ಆತ ಬಲವಂತವಾಗಿ ಅಶ್ಲೀಲ ವೀಡಿಯೋವನ್ನು ತೊರಿಸುವುದರ ಮೂಲಕ ಅತ್ಯಾಚಾರವೆಸಗಿದ್ದಾನೆ. ಹೀಗೆ ಕೇವಲ 5 ದಿನಗಳಲ್ಲಿ 10-15 ವ್ಯಕ್ತಿಗಳು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ದಿವಂಗತ ಉಮೇಶ್ ಕತ್ತಿ ನಿವಾಸಕ್ಕೆ ಈಶ್ವರ ಖಂಡ್ರೆ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ
ಘಟನೆಗೆ ಸಂಬಂಧಿಸಿ ಗುರುಗ್ರಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಎಫ್‍ಐಆರ್(FIR) ದಾಖಲಾಗಿದೆ.