ಲಕ್ನೋ: ಉತ್ತರ ಪ್ರದೇಶದ (Uttar Pradesh) ಗುರುಗ್ರಾಮ್‌ನ (Gurugram) ವ್ಯಕ್ತಿಯೊಬ್ಬನ ಕೊಳೆತ ಶವ ಗಾಜಿಯಾಬಾದ್‌ನ ಕಾಲುವೆ ಒಂದರಲ್ಲಿ ಪತ್ತೆಯಾಗಿದೆ. ಆತ ಮನೆಯಿಂದ ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಸಾವಿಗೀಡಾದ ವ್ಯಕ್ತಿಯನ್ನು ಪ್ರಿನ್ಸ್ ರಾಣಾ ಎಂದು ಗುರುತಿಸಲಾಗಿದೆ. ಆತ ಉತ್ತರ ಪ್ರದೇಶದ ಬಿಜ್ನೋರ್‌ನವನು. ಗುರುಗ್ರಾಮ್‌ನಲ್ಲಿ ಆ್ಯಪ್ ಅಗ್ರಿಗೇಟರ್‌ನಲ್ಲಿ ಯೋಜನಾ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ.
- Advertisement -
- Advertisement -
ಕಳೆದ ಬುಧವಾರ, ಪ್ರಿನ್ಸ್ ತಾನು ಎಲ್ಲಿಗೆ ಹೋಗುತ್ತಿದ್ದೇನೆಂದು ತಿಳಿಸದೆ ಮನೆಯಿಂದ ಹೊರಗೆ ಹೋಗಿದ್ದ. ತಮ್ಮ ಫೋನ್‌ನ್ನು ಸಹ ಬಿಟ್ಟು ಹೋಗಿದ್ದ. ಮರುದಿನ ಆತನ ಪತ್ನಿ ಪೊಲೀಸರನ್ನು ಸಂಪರ್ಕಿಸಿ, ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಬಳಿಕ ಪ್ರಿನ್ಸ್ ಫೋನ್‌ನ ಬ್ರೌಸಿಂಗ್ ಹಿಸ್ಟರಿ (Search History) ಪರಿಶೀಲಿಸಿದಾಗ ಆತ ಆತ್ಮಹತ್ಯೆಗೆ ಸೂಕ್ತ ಜಾಗದ ಬಗ್ಗೆ ಹುಡುಕಿದ್ದ ಎಂದು ತಿಳಿದು ಬಂದಿದೆ.
- Advertisement -
- Advertisement -
ಮಂಗಳವಾರ ಸಂಜೆ ಗಾಜಿಯಾಬಾದ್‌ನ ಗಂಗನಹರ್ ಕಾಲುವೆಯ ಬಳಿ ಶವ ಪತ್ತೆಯಾಗಿದೆ. ಪೊಲೀಸರು ಕೊಳೆತ ಶವವನ್ನು ವಶಕ್ಕೆ ಪಡೆದಾಗ ಪ್ರಿನ್ಸ್‌ನ ಆಧಾರ್ ಕಾರ್ಡ್ ಇರುವ ಕೈಚೀಲ ಸಿಕ್ಕಿತು. ನಂತರ, ಆತನ ಕುಟುಂಬದ ಸದಸ್ಯರು ಗುರುತನ್ನು ದೃಢಪಡಿಸಿದರು. ಶವಪರೀಕ್ಷೆಯು ಸಾವಿಗೆ ಕಾರಣವನ್ನು ಬಹಿರಂಗಪಡಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.