ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ಇಂದು ರಾಯರ 404ನೇ ಪಟ್ಟಾಭಿಷೇಕ ಮಹೋತ್ಸವ

Public TV
1 Min Read
Raichuru Mantralaya

ರಾಯಚೂರು: ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ (Guru Raghavendra Swamy Mutt) ಗುರುವೈಭವೋತ್ಸವ ಸಂಭ್ರಮದಲ್ಲಿ ರಾಯರ 404ನೇ ಪಟ್ಟಾಭಿಷೇಕ ನೆರವೇರಿತು.

Raichuru Mantralaya 1

ದೇಶದ ಮೂಲೆ ಮೂಲೆಯಿಂದ ಆಗಮಿಸಿರುವ ರಾಯರ ಭಕ್ತರು ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ರಾಯರಿಗೆ ಪಟ್ಟಾಭಿಷೇಕವಾಗಿ 403 ವರ್ಷಗಳು ಕಳೆದಿದ್ದು, ಈಗ 404ನೇ ಪಟ್ಟಾಭಿಷೇಕದಲ್ಲಿ, ರಾಘವೇಂದ್ರ ತೀರ್ಥರ ಶಿಷ್ಯ ಯತಿ ಯೋಗೀಂದ್ರ ತೀರ್ಥರ ಪಾರ್ಥನೆಯಂತೆ ಮೂಲ ಪಾದುಕೆಗಳ ಪಟ್ಟಾಭಿಷೇಕ ನೆರವೇರಿಸಲಾಯಿತು. ಮಠದ ಪ್ರಸ್ತುತ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ರಾಯರ ಮೂಲ ಪಾದುಕೆಗಳಿಗೆ ಪಟ್ಟಾಭಿಷೇಕ ನೆರವೇರಿಸಿದರು.ಇದನ್ನೂ ಓದಿ: ವಿವಿಗಳಿಂದ ಲಾಭವಿಲ್ಲ ಎಂದಿದೆ ಕಾಂಗ್ರೆಸ್ ಸರ್ಕಾರ.. ಶಿಕ್ಷಣವೆಂದರೆ ವ್ಯಾಪಾರವಲ್ಲ: ಅಶೋಕ್ ಕಿಡಿ

ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆ ರಾಯರ ಮೂಲವೃಂದಾವನಕ್ಕೆ ಅಭಿಷೇಕ, ರಾಯರ ಸಮಗ್ರ ಗ್ರಂಥಗಳ ಪಾರಾಯಣ, ಭಜನಾ ಮಂಡಳಿಗಳ ಸಾಮೂಹಿಕ ಭಜನೆ, ಪ್ರವಚನ, ರಾಯರ ಪಾದುಕೆಗಳ ಪೂಜೆ, ಮುತ್ತುರತ್ನಗಳಿಂದ ಅಭಿಷೇಕ, ಪುಷ್ಪವೃಷ್ಠಿ, ಫಲಸಮರ್ಪಣೆ, ಮಂಗಳಾರತಿ ಹಾಗೂ ಪಾದುಕೆಗಳ ರಥೋತ್ಸವ ನಡೆದವು. ರಾಯರ ಪಟ್ಟಾಭಿಷೇಕ ಹಾಗೂ ಜನ್ಮದಿನ ಉತ್ಸವವನ್ನು ಗುರುವೈಭವೋತ್ಸವವಾಗಿ ಮಂತ್ರಾಲಯ ಮಠದಲ್ಲಿ ಮಾರ್ಚ್ 1ರಿಂದ 6ರವರೆಗೆ ಆರು ದಿನಗಳ ಕಾಲ ಆಚರಿಸಲಾಗುತ್ತಿದೆ.

Raichuru Mantralaya 2

ಇಂದು ಆಂಧ್ರಪ್ರದೇಶ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಗುರುವೈಭವೋತ್ಸವದಲ್ಲಿ ಭಾಗವಹಿಸಿ, ರಾಯರ ದರ್ಶನ ಪಡೆದರು. ಬಳಿಕ ಮಠದ ಮುಂಭಾಗದಲ್ಲಿ ಮಧ್ವದ್ವಾರದ ಕಾರಿಡಾರ್ ಉದ್ಘಾಟನೆ ಮಾಡಿದರು. ಸಂಜೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.ಇದನ್ನೂ ಓದಿ: ಕೋಲ್ಕತ್ತಾ| ತಂದೆ, ಮಗಳು ನೇಣಿಗೆ ಶರಣು – ಮಗಳ ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ

 

Share This Article