ರಾಯಚೂರು: ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಗುರುವೈಭವೋತ್ಸವ ಸಂಭ್ರಮ ಮನೆಮಾಡಿದೆ. ಫೆ.18ರಿಂದ 24ರವರೆಗೆ ಏಳು ದಿನಗಳ ಕಾಲ ರಾಯರ ಪಟ್ಟಾಭಿಷೇಕ, ವರ್ಧಂತಿ ಉತ್ಸವಗಳು ಸೇರಿ ನಾನಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಗುರುವೈಭವೋತ್ಸವಕ್ಕೆ ಇಂದು (ಫೆ.18) ಚಾಲನೆ ಸಿಕ್ಕಿದ್ದು, ನಾಳೆ ಗುರುರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವ ಜರುಗಲಿದೆ. ರಾಘವೇಂದ್ರ ತೀರ್ಥರ ಶಿಷ್ಯ ಯತಿ ಯೋಗಿಂದ್ರ ತೀರ್ಥರ ಪಾರ್ಥನೆಯಂತೆ ಮೂಲ ಪಾದುಕೆಗಳ ಪಟ್ಟಾಭಿಷೇಕ ನೆರವೇರಿಸಲಾಗುತ್ತದೆ. ಮಠದ ಪ್ರಸ್ತುತ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ರಾಯರ ಮೂಲ ಪಾದುಕೆಗಳಿಗೆ ಪಟ್ಟಾಭಿಷೇಕ ನೆರವೇರಿಸಲಿದ್ದಾರೆ. ಇದನ್ನೂ ಓದಿ: ರಂಜಾನ್ | ಇಡೀ ತಿಂಗಳು ಸಂಜೆ 4ಕ್ಕೆ ಕಚೇರಿಯಿಂದ ತೆರಳಲು ಮುಸ್ಲಿಂ ನೌಕರರಿಗೆ ಅವಕಾಶ: ತೆಲಂಗಾಣ ಸರ್ಕಾರ
ಇನ್ನೂ ಫೆ.24ರಂದು ರಾಯರ 431ನೇ ಜನ್ಮದಿನವನ್ನ ವರ್ಧಂತಿ ಉತ್ಸವವಾಗಿ ಮಠದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಏಳು ದಿನಕಾಲ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಗುತ್ತದೆ.

