ಬೆಂಗಳೂರು: ವಿಶೇಷ ಅಲಂಕಾರಕ್ಕೆ ಹಾಗೂ ಪೂಜೆಗೆ ಪ್ರಸಿದ್ಧಿಯಾಗಿರುವ ಬೆಂಗಳೂರು ಜೆ.ಪಿ ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ (Satya Ganapathi Shiradi Sai Trust) ವಿಶೇಷವಾಗಿ ಗುರುಪೂರ್ಣಿಮೆ ಆಚರಿಸಲಾಯಿತು.
ಸಾಯಿ ಬಾಬಾರ (Sai Baba) ಮೂರ್ತಿಯನ್ನು ಹೂವು ಹಾಗೂ ಹಣ್ಣಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಜೊತೆಗೆ ಬೆಳಿಗ್ಗೆ 7 ಗಂಟೆಯಿಂದ ವಿಶೇಷ ಪೂಜೆ ಮತ್ತು ಹೋಮಗಳನ್ನು ನಡೆಸಲಾಯಿತು. ಇದನ್ನೂಓದಿ: ಜೀವನದ ರಿಯಲ್ ಹೀರೋಯಿನ್ ಬಗ್ಗೆ ಗುಡ್ ನ್ಯೂಸ್ ಕೊಡಲು ಸಜ್ಜಾದ ‘ಕಾಟೇರ’ ಡೈರೆಕ್ಟರ್
Advertisement
Advertisement
ಪ್ರತಿವರ್ಷದಂತೆ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸಲಾಯಿತು, ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಾಬಾರ ʻಸಬ್ ಕಾ ಮಾಲೀಕ್ ಏಕ್ ಹೇʼ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಹಣ್ಣುಗಳು, ವಿಶೇಷ ಹೂವುಗಳಿಂದ ದೇವಸ್ಥಾನವನ್ನು ಆಲಂಕರಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
Advertisement
Advertisement
ಅಭಿಷೇಕ, ಅಲಂಕಾರ, ಸಾಯಿ ಮಂತ್ರ ಹೋಮ, ಸುದರ್ಶನ ಹೋಮ, ದತ್ತಾತ್ರೇಯ ಹೋಮ ಸೇರಿದಂತೆ ಇನ್ನಿತರ ಪೂಜೆಗಳನ್ನು ಆಯೋಜಿಸಲಾಗಿತ್ತು, ಸಾವಿರಾರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಇದನ್ನೂಓದಿ: ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲು
ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ಕಳೆದ ವರ್ಷವೂ ಶಿರಡಿ ಬಾಬಾರಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ಗುರುಪೂರ್ಣಿಮೆ ಆಚರಿಸಲಾಗಿತ್ತು. 20 ಸಾವಿರ ತೆಂಗಿನಕಾಯಿ, 2,500 ಪರಂಗಿ, ಹಲಸಿನ ಹಣ್ಣು, 5 ಸಾವಿರ ಬೆಲ್ಲ, 25 ಸಾವಿರಕ್ಕೂ ಹೆಚ್ಚು ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳ ಮೂಲಕ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೇ ಕಳೆದ ವರ್ಷ ಗಣೇಶ ಚುತುರ್ಥಿಯಲ್ಲಿ ನೋಟುಗಳ ಮೂಲಕ ದೇವಸ್ಥಾನ ಅಲಂಕರಿಸಿ ಗಮನ ಸೆಳೆದಿತ್ತು. ಇದನ್ನೂಓದಿ: ಕೆಆರ್‌ಎಸ್ ಡ್ಯಾಂ ಭರ್ತಿಗೆ ಕೇವಲ 2 ಅಡಿಯಷ್ಟೇ ಬಾಕಿ