ಚಂಡೀಗಢ: ಹರ್ಯಾಣ ಮತ್ತು ಪಂಜಾಬ್ ನಲ್ಲಿ ಹಿಂಸಾಚಾರ ನಡೆಸಲು ಸ್ವತಃ ಬಾಬಾ ರಾಮ್ ರಹೀಂ ಸಿಂಗ್ ಕೋರ್ಟ್ ಆವರಣದಲ್ಲೇ ಸೂಚನೆ ನೀಡಿದ್ದ ಎನ್ನುವ ಶಾಕಿಂಗ್ ಸುದ್ದಿಯನ್ನು ಪೊಲೀಸರು ತಿಳಿಸಿದ್ದಾರೆ.
ಹೌದು, ಸಿಬಿಐ ಕೋರ್ಟ್ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ ಬಳಿಕ ಬಾಬಾ ಕೆಂಪು ಸೂಟ್ಕೇಸ್ ತರಲು ಬೇಡಿಕೆ ಇರಿಸಿದ್ದ. ಈ ಬ್ಯಾಗ್ ನಲ್ಲಿ ನನ್ನ ಬಟ್ಟೆಗಳು ಇದೆ ಎಂದು ಹೇಳಿದ್ದ. ಆದರೆ ಈ ಬ್ಯಾಗ್ ಅನ್ನು ತರುವ ಮೂಲಕ ಆಪ್ತನ ಜೊತೆ ಹಿಂಸಾಚಾರ ನಡೆಸುವಂತೆ ಸೂಚನೆ ನೀಡಿದ್ದ ಎಂದು ಇನ್ಸ್ ಪೆಕ್ಟರ್ ಜನರಲ್ ಕೆಕೆ ರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್ಯುವಿ)ಯಿಂದ ಕೆಂಪು ಸೂಟ್ಕೇಸ್ ತೆಗೆದ ಬಳಿಕ ಹಿಂಸಾಚಾರ ನಡೆಯಿತು. ಕೆಂಪು ಬ್ಯಾಗ್ ತರಲು ಸೂಚನೆ ನೀಡುವ ಮೂಲಕ ಬಾಬಾ ಹಿಂಸಾಚಾರಕ್ಕೆ ಸಿಗ್ನಲ್ ನೀಡಿದ್ದ. ಹಿಂಸಾಚಾರ ಹೆಚ್ಚಾದರೆ ಭಕ್ತರ ಜೊತೆ ಸೇರಿ ಪಾರಾಗಬಹುದು ಎನ್ನುವ ಉಪಾಯವನ್ನು ಮಾಡಿದ್ದ ಎಂದು ಅವರು ಹೇಳಿದ್ದಾರೆ.
Advertisement
ಸಿರ್ಸಾದಿಂದ ಪಂಚಕುಲಾಗೆ ಬರುವಾಗ ರಾಮ್ ರಹೀಂ ಜೊತೆ 80 ಕಾರುಗಳು ಬಂದಿತ್ತು. ಒಂದು ವೇಳೆ ದೋಷಿ ಎಂದು ಸಾಬೀತಾದರೆ ಈ ಕಾರುಗಳ ಮೂಲಕ ಪರಾರಿಯಾಗಲು ಸಿದ್ಧತೆ ನಡೆದಿತ್ತು. ಪಂಚಕುಲಾದ ಥಿಯೇಟರ್ ಒಂದರಲ್ಲಿ ಈ ಎಲ್ಲ ಕಾರುಗಳನ್ನು ಪಾರ್ಕ್ ಮಾಡಲಾಗಿತ್ತು ಎಂದು ಕೆಕೆ ರಾವ್ ತಿಳಿಸಿದರು.
Advertisement
ಇದನ್ನೂ ಓದಿ: ಬಾಬಾಗೆ 20 ವರ್ಷ ಜೈಲು ಶಿಕ್ಷೆ ಆಗಿದ್ದು ಹೇಗೆ? ಇಂದು ಕೋರ್ಟ್ ನಲ್ಲಿ ಏನಾಯ್ತು?