ಚಂಢೀಗಢ: ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾದ ಬೆನ್ನಲ್ಲೇ ಹರಿಯಾಣದ ಪಂಚಕುಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಆರೋಪ ಸಾಬೀತಾಗುತ್ತಿದ್ದಂತೆಯೇ ಕೋರ್ಟ್ ಎದುರೇ ನೆರೆದಿದ್ದ ಬಾಬಾ ಭಕ್ತರು ರಾಷ್ಟ್ರೀಯ ಸುದ್ದಿವಾಹಿನಿಯ ಮೂರು ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೇ 10ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ. ಘಟನೆಯಿಂದಾಗಿ 32 ಮಂದಿ ಬಾಬಾ ಭಕ್ತರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ 350ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.
Advertisement
Advertisement
Advertisement
ಹರಿಯಾಣದ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಅಲ್ಲಿನ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್, ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ಜಗ್ಗದ ಬಾಬಾ ಭಕ್ತರು ಹಿಂಸಾಚಾರಕ್ಕೆ ತಿರುಗಿದ್ದಾರೆ. ಪೊಲೀಸರ ಮೇಲೆಯೇ ರಾಮ್ ರಹೀಂ ಭಕ್ತರಿಂದ ಕಲ್ಲು ತೂರಾಟ, ಹಲ್ಲೆ ನಡೆಯುತ್ತಿದೆ. ತಮ್ಮ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು, ಜಲಫಿರಂಗಿ ಬಳಸಿದ್ರೂ ಬಗ್ಗದೇ ಭದ್ರತಾ ಪಡೆ ಮೇಲೂ ಕಲ್ಲು ತೂರಾಟ ನಡೆಸುತ್ತಿದ್ದಾರೆ.
Advertisement
ಸರ್ಕಾರಿ ಕಚೇರಿ, ಪೆಟ್ರೋಲ್ ಬಂಕ್, ವಿದ್ಯುತ್ ಸ್ಥಾವರಕ್ಕೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಮನೆಯೊಳಗೆ ನಿಲ್ಲಿಸಿದ್ದ ಕಾರ್ ಗಳ ಮೇಲೂ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಹರಿಯಾಣದ ಪರಿಸ್ಥಿತಿ ಬಿಗಡಾಯಿಸಿದೆ.
ಸ್ವಯಂಘೋಷಿತ ಆಧ್ಯಾತ್ಮಕ ಗುರು ರಾಮ್ ರಹೀಮ್ 2002ರಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವುದು ಸಾಬೀತಾಗಿದ್ದು, ಸೋಮವಾರದಂದು ಶಿಕ್ಷೆ ಪ್ರಕಟವಾಗಲಿದೆ.
ಸ್ವಯಂ ಘೋಷಿತ ದೇವಮಾನವ ಅಂತ ಹೇಳಿಕೊಂಡಿರೋ ಗುರ್ಮಿತ್ ಈಗ ಜೈಲು ಮಾನವರಾಗಿದ್ದಾರೆ. ಅವರನ್ನ ಜೈಲಿಗೆ ಕಳುಹಿಸಿದ್ದ ರೇಪ್ ಕೇಸ್‍ನ ಡಿಟೇಲ್ಸ್ ಹೀಗಿದೆ.
* 1999ರಿಂದ ಆಶ್ರಮದಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ನಿರಂತರ ಅತ್ಯಾಚಾರ
* ಹರ್ಯಾಣದ ಸಿರ್ಸಾದಲ್ಲಿರುವ ಆಶ್ರಮದಲ್ಲೇ ಸಾಧ್ವಿಗಳ ಮೇಲೆ ಅತ್ಯಾಚಾರ
* 2002ರಲ್ಲಿ ಪ್ರಧಾನಿ ವಾಜಪೇಯಿಗೆ ಸಾಧ್ವಿಯೊಬ್ಬರಿಂದ ಅನಾಮಧೇಯ ಪತ್ರ
* ವಾಜಪೇಯಿಗೆ ಪತ್ರ ರವಾನಿಸಿದ್ದ ಆರೋಪದಲ್ಲಿ ರಂಜಿತ್ ಎಂಬಾತನಿಗೆ ಗುಂಡಿಟ್ಟ ಬಾಬಾ ಭಕ್ತರು
* 2002 ಚಂಡೀಗಡ ಹೈಕೋರ್ಟ್‍ನಿಂದ ಸುಮೋಟೋ ಕೇಸ್ ದಾಖಲು
* ಹೈಕೋರ್ಟ್‍ಗೆ ತನಿಖಾ ವರದಿ ಸಲ್ಲಿಸಿದ ಸಿರ್ಸಾ ಸೆಷನ್ ಜಡ್ಜ್
* 2002ರಲ್ಲಿ ಸಿಬಿಐ ತನಿಖೆಗೆ ಆದೇಶಿಸಿದ ಚಂಡೀಗಡ ಹೈಕೋರ್ಟ್
* ಪಂಚಕುಲಾ ಸಿಬಿಐ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ
* 2006 – ಸಿಬಿಐ ಮುಂದೆ ಹೇಳಿಕೆ ದಾಖಲಿಸಿದ್ದ ಸಂತ್ರಸ್ತೆ ಸಾಧ್ವಿ
( ಒಂದು ದಿನ ರಾತ್ರಿ ಬಾಬಾ ತನ್ನ ಚೇಂಬರ್‍ಗೆ ಕರೆದ್ರು. ನಾನು ಒಳ ಹೋದಂತೆ ಅಟೋಮ್ಯಾಟಿಕ್ ಬಾಗಿಲು ಬಂದ್ ಆಯ್ತು. ನನಗೆ ಎಲ್‍ಸಿಡಿಯಲ್ಲಿ ಅಶ್ಲೀಲ ವೀಡಿಯೋ ತೋರಿಸಿದ್ರು. ಅತ್ಯಾಚಾರ ಮಾಡಿದ್ರು. ಪಕ್ಕದಲ್ಲಿ ಗನ್ ಇತ್ತು. 3 ವರ್ಷಗಳವರೆಗೆ ನಿರಂತರವಾಗಿ ಅತ್ಯಾಚಾರ, 30-40ರಷ್ಟು ಮಹಿಳಾ ಭಕ್ತರಿಗೂ ಇದೇ ರೀತಿ ಪೀಡಿಸಿದ್ದ ಆರೋಪ. )
* ಸಿಬಿಐನಿಂದ 18 ಸಾಧ್ವಿಯರ ವಿಚಾರಣೆ
* 2007 – ಸಿಬಿಐನಿಂದ ಬಾಬಾ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ (ಬಾಬಾ ಚೇಂಬರ್‍ಗೆ ಆಯ್ದ ಕೆಲವರಿಗೆ ಮಾತ್ರ ಪ್ರವೇಶ)
* 2007 – ಬಾಬಾಗೆ ನಿರೀಕ್ಷಣಾ ಜಾಮೀನು ಕೊಟ್ಟ ಹೈಕೋರ್ಟ್
* 2008 – ಸೆಕ್ಷನ್ 376ರ ಅಡಿ ಬಾಬಾ ರಾಮ್ ರಹೀಂ ವಿರುದ್ಧ ಸಿಬಿಐ ಕೇಸ್
* 2009 & 2010 – ಸಿಬಿಐ ವಿಚಾರಣೆಯಲ್ಲಿ ಅತ್ಯಾಚಾರದ ಬಗ್ಗೆ ಇಬ್ಬರಿಂದ ಹೇಳಿಕೆ
* 2017, ಆಗಸ್ಟ್ 1 – ತೀರ್ಪು ಕಾಯ್ದಿರಿಸಿದ ಪಂಚಕುಲಾ ಸಿಬಿಐ ಕೋರ್ಟ್
* 2017 ಆಗಸ್ಟ್ 25 – ರಾಮ್ ರಹೀಂ ದೋಷಿ, ಆಗಸ್ಟ್ 28ಕ್ಕೆ ಶಿಕ್ಷೆ ಪ್ರಮಾಣ
ರಾಜ್ಯದಲ್ಲೂ ಬಾಬಾ ಹವಾ: ರಾಜ್ಯದಲ್ಲೂ ಬಾಬಾ ರಾಮ್ ರಹೀಂ ಹವಾ ಜೋರಾಗೇ ಇದೆ. ಬೆಂಗಳೂರಿನ ಎಂಟನೇ ಮೈಲಿಯ ವಿಕಾಸನಗರದಲ್ಲಿರುವ ಡಿಎಸ್‍ಎಸ್ ಆಶ್ರಮದಲ್ಲಿ ಭಕ್ತರು ಬೆಳಗಿನಿಂದಲೂ ಜಮಾಯಿಸಿದ್ದರು. ಅವರ ವಿರುದ್ಧ ಎಲ್ಲಾ ಆರೋಪಗಳು ಷಡ್ಯಂತರ ಅಂತ ದೂರಿದ್ರು. ಮಾಧ್ಯಮಗಳ ಮೂಲಕ ಕ್ಷಣ ಕ್ಷಣದ ಮಾಹಿತಿ ಪಡೀತಿದ್ತು. ಅವರ ಬಾಬಾ ದೋಷಿ ಅಂತ ತೀರ್ಪು ಬಂದಾಗ ಆಘಾತಕ್ಕೀಡಾದ್ರು. ಕಣ್ಣೀರು ಹರಿಸಿದ್ರು. ಬಾಬಾ ಫೋಟೋ ಮುಂದೆ ಗೋಳಾಡಿದ್ರು. ಅತ್ತ, ಮೈಸೂರಿನಲ್ಲೂ ಅಪಾರ ಅಭಿಮಾನಿ ವರ್ಗ ಇದೆ. ನಗರದ ಹೊರ ವಲಯದಲ್ಲಿ ಡೇರ್ ಸಚ್ಚಾ ಸೌಧದಲ್ಲಿ ನೀರವ ಮೌನ ಆವರಿಸಿತು. ಈ ಪ್ರದೇಶಗಳಲ್ಲಿಯೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
.@BJP4India MP Sakshi Maharaj defends #RamRahimSingh; blames victim, courts and even calls it an effort to defame 'Indian Culture'. pic.twitter.com/b43xlZ3ywy
— News18 (@CNNnews18) August 25, 2017
Video footage of criminals who set DTC buses on fire.Please inform @DelhiPolice @DCPNEastDelhi or call 100,if any clue about their identity. pic.twitter.com/fB6YRdkoR8
— Special CP Crime (@Ravindra_IPS) August 25, 2017
After #RamRahimSingh convicted by #Panchkula court, cars, OB vans of several news channels including NDTV attacked#RamRahimVerdict pic.twitter.com/ZcricmJCy4
— NDTV (@ndtv) August 25, 2017
Chaos and arson near Panchkula court after Ram Rahim conviction #RamRahimVerdict #RamRahimSingh pic.twitter.com/n0BiozFoTy
— NDTV (@ndtv) August 25, 2017
#RamRahimVerdict: A camera person injured during violent protests in Sirsa, Haryana. pic.twitter.com/9qQjKnHBt9
— ANI (@ANI) August 25, 2017
#RamRahimGuilty #FirstOnIndiaToday
Violence at Panchukala. Watch this exclusive ground report by @satenderchauhan #ITVideo pic.twitter.com/qO7DvSsj3r
— IndiaToday (@IndiaToday) August 25, 2017
https://twitter.com/hvgoenka/status/901066892911063041
BREAKING NEWS – Seize all properties of #RamRahimSingh, orders High Court of Punjab and Haryana https://t.co/JQJlKZeiOk #RamRahimVerdict pic.twitter.com/haFdKGIhNe
— ABP News (@ABPNews) August 25, 2017
Visuals of Army's flag march in Sirsa, Haryana: news agency ANI #RamRahimSingh #RamRahimVerdict pic.twitter.com/e6lN9NQufh
— NDTV (@ndtv) August 25, 2017
Trail of death and destruction descends on Panchkula https://t.co/r47UTDNh6G #RamRahimSingh #RamRahimVerdict pic.twitter.com/O3BC0vG8je
— The Times Of India (@timesofindia) August 25, 2017
After #RamRahimSingh convicted by #Panchkula court, cars, OB vans of several news channels including NDTV attacked#RamRahimVerdict pic.twitter.com/ZcricmJCy4
— NDTV (@ndtv) August 25, 2017
https://twitter.com/SirJadejaaaa/status/900941319765282821