ಮುಂಬೈ: ಸಾಕು ನಾಯಿಯಿಂದ ದಾಳಿಗೊಳಗಾದ ಮಹಿಳೆಗೆ 2 ಲಕ್ಷ ಮಧ್ಯಂತರ ಪರಿಹಾರವನ್ನು ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಗುರುಗ್ರಾಮ್ ಮಹಾನಗರ ಪಾಲಿಕೆಗೆ (Municipal Corporation of Gurugram) (ಎಂಸಿಜಿ) ಆದೇಶಿಸಿದೆ. ಎಂಸಿಜಿ ಬಯಸಿದರೆ ಈ ಪರಿಹಾರದ ಮೊತ್ತವನ್ನು ನಾಯಿ ಮಾಲೀಕರಿಂದ ವಸೂಲಿ ಮಾಡಬಹುದು ಎಂದು ಮಹಾನಗರ ಪಾಲಿಕೆ ತಿಳಿಸಿದೆ.
ಸಂತ್ರಸ್ತೆ ಮುನ್ನಿ ಸ್ಥಳೀಯರೊಬ್ಬರು ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಗಸ್ಟ್ 11 ರಂದು ತನ್ನ ಅತ್ತಿಗೆಯೊಂದಿಗೆ ಕೆಲಸಕ್ಕೆಂದು ಹೋಗುತ್ತಿದ್ದಾಗ ಮುನ್ನಿ ಮೇಲೆ ನಾಯಿ ದಾಳಿ ಮಾಡಿದೆ. ಇದರಿಂದ ತಲೆ ಮತ್ತು ಮುಖದ ಮೇಲೆ ಗಂಭೀರವಾದ ಗಾಯಗಳಾಗಿದ್ದರಿಂದ ಗುರುಗ್ರಾಮ್‍ನ (Gurugram) ಸಿವಿಲ್ ಆಸ್ಪತ್ರೆಯಿಂದ ದೆಹಲಿಯ (Delhi) ಸಫ್ದರ್‍ಜಂಗ್ ಆಸ್ಪತ್ರೆಗೆ (Safdarjung Hospital) ಮಹಿಳೆಯನ್ನು ದಾಖಲಿಸಲಾಯಿತು. ಇದನ್ನೂ ಓದಿ: ವಿವಾದಿತ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ನಾಮಫಲಕ – ಸುತ್ತೂರು ಶ್ರೀಗಳ, ಮೋದಿ ಫೋಟೋ ಬಳಕೆ
ಈ ಕುರಿತಂತೆ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ನಾಯಿಯ ತಳಿಯನ್ನು ‘ಪಿಟ್‍ಬುಲ್’ ಎಂದು ನಮೂದಿಸಲಾಗಿತ್ತು. ಆದರೆ ಬಳಿಕ ‘ಡೋಗೊ ಅಜೆರ್ಂಟಿನೋ’ ತಳಿ ಎಂದು ಮಾಲೀಕರು ತಿಳಿಸಿದರು. ನಾಯಿಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಮತ್ತು ನಾಯಿಯನ್ನು ಸಾಕಲು ಹೊಂದಿರಬೇಕಾದ ಚಿಕರ ಅವರ ಪರವಾನಗಿಯನ್ನು ರದ್ದುಗೊಳಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಎಂಸಿಜಿಗೆ ನಿರ್ದೇಶಿಸಿದೆ.
ಬೇರೆ ಅವರ ಮನೆಯಲ್ಲಿ ಕೆಲಸ ಮಾಡುವ ಮಹಿಳೆ ಬಹಳ ಬಡವಿಯಾಗಿದ್ದು, ಆಕೆಗೆ ನ್ಯಾಯ ದೊರಕಿಸಿ ಕೊಡುವ ಸಲುವಾಗಿ ಎಂಸಿಜಿಯಿಂದ ಮಧ್ಯಂತರ ಪರಿಹಾರವಾಗಿ 2 ಲಕ್ಷ ರೂಪಾಯಿಗಳನ್ನು ಪಾವತಿಸಲು ಆದೇಶಿಸಲಾಗಿದೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಬಡ ಪ್ರತಿಭಾವಂತನ ಬೆನ್ನಿಗೆ ನಿಂತ ಶಾಸಕ ಪರಣ್ಣ ಮುನವಳ್ಳಿ