ಚಂಡೀಗಢ: ಮಹಿಳೆಯೊಬ್ಬರನ್ನು ಆಟೋ ಚಾಲಕ ಅಪಹರಿಸಲು ಯತ್ನಿಸಿದ ಘಟನೆ ಹರಿಯಾಣದಲ್ಲಿ ನಡೆದಿದೆ.
ಈ ಬಗ್ಗೆ ಟ್ವಿಟ್ಟರ್‌ಲ್ಲಿ ಪೋಸ್ಟ್ ಮಾಡಿದ ಮಹಿಳೆ ತಮಗಾದ ತೊಂದರೆಯನ್ನು ಹಂಚಿಕೊಂಡಿದ್ದಾರೆ. ಮಹಿಳೆಯ ಮನೆಯಿಂದ ಗುರ್ಗಾಂವ್‌ಗೆ ತಲುಪಲು ಕೇವಲ 7 ನಿಮಿಷವಾಗುತ್ತದೆ. ಅಲ್ಲಿಂದ ಆಟೋದಲ್ಲಿ ಹೋಗುವಾಗ ಚಾಲಕರೊಬ್ಬರು ತಮ್ಮನ್ನು ಅಪಹರಿಸಲು ಪ್ರಯತ್ನಿಸಿದರು. ಇದರಿಂದಾಗಿ ನನಗೆ ಆಟೋದಿಂದ ಜಿಗಿಯಬೇಕಾದ ಸ್ಥಿತಿ ಉಂಟಾಯಿತು ಎಂದು ಟ್ವೀಟ್ ಮಾಡಿದ್ದಾರೆ.
Advertisement
Yesterday was one of the scariest days of my life as I think I was almost abducted/ kidnapped. I don’t know what it was, it’s still giving me chills. Arnd 12:30 pm, I took an auto from the auto stand of a busy market Sec 22 (#Gurgaon) for my home which is like 7 mins away (1/8)
— Nishtha (@nishtha_paliwal) December 20, 2021
Advertisement
ಟ್ವೀಟ್‌ನಲ್ಲಿ ಏನಿದೆ?: ನಿನ್ನೆ ನನ್ನ ಜೀವನದ ಅತ್ಯಂತ ಭಯಾನಕ ದಿನಗಳಲ್ಲಿ ಒಂದಾಗಿತ್ತು. ನಾನು ಕಿಡ್ನಾಪ್ ಆಗುತ್ತೇನೆ ಎಂದೇ ಭಾವಿಸಿದ್ದೆ. ಅದನ್ನು ನೆನಪಿಸಿಕೊಂಡರೆ ಇನ್ನು ನನಗೆ ಭಯವಾಗುತ್ತದೆ. ಮಧ್ಯಾಹ್ನ ಆಟೋಸ್ಟ್ಯಾಂಡ್ ನಿಂದ ಗುರ್ಗಾಂವ್‌ಗೆ ಹೋಗಲು ಆಟೋವನ್ನು ಹತ್ತಿದ್ದೆ. ಮನೆಯಿಂದ ನಗರಕ್ಕೆ ಕೇವಲ 7 ನಿಮಿಷದ ದಾರಿಯಾಗಿತ್ತು.
Advertisement
Advertisement
ನಾನು ಆಟೋ ಚಾಲಕನಲ್ಲಿ ಹಣವಿಲ್ಲ, ಪೇಟಿಎಂ ಮಾಡುತ್ತೇನೆ ಎಂದು ಮನವಿ ಮಾಡಿದ್ದೆ. ಅದಕ್ಕೆ ಅವನು ಒಪ್ಪಿಗೆ ಸೂಚಿಸಿದ್ದ. ಅವನನ್ನು ನೋಡಿದರೆ ಉಬರ್ ಆಟೋಚಾಲಕನಂತೆ ಕಾಣುತ್ತಿದ್ದ. ನಾನು ಆಟೋದಲ್ಲಿ ಕುಳಿತಿದ್ದೆ. ಆಟೋ ಪ್ರಾರಂಭಿಸಿದ ಆತ ಆಟೋವನ್ನು ಅಪರಿಚಿತ ರಸ್ತೆಗೆ ತಿರುಗಿಸಿದ. ಅದನ್ನು ಗಮನಿಸಿದ ನಾನು ಎಡಗಡೆ ರೋಡ್‌ನಲ್ಲಿ ಯಾಕೆ ಹೋಗುತ್ತಿದ್ದೀರಿ, ನಾನು ಹೋಗುವ ರಸ್ತೆ ಬಲಕ್ಕೆ ಇದೆ ಎಂದು ಕಿರುಚಿದೆ. ಅದಕ್ಕೆ ಆತ ಏನು ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ನಾನು ಬೇರೆ ದಾರಿ ಕಾಣದೇ 30 ರಿಂದ 40 ಕಿ.ಮೀ ವೇಗದಲ್ಲಿದ್ದ ಆಟೋದಿಂದ ಜಿಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ- ಗೂಗಲ್ ನಿರ್ಧಾರ
ಗುರ್ಗಾಂವ್‌ನ ಪಾಲಂ ವಿಹಾರ್‌ನ ಪೊಲೀಸ್ ಅಧಿಕಾರಿ ಜಿತೇಂದರ್ ಯಾದವ್ ಅವರು ಆಟೋ ಚಾಲಕನನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬೀದಿನಾಯಿಗಳಿಂದ ತನ್ನ ಮೂವರು ಮಕ್ಕಳನ್ನು ರಕ್ಷಿಸಿದ ಗರ್ಭಿಣಿ