ಗುರ್‌ಗಾಂವ್: ಅಪಾರ್ಟ್ಮೆಂಟ್‌ನ ಮೇಲ್ಛಾವಣಿ ಕುಸಿದು ಇಬ್ಬರು ಸಾವನ್ನಪ್ಪಿ, 12 ಮಂದಿ ಸಿಲುಕಿಕೊಂಡಿರುವ ಘಟನೆ ಗುರುಗ್ರಾಮದ ಸೆಕ್ಟರ್ 109 ರಲ್ಲಿನ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಮತ್ತು ಇತರ ಜಿಲ್ಲಾ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಕಾಲ ಕುತ್ತಿಗೆಯಲ್ಲಿ ಟೈರ್ ಸಿಕ್ಕಿಸಿಕೊಂಡಿದ್ದ ಮೊಸಳೆಗೆ ಕೊನೆಗೂ ಸಿಕ್ತು ಮುಕ್ತಿ!
Advertisement
Advertisement
ಮೊದಲ ಮಾಹಿತಿ ಪ್ರಕಾರ, 17 ಅಂತಸ್ತಿನ ಕಟ್ಟಡದ 6 ಮಹಡಿಗಳು ಕುಸಿದಿವೆ. ಕಟ್ಟಡದಲ್ಲಿ ವಾಸವಾಗಿರುವ ಕೆಲವು ಕುಟುಂಬಗಳು ಕೂಡ ಸಿಕ್ಕಿಬಿದ್ದಿರುವ ಆತಂಕವಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಹಲವು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಅಪಾರ್ಟ್ಮೆಂಟ್‌ನಲ್ಲಿರುವ 4 ಕುಟುಂಬಗಳು ಅವಶೇಷಗಳಡಿ ಸಿಲುಕಿವೆ ಎನ್ನಲಾಗಿತ್ತು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?
Advertisement
ಗುರುಗ್ರಾಮ ಕಟ್ಟಡ ಕುಸಿತದ ಬಗ್ಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಗಮನಿಸುತ್ತಿದ್ದಾರೆ ಅಂತ ಹರಿಯಾಣ ಸರ್ಕಾರ ತಿಳಿಸಿದೆ.
Advertisement
#WATCH | Haryana: Visuals from Chintels Paradiso housing complex in Gurugram’s Sector 109 where a portion of the roof of an apartment has collapsed.
Details awaited. pic.twitter.com/WI22vLwOy6
— ANI (@ANI) February 10, 2022
Haryana | Morning visuals from Chintels Paradiso housing complex in Gurugram’s Sector 109, where a portion of the roof of an apartment collapsed, yesterday.
NDRF, SDRF & other teams are on the spot. pic.twitter.com/mUuMMjqDnz
— ANI (@ANI) February 11, 2022
ಗುರುಗ್ರಾಮ ಸೆಕ್ಟರ್ 109 ರಲ್ಲಿ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದ ಡಿ ಟವರ್‍ನ ಆರನೇ ಮಹಡಿಯ ಛಾವಣಿಯ ಒಂದು ಭಾಗವು ಕುಸಿದಿದೆ. ಆಡಳಿತ ಅಧಿಕಾರಿಗಳು, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ತಂಡಗಳು ಘಟನಾ ಸ್ಥಳದಲ್ಲಿಯೇ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.