ಮತ್ತೆ ನಿರ್ದೇಶನಕ್ಕೆ ಮುಂದಾದ ಅಂಬಿ ಚಿತ್ರದ ನಿರ್ದೇಶಕ ಗುರುದತ್

Public TV
2 Min Read
Gurudatta 1

‘ಅಂಬಿ ನಿಂಗೆ ವಯಸ್ಸಾಯ್ತೋ’ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ರೆಬಲ್ ಸ್ಟಾರ್ ಅಂಬರೀಷ್ ಹೀರೋ ಆಗಿ ಮಿಂಚಿದ್ದ ಕೊನೆಯ ಸಿನಿಮಾ. 2018ರಲ್ಲಿ ರಿಲೀಸ್ ಆ ಚಿತ್ರ ಬಿಡುಗಡೆಯಾಗಿತ್ತು. ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದಲ್ಲಿ ಅಂಬಿ ಜೊತೆಗೆ ಕಿಚ್ಚ ಸುದೀಪ್ ಕೂಡ ನಟಿಸಿದ್ದರು. ಅಂಬರೀಷ್ ಅವರ ಯವ್ವನದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಸುಹಾಸಿನಿ, ಶ್ರುತಿ ಹರಿಹರನ್ ಹೀಗೆ ಆ ಸಿನಿಮಾದಲ್ಲಿ ದೊಡ್ಡ ತಾರಾಬಳಗವೆ ಇತ್ತು. ಸ್ಟಾರ್ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದ್ದು ಮತ್ಯಾರು ಅಲ್ಲ ಗುರುದತ್ ಗಾಣಿಗ (Gurudatta). ಚಿಕ್ಕ ವಯಸ್ಸಿನಲ್ಲೇ ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದರು ಗುರುದತ್. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲೇ ಗುರು ಕನ್ನಡ ಸಿನಿಮಾ ಅಭಿಮಾನಿಗಳ ಹೃದಯಗೆದಿದ್ದರು, ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದರು.

Gurudatta 2

ಚೊಚ್ಚಲ ನಿರ್ದೇಶನದಲ್ಲೇ ಅಂಬರೀಷ್ (Ambareesh), ಸುದೀಪ್ ಅವರಂತಹ ದೊಡ್ಡ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದ್ದ  ಗುರುದತ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬೀಳುವ ಸಮಯ ಬಂದಿದೆ. ಗ್ಯಾಪ್‌ನ ಬಳಿಕ ಗುರು ಮತ್ತೆ ನಿರ್ದೇಶನದ ಕ್ಯಾಪ್ ಧರಿಸುತ್ತಿದ್ದಾರೆ. ಸುಮಾರು 5 ವರ್ಷಗಳ ಬಳಿಕ ಗುರುದತ್ ಗಾಣಿಗ ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ  ಬರಲು ಸಜ್ಜಾಗಿದ್ದಾರೆ. ಈ ಬಾರಿ ಗುರು ಯಾವ ಸ್ಟಾರ್‌ಗೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಕೌತುಕ ಹೆಚ್ಚಾಗಿದೆ. ಮೂಲಗಳ ಪ್ರಕಾರ ಗುರು ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

Gurudatta 3

ಈಗಾಗಲೇ ಹೊಸ ಸಿನಿಮಾದ ಎಲ್ಲಾ ತಯಾರಿ ನಡೆದಿದ್ದು ಸದ್ಯದಲ್ಲೇ ಟೈಟಲ್ ಮತ್ತು ಹೀರೋ ಅನೌನ್ಸ್  ಮಾಡಲು ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಗುರು. ವಿಭಿನ್ನ ಕಾನ್ಸೆ‌ಪ್ಟ್‌ನ ಸಿನಿಮಾ ಮೂಲಕ ಗುರು ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಗುರು ಅವರ 2ನೇ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂಬಿ ಸಿನಿಮಾ ಬಳಿಕ ಗುರು ಎಲ್ಲೋಗಿದ್ರೂ, ಏನ್ಮಾಡುತ್ತಿದ್ದರು ಎನ್ನುವ ಪ್ರಶ್ನೆ ಕೂಡ ಅನೇಕರಲ್ಲಿತ್ತು. ಆದರೆ ಇತ್ತೀಚೆಗಷ್ಟೆ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ನಿರ್ಮಾಪಕರಾಗಿ ಸರ್ಪ್ರೈಸ್ ಎಂಟ್ರಿ ಕೊಟ್ಟರು.

 ಅಂಬಿ ಸಿನಿಮಾದ ಬಳಿಕ ನಿರ್ದೇಶಕ ಗುರು ನಿರ್ಮಾಣದ  ಕಡೆ ಮುಖ ಮಾಡಿದ್ದರು. ಈಗಾಗಲೇ ಟೀಸರ್ ಮೂಲಕ ಸದ್ದು ಮಾಡುತ್ತಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ಚೊಚ್ಚಲ ನಿರ್ಮಾಣದ ಪ್ರಯತ್ನಕ್ಕೂ ಕೈ ಹಾಕಿದ್ದಾರೆ ಗುರು. ಈ ನಡುವೆ ತಮ್ಮ 2ನೇ ನಿರ್ದೇಶನದ ಚಿತ್ರದ ತಯಾರಿಯಲ್ಲಿದ್ದಾರೆ. ಮೊದಲ ಸಿನಿಮಾದಲ್ಲೇ ಮೋಡಿಮಾಡಿದ್ದ ಗುರು ಈ ಬಾರಿ ಯಾವ ಸಿನಿಮಾ ಮೂಲಕ, ಯಾವ ಸ್ಟಾರ್ ನಟನಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಬಹಿರಂಗವಾಗಲಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article