ಚಂಡೀಗಢ: ಪಂಜಾಬ್‍ನ ಗುರ್‍ದಾಸಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ವರನ್ ಸಲಾರಿಯಾ ಸೋಲು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಜಾಕರ್ ಭರ್ಜರಿ ಗೆಲುವನ್ನು ಪಡೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಈ ಗೆಲುವನ್ನು ಕೇಂದ್ರದಲ್ಲಿರುವ ಎನ್‍ಡಿಎ ಸರ್ಕಾರದ ಆಡಳಿತದ ವಿರುದ್ಧದ ಜನಭಿಪ್ರಾಯ ಇದಾಗಿದ್ದು, ಈ ಮೂಲಕ ಗುರ್ದಾಸ್‍ಪುರ ಕ್ಷೇತ್ರದ ಜನರು ಕೇಂದ್ರ ಸರ್ಕಾರದ ಆಡಳಿತ ಬಗ್ಗೆ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅದರೆ ಮಧ್ಯೆ ಹೊಸ ಅಂಶವೊಂದು ಬೆಳಕಿಗೆ ಬಂದಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಸ್ವರನ್ ಅವರ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವೇ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.
Advertisement
Advertisement
ಆರೋಪವೇನು? ಸ್ವರನ್ ಅವರ ವಿರುದ್ಧ 45 ವರ್ಷದ ಮುಂಬೈ ಮೂಲದ ಮಹಿಳೆ ಎಂಬವರು ಲೈಂಗಿಕ ದೌಜನ್ಯದ ದೂರನ್ನು ದಾಖಲು ಮಾಡಿದ್ದರು. ಅಲ್ಲದೇ ಅವರಿಬ್ಬರ ನಡುವಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯನ್ನು ಗೊಳಿಸಿದ್ದರು. ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿರುವಂತೆ ತಮ್ಮನ್ನು ಮದುವೆಯಾಗುವುದಾಗಿ ಮಾತು ನೀಡಿ, 1982 ರಿಂದ 2014 ವರೆಗೇ ಸುಮಾರು 32 ವರ್ಷಗಳ ಕಾಲ ತಮ್ಮ ಮೇಲೆ ದೌರ್ಜನ್ಯವನ್ನು ಎಸಗಿದ್ದಾರೆ. ಅಲ್ಲದೆ ಆ ಅವಧಿಯಲ್ಲಿ ತಾವು ವಾಸಿಸಲು ಒಂದು ಫ್ಲಾಟ್ ಸಹ ನೀಡಿದ್ದರು ಎಂದು ತಿಳಿಸಿದ್ದರು.
Advertisement
ಆದರೆ ಮಹಿಳೆಯ ಆರೋಪವನ್ನು ಸ್ವರನ್ ನಿರಾಕರಿಸಿದ್ದರು. ತಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರಲು ಈ ರೀತಿ ದೂರು ನೀಡಿದ್ದಾರೆ ಎಂದು ತಿಳಿಸಿದ್ದರು. ಸ್ವರನ್ ಮೂಲತಃ ಮುಂಬೈನ ಉದ್ಯಮಿಯಾಗಿದ್ದಾರೆ.
Advertisement
ಸ್ವರನ್ ಅವರು ಚುನಾವಣೆ ಆಯೋಗಕ್ಕೆ ನಾಮಪತ್ರ ಸಲ್ಲಿಕೆ ವೇಳೆ ಈ ವಿಷಯವನ್ನು ಮುಚ್ಚಿಟ್ಟಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಪಂಜಾಬ್ ಹಣಕಾಸು ಸಚಿವ ಮನ್‍ಪ್ರೀತ್ ಸಿಂಗ್ ಬಾದಲ್ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು, ಬಿಜೆಪಿಯ ಅಭ್ಯರ್ಥಿಯ ವಿರುದ್ಧ 2014 ಡಿಸೆಂಬರ್ 15ರಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ)ಯ 376, 420 ಮತ್ತು 306 ರ ಸೆಕ್ಷನ್‍ಗಳ ಪ್ರಕಾರ ದೂರು ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುನಿಲ್ ಜಾಕರ್ ಅವರು ಒಟ್ಟು 4,99,752 ಮತಗಳನ್ನು ಗಳಿಸಿದ್ದು, ಬಿಜೆಪಿಯ ಸಲಾರಿಯಾ 3,06,533 ಮತ ಪಡೆದರೆ, ಆಪ್ ಅಭ್ಯರ್ಥಿ ಖಜುರಿಯಾ 23,579 ಮತಗಳನ್ನು ಗಳಿಸಿದ್ದಾರೆ. ಹಿರಿಯ ನಟ ಮತ್ತು ಸಂಸದರಾಗಿದ್ದ ವಿನೋದ್ ಖನ್ನಾ ಸಾವಿನ ಬಳಿಕ ಗುರುದಾಸ್‍ಪುರ ಲೋಕಸಭಾ ಕ್ಷೇತ್ರ ತೆರವಾಗಿತ್ತು. ವಿನೋದ್ ಖನ್ನಾ ಬಿಜೆಪಿ ಅಭ್ಯರ್ಥಿಯಾಗಿ ಗೆಲುವನ್ನು ಪಡೆದುಕೊಂಡಿದ್ದರು.
#Punjab Congress: 4,99,752, BJP 3,06,533, AAP 23,579 votes.#GurdaspurLokSabhaBypoll
— ANI (@ANI) October 15, 2017
Punjab: Congress workers and leaders celebrate as party leads by more than 1 lakh votes in #GurdaspurLokSabhaBypoll pic.twitter.com/gYlPec5EKG
— ANI (@ANI) October 15, 2017
Assure people of #Gurdaspur that every single promise made by @sunilkjakhar will be fulfilled and all development works will be fast-tracked
— Capt.Amarinder Singh (@capt_amarinder) October 15, 2017
The #Gurdaspur by-election marks another major step in the revival of @INCIndia, it's clear that party is on upswing ahead of 2019 LS polls
— Capt.Amarinder Singh (@capt_amarinder) October 15, 2017
So it’s 1,93,219..! Not much behind my expectation of a 2 lakh victory margin for @sunilkjakhar ji. What a vindication of our policies!
— Capt.Amarinder Singh (@capt_amarinder) October 15, 2017
Humble gratitude to all the voters who maintained a peaceful environment while voting for bright future of the constituency #Gurdaspur2017 pic.twitter.com/8wwLK0oSJL
— Sunil Jakhar (@sunilkjakhar) October 12, 2017
Heartiest wishes to all on pious occasion of Gurupurab Gurugaddi Harikrishan Ji. May festive fervor illuminate every1’s life w/ happiness
— Sunil Jakhar (@sunilkjakhar) October 13, 2017
Congratulations to @sunilkjakhar and @INCPunjab workers for their win in #GurdaspurByPoll.
— Congress (@INCIndia) October 15, 2017
“People especially the farmers & traders have bestowed faith on Capt.Amarinder Singh’s leadership. They have voiced their opinion against the wrongly implemented policies of demonetization & GST by Centre.The message is now sent to the Parliament: Sunil Jakhar #GurdaspurByPoll pic.twitter.com/JFCHu3JDqU
— ABP News (@ABPNews) October 15, 2017
A historic win. Modi Ji's govt stands completely exposed. It's just the beginning: Asha Kumari, #Punjab Congress In-charge #GurdaspurByPoll pic.twitter.com/P0aIDajHgT
— India TV (@indiatvnews) October 15, 2017