ಸಲ್ಮಾನ್‌ ಖಾನ್‌ ನಿವಾಸದ ಹೊರಗೆ ಗುಂಡಿನ ದಾಳಿ

Public TV
1 Min Read
salman khan 3

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರ ಮುಂಬೈನ ನಿವಾಸದ ಹೊರಗೆ ಇಂದು ಮುಂಜಾನೆ ಗುಂಡಿನ ಸದ್ದು ಕೇಳಿ ಬಂದಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತು.

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದ್ದಾನೆ. ನಂತರ ಸ್ಥಳದಲ್ಲಿ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸ್ತ್ರೀವಾದದ ಮೇಲೆ ನನಗೆ ನಂಬಿಕೆ ಇಲ್ಲ: ನಟಿ ನೋರಾ ಫತೇಹಿ

salman khan mumbai house

ಮುಂಬೈ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಗುಂಡು ಹಾರಿಸಿದ ವ್ಯಕ್ತಿ ಪತ್ತೆಗೆ ಬಲೆ ಬೀಸಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌, ಸಲ್ಮಾನ್ ‌ಖಾನ್‌ ಹತ್ಯೆ ಮಾಡುವುದಾಗಿ ಹೇಳಿದ್ದ. ತಾನು ಟಾರ್ಗೆಟ್‌ ಮಾಡಿರುವ 10 ಮಂದಿ ಹೆಸರಿನ ಪಟ್ಟಿಯಲ್ಲಿ ಸಲ್ಮಾನ್‌ ಖಾನ್‌ ಮೊದಲಿಗರಾಗಿದ್ದಾರೆ ಎಂದಿದ್ದ. 1998 ರ ಕೃಷ್ಣಮೃಗ ಬೇಟೆ ಆರೋಪ ಹೊತ್ತಿರುವ ಬಾಲಿವುಡ್‌ ನಟನ ಮೇಲೆ ಬಿಷ್ಣೋಯ್‌ ಹಗೆ ಸಾಧಿಸುತ್ತಿದ್ದಾನೆ.

ಬಿಷ್ಣೋಯ್ ತನ್ನ ಸಹಾಯಕ ಸಂಪತ್ ನೆಹ್ರಾ ಬಳಸಿಕೊಂಡು ಸಲ್ಮಾನ್‌ ಖಾನ್‌ ಅವರ ಬಾಂದ್ರಾ ನಿವಾಸದ ಮೇಲೆ ಕಣ್ಣಿಟ್ಟಿದ್ದ. ವಿಚಾರ ತಿಳಿಯುತ್ತಿದ್ದಂತೆ ನೆಹ್ರಾನನ್ನು ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ ವಶಪಡಿಸಿಕೊಂಡಿದೆ. ಇದನ್ನೂ ಓದಿ: ಡಾಲಿ ಧನಂಜಯ್ ನಟನೆಯ ‘ಕೋಟಿ’ ಸಿನಿಮಾದ ಟೀಸರ್ ರಿಲೀಸ್

ಕಳೆದ ವರ್ಷ ಏಪ್ರಿಲ್ 11 ರಂದು ಬಂದ ಮತ್ತೊಂದು ಬೆದರಿಕೆ ಕರೆಯನ್ನು ಅನುಸರಿಸಿ ಮುಂಬೈ ಪೊಲೀಸರು ಸಲ್ಮಾನ್‌ ಖಾನ್ ಅವರ ಭದ್ರತೆಯನ್ನು Y+ ಗೆ ಹೆಚ್ಚಿಸಿದ್ದರು. ಖಾನ್‌ಗೆ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕಾಗಿ ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ವಿದ್ಯಾರ್ಥಿಯ ವಿರುದ್ಧ ಲುಕ್‌ಔಟ್ ನೋಟಿಸ್‌ ಹೊರಡಿಸಲಾಗಿದೆ.

Share This Article