ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನದ ‘ಗನ್ಸ್ ಅಂಡ್ ರೋಸಸ್’ ಚಿತ್ರ ಜನವರಿ 3ರಂದು ಬಿಡುಗಡೆಗೊಳ್ಳಲಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಭಾಷೆಗಳಲ್ಲಿ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರ ತಾರಾಬಳಗವಿದೆ. ನಾಯಕ ನಟ ಅರ್ಜುನ್ ಪಾಲಿಗಿದು ಮೊದಲ ಚಿತ್ರವಾದರೂ, ಹೆಸರುವಾಸಿಯಾಗಿರುವ ನುರಿತ ನಟರೊಂದಿಗೆ ನಟಿಸಿ, ಪಳಗಿಕೊಳ್ಳುವ ಸುಯೋಗ ಅವರಿಗೆ ಲಭಿಸಿದೆ. ಪ್ರತೀ ಪಾತ್ರಕ್ಕೂ ನಿರ್ದೇಶಕರು ಅಳೆದೂ ತೂಗಿ, ಸರಿ ಹೊಂದುವಂಥಾ ನಟ ನಟಿಯರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಇದರಲ್ಲಿರುವ ಬಹುಮುಖ್ಯವಾದ ವಿಲನ್ ಪಾತ್ರಕ್ಕೆ ಜೀವನ್ ರಿಚ್ಚಿ ಆಯ್ಕೆಯಾಗಿದ್ದರ ಹಿಂದೆ ಅನೇಕ ಅಚ್ಚರಿದಾಯಕ, ಅನಿರೀಕ್ಷಿತ ಅಂಶಗಳಿವೆ!
Advertisement
ಜೀವನ್ ರಿಚ್ಚಿ ಈಗ್ಗೆ ಹನ್ನೆರಡು ವರ್ಷದಿಂದೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವವರು. ಆರಂಭದಲ್ಲಿ ಪೊಲೀಸ್ ಪಾತ್ರಗಳಿಗೆ ಸೀಮಿತವಾದಂತಿದ್ದ ಇತ್ತೀಚಿನ ವರ್ಷಗಳಲ್ಲಿ ಜೀವನ್‌ರ ಪ್ರತಿಭೆಗೆ ತಕ್ಕುದಾದ ಪಾತ್ರಗಳೇ ಸಿಗುತ್ತಿವೆ. ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಚಿತ್ರದಲ್ಲಿ ನಟಿಸುವ ಮೂಲಕವೂ ಜೀವನ್ ವೃತ್ತಿ ಬದುಕು ಹೊಸ ದಿಕ್ಕಿನತ್ತ ಹೊರಳಿಕೊಂಡಿದೆ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ಗನ್ಸ್ ಅಂಡ್ ರೋಸಸ್ ಚಿತ್ರದ ಪಾತ್ರದ ಮೇಲಂತೂ ಅವರೊಳಗೆ ಅಗಾಧವಾದ ಭರವಸೆ ಇದೆ. ದಶಕಗಳ ಹಿಂದೆ ಸಿನಿಮಾ ರಂಗ ಪ್ರವೇಶಿಸಿದವರೆಲ್ಲ ಕಡುಗಷ್ಟಗಳನ್ನು ಕಂಡುಂಡಿದ್ದಾರೆ. ಅಂಥಾ ಸಾಕಷ್ಟು ಸಂಕಷ್ಟ, ನಿರಾಸೆ, ಅವಮಾನಗಳನ್ನು ನುಂಗಿಕೊಂಡೇ ನಟನಾಗಿ ರೂಪುಗೊಂಡಿರುವ ಜೀವನ್ ರಿಚ್ಚಿ ಪಾಲಿಗೆ ಈ ಸಿನಿಮಾದ ಪಾತ್ರ ಟರ್ನಿಂಗ್ ಪಾಯಿಂಟ್ ಆಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
Advertisement
Advertisement
ಗನ್ಸ್ ಅಂಡ್ ರೋಸಸ್ ಚಿತ್ರದ ಈ ಪಾತ್ರ ಜೀವನ್ ರಿಚ್ಚಿ ಅವರಿಗೊಲಿದಿದ್ದೇ ಒಂದು ಸೋಜಿಗ. ಅದು ಸಾಧ್ಯವಾದದ್ದರ ಹಿಂದೆ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ ಶೋಭರಾಜ್ ಅವರ ಪಾಲೂ ಇದೆ. ಶೋಭರಾಜ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಜೀವನ್ ಪಾಲಿಗೆ ಅಣ್ಣನಂತಿರುವವರು. ಇದರಲ್ಲಿ ಪೊಲೀಸ್ ಪಾತ್ರವೊಂದಕ್ಕೆ ಕಲಾವಿದರ ಹುಡುಕಾಟ ಇರೋದನ್ನರಿತಿದ್ದ ಶೋಭರಾಜ್ ಅದಕ್ಕೆ ಜೀವನ್ ರಿಚ್ಚಿಯವರನ್ನು ರೆಫರ್ ಮಾಡಿದ್ದರಂತೆ. ನಂತರ ಈ ಬಗ್ಗೆ ಜೀವನ್ ಗೆ ತಿಳಿಸಿದ್ದ ಶೋಭ ರಾಜ್ ನಿರ್ದೇಶಕರನ್ನು ಭೇಟಿಯಾಗುವಂತೆ ಸೂಚಿಸಿದ್ದರಂತೆ.
Advertisement
ಅದರಂತೆ ನಿರ್ದೇಶಕರಾದ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರಿಗೆ ಕರೆ ಮಾಡಿದಾಗ ಆಫೀಸಿಗೆ ಬಂದು ಭೇಟಿಯಾಗುವಂತೆ ಸಂದೇಶ ಬಂದಿತ್ತು. ಅದರನ್ವಯ ಜೀವನ್ ಕಚೇರಿಗೆ ಹೋದಾಗ ಅಲ್ಲಿದ್ದವರು ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಮತ್ತು ಪ್ರಸಿದ್ಧ ಸಿನಿಮಾ ಕಥೆಗಾರರಾದ ಅಜಯ್ ಕುಮಾರ್. ಅಜಯ್ ಕುಮಾರ್ ಅವರು ಜೀವನ್‌ರನ್ನು ನೋಡುತ್ತಲೇ ನಿರ್ದೇಶಕರನ್ನು ಕರೆದುಕೊಂಡು ಏನೋ ಮಾತನಾಡಲೆಂಬಂತೆ ಒಳ ಹೋಗಿದ್ದರು. ಕೆಲ ಹೊತ್ತಿನ ಬಳಿಕ ಬಂದಾಗ ಸಣ್ಣ ಪೊಲೀಸ್ ಪಾತ್ರದ ಬದಲಿಗೆ, ಚಿತ್ರದುದ್ದಕ್ಕೂ ಇರುವ, ಮಹತ್ವದ ವಿಲನ್ ಪಾತ್ರವನ್ನೇ ಜೀವನ್ ಅವರಿಗೆ ಕೊಡಲು ಅಜಯ್ ಕುಮಾರ್ ಮತ್ತು ನಿರ್ದೇಶಕರು ತೀರ್ಮಾನಿಸಿದ್ದರಂತೆ. ಅದೇ ಸ್ಥಳದಲ್ಲಿ ಒಂದಿಡೀ ಕಥೆ, ಆ ಪಾತ್ರದ ಚಹರೆಗಳನ್ನು ನಿರ್ದೇಶಕರು ವಿವರಿಸಿದಾಗ ಜೀವನ್ ರಿಚ್ಚಿ ಅಕ್ಷರಶಃ ಥ್ರಿಲ್ ಆಗಿದ್ದರಂತೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಶಾಕ್ – ಜ.5 ರಿಂದ ಬಸ್ ಪ್ರಯಾಣ ದರ ಏರಿಕೆ
ಒಂದು ಪೊಲೀಸ್ ಪಾತ್ರಕ್ಕಾಗಿ ಹೋಗಿ ಮುಖ್ಯ ವಿಲನ್ ಪಾತ್ರ ದಕ್ಕಿಸಿಕೊಂಡ ಜೀವನ್ ಅದನ್ನು ಜೀವಿಸಿದಂತೆ ನಟಿಸಿದ್ದಾರಂತೆ. ಈ ಪಾತ್ರದ ಮೂಲಕವೇ ತಮ್ಮ ಹನ್ನೆರಡು ವರ್ಷಗಳ ಸಿನಿಮಾ ಯಾನ ಸಾರ್ಥಕಗೊಳ್ಳಲಿದೆ ಎಂಬಂಥಾ ಗಾಢ ನಂಬಿಕೆ ಜೀವನ್ ಅವರೊಳಗೆ ಮೂಡಿಕೊಂಡಿದೆ. ಶೋಭರಾಜ್ ಎದುರಾಳಿ ವಿಲನ್ ಆಗಿ ಅಬ್ಬರಿಸಿರೋ ಜೀವನ್ ಪಾಲಿಗೆ ಇದು ತಮ್ಮ ವೃತ್ತಿ ಬದುಕಿನ ಅತ್ಯಂತ ಮಹತ್ವದ ಪಾತ್ರವೆಂಬ ಹೆಮ್ಮೆ ಮೂಡಿಕೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಪಾತ್ರ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ. ಈ ಪಾತ್ರಕ್ಕೆ ತಮ್ಮನ್ನು ಸೂಚಿಸಿದ ಶೋಭರಾಜ್ ಹಾಗೂ ನೋಟದಲ್ಲಿಯೇ ನಟನೆಯ ಕಸುವು ಗುರುತಿಸಿ ಮುಖ್ಯ ವಿಲನ್ ಪಾತ್ರ ಕೊಟ್ಟ ಅಜಯ್ ಕುಮಾರ್ ಹಾಗೂ ನಿರ್ದೇಶಕರ ಬಗ್ಗೆ ಜೀವನ್ ರಲ್ಲಿ ಕೃತಜ್ಞತಾ ಭಾವವಿದೆ. BBK 11: ನನ್ನ ಮಗಳು ಕಳಪೆಯಲ್ಲ: ಚೈತ್ರಾ ಪರ ನಿಂತ ತಾಯಿ
ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ 3ರಂದು ತೆರೆಗಾಣಲಿದೆ.