ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿರುವ, ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿರುವ ಚಿತ್ರ ‘ಗನ್ಸ್ ಅಂಡ್ ರೋಸಸ್’. ಈ ಚಿತ್ರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ‘ಗನ್ಸ್ ಅಂಡ್ ರೋಸಸ್’ ತೆರೆ ಕಂಡಿದೆ. ವಿಶೇಷವೆಂದರೆ, ‘ಗನ್ಸ್ ಅಂಡ್ ರೋಸಸ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಶರತ್ (Sharath) ಎಂಬ ಯುವ ಕಥೆಗಾರನ ಎಂಟ್ರಿಯಾಗಿದೆ. ಬರಹಗಾರನಾಗಿ ಹುರಿಗೊಳ್ಳುತ್ತಲೇ ನಿರ್ದೇಶಕನಾಗಬೇಕೆಂಬ ಇಂಗಿತ ಹೊಂದಿರುವ ಶರತ್ ಅವರು ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.
Advertisement
ಐಟಿ ವಲಯ ಸೇರಿದಂತೆ ಒಂದಷ್ಟು ಅನುಭವಗಳನ್ನು ತಮ್ಮದಾಗಿಸಿಕೊಂಡವರು ಶರತ್. ಸಿನಿಮಾ ಸೆಳೆತದಿಂದ ತಪ್ಪಿಸಿಕೊಳ್ಳಲಾರದೆ, ಖ್ಯಾತ ಸಿನಿಮಾ ಕಥೆಗಾರ ಆಗಿರುವ ನಿರ್ಮಾಪಕ ಅಜಯ್ ಕುಮಾರ್ ಅವರ ಗರಡಿ ಸೇರಿಕೊಂಡಿದ್ದ ಶರತ್, ಒಂದಷ್ಟು ವರ್ಷ ಅಲ್ಲಿಯೇ ಹುರಿಗೊಂಡಿದ್ದಾರೆ. ಕಡೆಗೂ ಅಜಯ್ ಕುಮಾರ್ (Ajay Kumar) ತಮ್ಮ ಪುತ್ರ ಅರ್ಜುನ್ (Arjun) ನಾಯಕನಾಗಿರುವ ಚೊಚ್ಚಲ ಚಿತ್ರವಾದ ‘ಗನ್ಸ್ ಅಂಡ್ ರೋಸಸ್’ಗೆ ಕಥೆ ಬರೆಯುವ ಅವಕಾಶವನ್ನು ಶರತ್‌ಗೆ ಕೊಟ್ಟಿದ್ದಾರೆ. ಹೀಗೊಂದು ಸುವರ್ಣಾವಕಾಶ ಲಭಿಸುತ್ತಲೇ ಶರತ್ ಈಗಿನ ಜನರೇಷನ್‌ನ ಹುಡುಗರನ್ನೇ ಗುರಿಯಾಗಿಸಿಕೊಂಡು, ಸಾಮಾಜಿಕ ಪಲ್ಲಟಗಳ ಭೂಮಿಕೆಯಲ್ಲಿ ಚೆಂದದ್ದೊಂದು ಕಥೆ ಸಿದ್ಧ ಪಡಿಸಿದ್ದಾರೆ.
Advertisement
Advertisement
ಆ ಹಂತದಲ್ಲಿ ಸ್ಯಾಂಡಲ್‌ವುಡ್ ಸುತ್ತಾ ಡ್ರಗ್ಸ್ ಕೇಸ್ ಪಹರೆ ನಡೆಸುತ್ತಿತ್ತು. ಬಾಲಿವುಡ್ ದಿಕ್ಕಿನಲ್ಲಿ ಖ್ಯಾತ ನಟನ ಮಗ ಡ್ರಗ್ಸ್ ಕೇಸಲ್ಲಿ ಬಂಧಿಯಾಗಿದ್ದ. ಆ ಪಿಡುಗಿನ ಆಳಕ್ಕೆ ಹೊಕ್ಕು, ಅದಕ್ಕೆ ಯುವ ಜನತೆ ಈಡಾಗುತ್ತಿರುವ ಹಿಂಚುಮುಂಚಿನ ವಿದ್ಯಮಾನದ ಬಗ್ಗೆ ಪರಾಮರ್ಶೆ ನಡೆಸಿ ಈ ಕಥೆ ಹೆಣೆದಿದ್ದರಂತೆ. ಹಾಗಂತ, ಇಂಥಾದ್ದೊಂದು ಸಾಮಾಜಿಕ ಕಾಳಜಿಯ ಕಥೆಯನ್ನು ಒಂದೇ ಕೋನದಲ್ಲಿ ನೋಡಿದರೆ ಡಾಕ್ಯುಮೆಂಟರಿಯಾಗಿ ಬಿಡುತ್ತೆ. ಮನರಂಜನೆಗೆ ಕೊರತೆ ಇಲ್ಲದಂತೆ, ಕಮರ್ಶಿಯಲ್ ಹಾದಿಯಲ್ಲಿಯೇ ಒಂದಿಡೀ ಕಥೆಯನ್ನು ರೂಪಿಸೋದು ಶರತ್ ಪಾಲಿಗೆ ಸವಾಲಾಗಿತ್ತು. ಗುರುಗಳಾದ ಅಜಯ್ ಕುಮಾರ್ ಅವರ ಸಲಹೆ, ಸೂಚನೆಗಳನ್ನು ಅನುಸರಿಸಿ, ಆ ಸವಾಲನ್ನು ಸಮರ್ಥವಾಗಿ ಎದುರುಗೊಂಡ ತೃಪ್ತಿ ಶರತ್ ಅವರಲ್ಲಿದೆ.
Advertisement
ಚಿತ್ರರಂಗದಲ್ಲಿ ಬರಹಗಾರರಿಗೆ ಮನ್ನಣೆಯಿಲ್ಲ ಅನ್ನೋ ಕೊರಗು ಆಗಾಗ ನಾನಾ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತೆ. ಬರಹಗಾರರಿಂದಷ್ಟೇ ಒಂದೊಳ್ಳೆ ಕಂಟೆಂಟ್ ಸೃಷ್ಟಿಯಾಗುತ್ತದೆ ಅನ್ನೋದು ನಿರ್ವಿವಾದ. ಈ ವಲಯದಲ್ಲಿರುವ ಅಷ್ಟೂ ಸವಾಲುಗಳನ್ನು ದಾಟಿಕೊಂಡು ಬರಹಗಾರರಾಗಿ ಗಮನ ಸೆಳೆದ ಒಂದಷ್ಟು ಮಂದಿಯಿದ್ದಾರೆ. ಮೊದಲ ಚಿತ್ರದಲ್ಲಿಯೇ ಶರತ್ ಕೂಡ ಆ ಸಾಲಿಗೆ ಸೇರ್ಪಡೆಗೊಳ್ಳುವ ಲಕ್ಷಣಗಳಿದ್ದಾವೆ. ಸಿನಿಮಾ ಅನ್ನೋದು ಪ್ರಭಾವೀ ಮಾಧ್ಯಮ. ಅದರ ಮೂಲಕ ಡ್ರಗ್ಸ್ ನಂಥಾ ಪಿಡುಗಿನ ಗಂಭೀರ ಸ್ವರೂಪವನ್ನು ಮನಗಾಣಿಸಿ, ಅದರ ಪರಿಣಾಮವನ್ನು ಹೇಳುವ ಜರೂರತ್ತು ಸದ್ಯದ ಮಟ್ಟಿಗಿದೆ. ಅಂಥಾದ್ದೊಂದು ಸಮಾಜಿಕ ಕಾಳಜಿಯ ಕಥೆ ಮುಟ್ಟಿದ್ದರಿಂದಲೇ ಶರತ್ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಅದು ಪ್ರೇಕ್ಷಕರ ವಲಯದಲ್ಲಿಯೂ ಪ್ರತಿಫಲಿಸುತ್ತಿದೆ. ಈ ಸಿನಿಮಾದ ಜೊತೆಗೆ, ಕಥೆಗಾರನಾಗಿ ಶರತ್ ಕೂಡ ಗೆಲ್ಲುವ ಭರವಸೆ ಮೂಡಿಕೊಂಡಿದೆ.
ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ‘ಗನ್ಸ್ ಅಂಡ್ ರೋಸಸ್’ ಜನವರಿ 3ರಂದು ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.