ಮಂಗಳೂರು: ಬಿಜೆಪಿ ಮುಖಂಡನ ಫೋಟೋ ಶೂಟ್ ಕ್ರೇಜ್ ಗೆ ಗನ್ ಮ್ಯಾನ್ ಕೆಲಸ ಕಳೆದುಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಕಳೆದ ತಿಂಗಳು ದುಬೈ ಪ್ರವಾಸ ನಡೆಸಿದ್ದರು. ಈ ವೇಳೆ ಗನ್ ಮ್ಯಾನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಭದ್ರತೆ ನಿಯಮಕ್ಕೆ ಅನುಗುಣವಾಗಿ ಅಂಗರಕ್ಷಕರು ವಿಐಪಿಗಳ ಜೊತೆ ಫೋಟೋ ತೆಗೆಸಿಕೊಳ್ಳುವಂತಿಲ್ಲ. ಹೀಗಿದ್ದರೂ ಗನ್ ಮ್ಯಾನ್ ಮಲ್ಲಿಕಾರ್ಜುನ್, ರಹೀಂ ಉಚ್ಚಿಲ್ ಜೊತೆಗೆ ಫೋಟೋಗೆ ಪೋಸ್ ನೀಡಿದ್ದರು.
Advertisement
ಇದನ್ನು ರಹೀಂ ಉಚ್ಚಿಲ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಗನ್ ಮ್ಯಾನ್ ಕೆಲಸ ಕಳೆದುಕೊಳ್ಳಲು ಕಾರಣವಾಗಿದೆ. ಇನ್ನು ರಹೀಂ ಉಚ್ಚಿಲ್ ವಿದೇಶ ಪ್ರವಾಸ ಹೋದಾಗ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಆಯುಧವನ್ನು ಶಶಸ್ತ್ರ ಮೀಸಲು ಪಡೆಗೆ ಒಪ್ಪಿಸಿ ರಜೆ ಪಡೆದಿದ್ದು, ತಾನು ಮೈಸೂರಿನಲ್ಲಿ ಇರೋದಾಗಿ ಮೇಲಾಧಿಕಾರಿಗಳ ಬಳಿ ಹೇಳಿದ್ದರು. ಆದರೆ ಅವರು ಹೇಳಿದ ಸುಳ್ಳಿಗೆ ರಹೀಂ ಉಚ್ಚಿಲ್ ಫೇಸ್ ಬುಕ್ ನಲ್ಲಿ ಹಾಕಿದ ಫೋಟೋ ಸಾಕ್ಷಿಯಾಗಿತ್ತು. ಆದ್ದರಿಂದ ಮಲ್ಲಿಕಾರ್ಜುನರನ್ನು ಮೇಲಾಧಿಕಾರಿಗಳು ಕೆಲಸದಿಂದ ಅಮಾನತುಗೊಳಿಸಿದ್ದಾರೆ.
Advertisement
ರಹೀಂ ಉಚ್ಚಿಲ್ ಮೇಲೆ ಈ ಹಿಂದೆ ಕೊಲೆಯತ್ನ ನಡೆದಿದ್ದು, ಅದೃಷ್ಟವಶಾತ್ ಬದುಕುಳಿದಿದ್ದರು. ಬಳಿಕ ಮಂಗಳೂರು ಪೆÇಲೀಸ್ ಕಮಿಷನರೇಟ್ ವತಿಯಿಂದ ರಹೀಂ ಉಚ್ಚಿಲ ಗೆ ಗನ್ ಮ್ಯಾನ್ ಒದಗಿಸಲಾಗಿತ್ತು.
Advertisement