ಸ್ಯಾಂಡಲ್‌ವುಡ್‌ನಲ್ಲಿ ‘ಗುಳ್ಟು’ (Gultoo) ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಜನಾರ್ದನ್ ಚಿಕ್ಕಣ್ಣ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಹುಕಾಲದ ಗೆಳತಿ ಸ್ನೇಹಾ(Sneha) ಜೊತೆ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ (Janrdhan Chikkanna) ಅವರು ಹಸೆಮಣೆ(Wedding) ಏರಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ವಿರುದ್ಧ ಗರಂ ಆದ ನಟಿ ಪೂನಂ ಕೌರ್
View this post on Instagram
Advertisement
ಜನಾರ್ದನ್ ಚಿಕ್ಕಣ್ಣ ಅವರ ಪರಿಕಲ್ಪನೆಯಲ್ಲಿ ‘ಗುಳ್ಟು’ ಸಿನಿಮಾ ಮೂಡಿ ಬಂದಿತ್ತು. ನವೀನ್ ಶಂಕರ್ (Naveen Shankar), ಸೋನು ಗೌಡ (Sonu Gowda) ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರವನ್ನ ನಿರ್ಮಾಣ ಮಾಡಿದ್ದರು. ರಿಷಿ ಮತ್ತು ಧನ್ಯಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು.
Advertisement
View this post on Instagram
Advertisement
ನಿರ್ಮಾಪಕ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಜನಾರ್ದನ್ ಚಿಕ್ಕಣ್ಣ ಅವರು ಬಹುಕಾಲದ ಗೆಳತಿ ಸ್ನೇಹಾ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಇದೀಗ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಜೂನ್ 1ರಂದು ಮೈಸೂರಿನಲ್ಲಿ(Mysuru) ಸರಳವಾಗಿ ಮದುವೆಯಾಗುತ್ತಿದ್ದಾರೆ. ಕುಟುಂಬಸ್ಥರು, ಸಿನಿಮಾ ರಂಗದ ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ.
Advertisement
ಜನಾರ್ದನ್ ಚಿಕ್ಕಣ್ಣ ಅವರ ಮದುವೆ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಗುಳ್ಟು’ ನಿರ್ದೇಶಕನ ಹೊಸ ಪಯಣಕ್ಕೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.