ಮುಂಬೈ: ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ‘ಗಲ್ಲಿ ಬಾಯ್’ ಚಿತ್ರದ ರಾಪರ್ ಎಂಸಿ ಟಾಡ್ ಫೋಡ್ ಅಕಾ ಧರ್ಮೇಶ್ (24) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜೋಯಾ ಅಖ್ತರ್ ನಿರ್ದೇಶನದ ‘ಗಲ್ಲಿ ಬಾಯ್’ ಸಿನಿಮಾದ ಹಾಡಿನ ಮೂಲಕ ಖ್ಯಾತರಾಗಿದ್ದ ರಾಪರ್ ಧರ್ಮೇಶ್ ಪರ್ಮಾರ್ ನಿಧನಕ್ಕೆ ಬಾಲಿವುಡ್ ಕಂಬಿನಿ ಮೀಡಿದಿದೆ. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್‍ನ ತಾರೆಯರಾದ ಜೋಯಾ ಅಖ್ತರ್, ರಣವೀರ್ ಸಿಂಗ್, ಸಿದ್ಧಾಂತ್ ಚತುರ್ವೇದಿ ಸೇರಿದಂತೆ ಅನೇಕ ಕಲಾವಿದರು ಅಗಲಿದ ಗಾಯಕನಿಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಬೈಕಾಟ್ : ಕನ್ನಡ ಪರ ಹೋರಾಟಗಾರರಿಗೇ ಜವಾಬ್ದಾರಿ ಕೊಟ್ಟ ರಾಜಮೌಳಿ ಟೀಮ್
Advertisement
View this post on Instagram
Advertisement
ಈ ಕುರಿತು ಮಾಧ್ಯಮವೊಂದರಲ್ಲಿ ಮಾತನಾಡಿರುವ ಎಂಸಿ ಟಾಡ್ ಫಾಡ್ ಅವರ ತಾಯಿ ಮಗನ ನಿಧನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ‘ಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ’ ಎಂದು ಖಚಿತ ಪಡಿಸಿದ್ದಾರೆ. “ನನ್ನ ಮಗನಿಗೆ ಕಳೆದ 4 ತಿಂಗಳಲ್ಲಿ ಎರಡು ಬಾರಿ ಹೃದಯಾಘಾತವಾಗಿತ್ತು. 24 ವರ್ಷದ ಗಾಯಕನಿಗೆ ನಾಲ್ಕು ತಿಂಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಲಡಾಖ್‍ನಲ್ಲಿದ್ದಾಗ ಮೊದಲ ಹೃದಯಾಘಾತವಾಗಿತ್ತು. ಹೀಗಾಗಿ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೂ ನನ್ನ ಮಗ ಎಂದಿಗೂ ವಿಶ್ರಾಂತಿ ಪಡೆಯಲಿಲ್ಲ. ಕೊನೆಗೂ ಉಳಿಯಲಿಲ್ಲ’ ಎಂದು ಕಣ್ಣೀರಾಕಿದ್ದಾರೆ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ
Advertisement
ಅವರು ರಾಪ್ ಬಗ್ಗೆ ಅತೀವ ಪ್ರೀತಿ ಹೊಂದಿದ್ದರು. ಸಂಗೀತವನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ನನ್ನ ಮಗು ಈಗ ಕಣ್ಮರೆಯಾಯಿತು. ಅವನನ್ನು ಉಳಿಸಲು ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರ ತಾಯಿ ರೋಧಿಸಿದ್ದಾರೆ.
Advertisement
View this post on Instagram
ವರದಿಯ ಪ್ರಕಾರ, ಅವರಿಗೆ ಎರಡನೇ ಬಾರಿ ಹೃದಯಾಘಾತದ ನಂತರವೇ ಮಗನ ಸ್ಥಿತಿ ಕುಟುಂಬಕ್ಕೆ ತಿಳಿದಿದೆ. ನಾಸಿಕ್‍ಗೆ ಕೆಲಸಕ್ಕೆ ಸಂಬಂಧಿಸಿದ ಪ್ರವಾಸ ಹೊರಡುವ ಮುನ್ನ ಹೋಳಿ ಹಬ್ಬದ ಕೆಲವೇ ದಿನಗಳ ಮೊದಲು, ಧರ್ಮೇಶ್ ರಕ್ಷಾ ಬಂಧನವನ್ನೂ ಆಚರಿಸಿದ್ದರಂತೆ. ಅವನ ಸಾವು ಮೊದಲೇ ಅವನಿಗೆ ತಿಳಿದಿತ್ತಾ ಎನ್ನುವಂತೆ ಹಬ್ಬಗಳನ್ನು ರಾಪರ್ ಆಚರಿಸಿದ್ದರು.
‘ನನ್ನ ಮಗ ಹೋಳಿ ಹಬ್ಬಕ್ಕೂ ಒಂದು ದಿನದ ಮೊದಲು ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ. ಅವನಿಗೆ ಇಬ್ಬರು ತಂಗಿಯರಿದ್ದಾರೆ. ರಾಕಿ ಹಬ್ಬ ಇಲ್ಲದಿದ್ದರೂ, ಅವನು ಯಾಕೆ ಆ ರೀತಿ ಹಬ್ಬವನ್ನು ಆಚರಿಸಿದ ಎಂದು ಆಗ ತಿಳಿಯಲಿಲ್ಲ. ಆದರೆ ಅವನು ತನ್ನ ಸಹೋದರಿಯರೊಂದಿಗೆ ಮಾತ್ರವಲ್ಲದೆ ತನ್ನ ಚಿಕ್ಕಮ್ಮನ ಹೆಣ್ಣುಮಕ್ಕಳೊಂದಿಗೆ ರಾಖಿ ಹಬ್ಬ ಆಚರಿಸಿ ಹೋದ’ ಎಂದಿದ್ದಾರೆ ಅವರ ತಾಯಿ.
View this post on Instagram
ಟಾಡ್ ಫಾಡ್ ಅವರು ಅನೇಕ ದೇಶಿ ಹಿಪ್-ಹಾಪ್ ಹಾಡುಗಳನ್ನು ಹಾಡಿದ್ದಾರೆ. ಎಂಸಿ ಟಾಡ್ ಫಾಡ್ ‘ಇಂಡಿಯಾ 91’ ಗಾಗಿ ಒಂದು ಪದ್ಯವನ್ನೂ ಬರೆದಿದ್ದಾರೆ.