Connect with us

Districts

ಗುಲಬರ್ಗಾ ವಿವಿ ಬಿಇಡಿ ಪ್ರಶ್ನೆಪತ್ರಿಕೆ ಔಟ್

Published

on

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಬಿಇಡಿ ಪ್ರಶ್ನಪತ್ರಿಕೆ ಬಹಿರಂಗವಾಗಿದೆ. ಆದರೆ ಇದೂವರೆಗೂ ವಿವಿಯಿಂದ ಯಾವುದೇ ದೂರು ದಾಖಲಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇಂದು ನಡೆಯಬೇಕಿದ್ದ ಬಿಇಡಿ ಪ್ರಶ್ನೆ ಪತ್ರಿಕೆ ಭಾನುವಾರ ಸಂಜೆಯೇ ವಾಟ್ಸಪ್ ಗಳಲ್ಲಿ ಹರಿದಾಡಿತ್ತು. ಶೈಕ್ಷಣಿಕ ಸಾಮಾಗ್ರಿ, ಕೌಶಲ್ಯ ಮತ್ತು ವಿಧಾನ ವಿಷಯ ಪರೀಕ್ಷೆ ಇಂದು ನಡೆದಿದ್ದರೂ ನಿನ್ನೆಯ ಪ್ರಶ್ನೆ ಪತ್ರಿಕೆ ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಎಕ್ಸ್ ಕ್ಲೂಸಿವ್ ವರದಿ ಪ್ರಸಾರ ಮಾಡಿತ್ತು.

ಇಂದು ಮುಂಜಾನೆ ಹತ್ತು ಗಂಟೆಗೆ ಪ್ರಾರಂಭವಾಗಿರುವ ಪರೀಕ್ಷೆ ನಗರದ ಖಾಸಗಿ ಕಾಲೇಜ್‍ನಲ್ಲಿ ಪ್ರಶ್ನೆಪತ್ರಿಕೆ ಪರಿಶೀಲನೆ ಮಾಡಿದ ಪಬ್ಲಿಕ್ ಟಿವಿ ತಂಡಕ್ಕೆ ನಿನ್ನೆ ಬಹಿರಂಗವಾದ ಪ್ರಶ್ನೆಪತ್ರಿಕೆ ಮತ್ತು ಇಂದು ವಿದ್ಯಾರ್ಥಿಗಳು ಬರೆಯುತ್ತಿರುವ ಪ್ರಶ್ನೆಪತ್ರಿಕೆ ಎರಡು ಒಂದೆ ಎನ್ನುವುದು ದೃಢಪಟ್ಟಿದೆ.

ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿರೋದು ಇಂದು ಬೆಳಗ್ಗೆ 10.30 ಕ್ಕೆ ಗಮನಕ್ಕೆ ಬಂದಿದೆ. ಈ ಬಗ್ಗೆ ವಿವಿ ವಿದ್ಯಾರ್ಥಿಗಳು ನನ್ನ ಗಮನಕ್ಕೆ ತಂದಿರ್ತಾರೆ. ಬಹಿರಂಗಗೊಂಡ ಪ್ರಶ್ನೆ ಪತ್ರಿಕೆ ಮೇಲೆ ವಿವಿ ಬಾರ್‍ಕೋಡ್ ಇಲ್ಲ. ವಿವಿಯ ಪ್ರತಿಯೊಂದು ಪತ್ರಿಕೆಯ ಮೇಲೆ ಬಾರ್‍ಕೋಡ್‍ಗಳಿರುತ್ತವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ವಿವಿ ಮೌಲ್ಯಮಾಪನ ಕುಲಸಚಿವ ಡಾ ಸಿಎಸ್ ಪಾಟೀಲ್ ಹೇಳಿದ್ದಾರೆ.

https://www.youtube.com/watch?v=I8wQNtBu00w

Click to comment

Leave a Reply

Your email address will not be published. Required fields are marked *