ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಆಂಧ್ರ, ಒಡಿಶಾ ಕರಾವಳಿ ಜಿಲ್ಲೆಗಳಲ್ಲಿ ಗುಲಾಬ್ ಚಂಡಮಾರುತ ಭೀತಿ ಎದುರಾಗಿದೆ. ಛತ್ತೀಸ್‍ಗಢ, ತೆಲಂಗಾಣದಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
Advertisement
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಕಂಡ ಹಿನ್ನೆಲೆ ಗುಲಾಬ್ ಚಂಡಮಾರುತದ ಭೀತಿ ಆವರಿಸಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಒಡಿಶಾದ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದ 7 ಜಿಲ್ಲೆಗಳಲ್ಲಿ ಹೆಚ್ಚಿನಾ ನಿಗಾ ವಹಿಸಲಾಗುತ್ತಿದ್ದು, ಗಜಪತಿ, ಗಂಜಾಮ್, ರಾಯಗಡ, ಕೋರಾಪುತ್, ಮಲ್ಕನಿಗಿರಿ, ನಬರಂಗಪುರ, ಕಂಧಮಲ್‍ಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಚಂಡಮಾರುತ ಒಡಿಶಾ ಹಾಗೂ ಆಂಧ್ರಪ್ರದೇಶದ ದಕ್ಷಿಣಕ್ಕೆ ಬೀಸಲಿದ್ದು, ಕರಾವಳಿ ಜಿಲ್ಲೆಗಳಲ್ಲೂ ಇದರ ಪ್ರಭಾವ ಬೀರಲಿದೆ. ಇದನ್ನೂ ಓದಿ: ತಾಲಿಬಾನಿ ಬಿಜೆಪಿ ಸರ್ಕಾರದಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ
Advertisement
Advertisement
ಈ ಬಗ್ಗೆ ಎನ್‌ಡಿಆರ್‌ಎಫ್‌ನ ಪ್ರಧಾನ ನಿರ್ದೇಶಕ ಎಸ್.ಎನ್ ಪ್ರಧಾನ್ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದು, ಆಂಧ್ರಪ್ರದೇಶದಲ್ಲಿ 5 ತಂಡ, ಒಡಿಶಾದಲ್ಲಿ 13 ತಂಡಗಳನ್ನು ನಿಯೋಜಿಸಲಾಗುತ್ತದೆ. ಒಡಿಶಾದ ಬಾಲಸೋರ್, ಗಂಜಾಬ್, ಗಜಪತಿ, ರಾಯಗಢ, ಕೊರಾಪುತ್, ನಯಾಗರ್, ಮಲ್ಕಂಗಿರಿ ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸಲು ಕ್ರಮ ಕೈಗೊಂಡಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣ, ಶ್ರೀಕಾಕುಳಂ, ಯನಮ್, ವಿಜಿಯನಗರಮ್‍ಗಳಲ್ಲಿ ಎನ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸುವ ಕಾರ್ಯ ನಡೆದಿದೆ. ಒಂದು ಎನ್‌ಡಿಆರ್‌ಎಫ್ ತಂಡದಲ್ಲಿ 47 ಸಿಬ್ಬಂದಿಗಳಿರಲಿದ್ದು, ಮರ, ಪೋಲ್ ಗಳನ್ನು ತುಂಡರಿಸುವ ಸಾಧನಗಳು, ಗಾಳಿ ತುಂಬಬಹುದಾದ ದೋಣಿಗಳು, ತುರ್ತು ವೈದ್ಯಕೀಯ ಸೌಲಭ್ಯ, ರಕ್ಷಣಾ ಕಾರ್ಯಾಚರಣೆಗಳಲ್ಲಿ ರಕ್ಷಿಸಿದ ಜನರಿಗೆ ಅಗತ್ಯವಿರುವ ನೆರವು ನೀಡುವ ಸಾಧನಗಳನ್ನು ಹೊಂದಿರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಿಲ್ಲದ ದೊಡ್ಡವರ ಮಕ್ಕಳ ಆಕ್ಸಿಡೆಂಟ್ – Textile ಮಾಲೀಕನ ಮಗನ ಕಾರು ಅಪಘಾತ
Advertisement
????Ref @Indiametdept #CycloneAlert
????for nrth AP & sth Odisha coasts
????Now Deep Depression
????abt 410 km ESE of Gopalpur
????480 km ENE of K-patnam
????@NDRFHQ depl starts
????13 tms(24 sub-teams)-Odisha
????5 tms-AP
????All be in place late tonite@HMOIndia @PIBHomeAffairs @ANI pic.twitter.com/q5xk4BLh73
— ѕαtчα prαdhαnसत्य नारायण प्रधान ସତ୍ୟ ପ୍ରଧାନ (@satyaprad1) September 25, 2021