ಭಾರತದ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ – 18ನೇ ವಯಸ್ಸಿಗೆ ಸಾಧನೆ

Public TV
1 Min Read
D.Gukesh

ಸಿಂಗಾಪುರ: ಇಲ್ಲಿ ನಡೆದ ರೋಚಕ ಹಣಾಹಣಿಯ 14ನೇ ಮತ್ತು ಅಂತಿಮ ಪಂದ್ಯದಲ್ಲಿ ಗೆದ್ದ ಭಾರತದ ಗುಕೇಶ್ (D.Gukesh) ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಚೀನಾದ ಪ್ರಶಸ್ತಿ ವಿಜೇತ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ಗುರುವಾರ 18 ನೇ ವಯಸ್ಸಿನಲ್ಲಿ ಕಿರಿಯ ವಿಶ್ವ ಚೆಸ್ ಚಾಂಪಿಯನ್ (Chess World Champion) ಆಗಿದ್ದಾರೆ.

14 ಪಂದ್ಯಗಳ ಕೊನೆಯ ಕ್ಲಾಸಿಕಲ್ ಗೇಮ್ ಅನ್ನು ಗೆದ್ದ ನಂತರ ಲಿರೆನ್ ಅವರ 6.5 ಗೆ ಹೋಲಿಸಿದರೆ ಗುಕೇಶ್ 7.5 ಅಂಕಗಳನ್ನು ಗಳಿಸಿದರು. ಇದನ್ನೂ ಓದಿ: ಭಾರತಕ್ಕೂ ಮೊದಲೇ ಚಾಂಪಿಯನ್ಸ್‌ ಟ್ರೋಫಿ ಬಾಯ್ಕಾಟ್‌ ಮಾಡ್ಬೇಕು – ಪಾಕ್ ಹೊಸ ಕ್ಯಾತೆ

ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ ಅನಾಟೊಲಿ ಕಾರ್ಪೋವ್ ಅವರನ್ನು ಸೋಲಿಸುವ ಮೂಲಕ 22 ನೇ ವಯಸ್ಸಿನಲ್ಲಿ ಪ್ರಶಸ್ತಿಯನ್ನು ಗೆದ್ದ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ದಾಖಲೆಯನ್ನು ಬರೆದಿದ್ದರು. ಈಗ ಆ ದಾಖಲೆಯನ್ನು ಗುಕೇಶ್‌ ಉಡೀಸ್‌ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಕ್ಯಾಂಡಿಡೇಟ್ಸ್ ಪಂದ್ಯಾವಳಿಯನ್ನು ಗೆದ್ದುಕೊಂಡ ಗುಕೇಶ್ ಅವರು ವಿಶ್ವ ಕಿರೀಟಕ್ಕೆ ಅತ್ಯಂತ ಕಿರಿಯ ಚಾಲೆಂಜರ್ ಆಗಿ ಪಂದ್ಯಕ್ಕೆ ಪ್ರವೇಶ ಪಡೆದಿದ್ದರು. ಇದನ್ನೂ ಓದಿ: ಎಸ್‌ಎಂಕೆ ಅಂತಿಮ ದರ್ಶನ ಪಡೆದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ

ದಂತಕಥೆ ವಿಶ್ವನಾಥನ್ ಆನಂದ್ ನಂತರ ವಿಶ್ವ ಪ್ರಶಸ್ತಿ ಪಡೆದ ಎರಡನೇ ಭಾರತೀಯರಾಗಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆನಂದ್ ಕೊನೆಯ ಬಾರಿಗೆ 2013ರಲ್ಲಿ ಕಿರೀಟ ಗೆದ್ದಿದ್ದರು.

Share This Article