ಹಾಸನ: ಹರಿಯುವ ನೀರಿನಲ್ಲಿ ಸಿಲುಕಿದ್ದ ತಾಯಿ ಮಗನನ್ನು (Mother And Son) ಗುಜುರಿ ವ್ಯಾಪಾರಿ ಹಾಗೂ ಅವರ ಪುತ್ರ ರಕ್ಷಿಸಿರುವ (Rescue) ಘಟನೆ ಹಾಸನ (Hassana) ಜಿಲ್ಲೆ, ಅರಸೀಕೆರೆ ತಾಲೂಕಿನ, ಕೆಂಪುಸಾಗರ ರಸ್ತೆಯಲ್ಲಿ ನಡೆದಿದೆ.
Advertisement
ಭಾರಿ ಮಳೆಯಿಂದ (Rain) ಹಾಗೂ ಅರಸೀಕೆರೆ ಪಟ್ಟಣದ ಕೆರೆ ತುಂಬಿ ಕೋಡಿ ಬಿದ್ದ ನೀರು ಸಿದ್ದಾಪುರ ಗ್ರಾಮದ ಕೆರೆಗೆ ಹರಿದು ಕೆರೆ ತುಂಬಿ ಕೋಡಿ ಬಿದ್ದು ಅರಸೀಕೆರೆ-ಕೆಂಪುಸಾಗರ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ರಭಸವಾಗಿ ಹರಿಯುತ್ತಿತ್ತು. ಅದೇ ದಾರಿಯಲ್ಲಿ ದೇವಸ್ಥಾನಕ್ಕೆ (Temple) ತೆರಳಿ ಪೂಜೆ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದ ತಾಯಿ, ಮಗ ಹರಿಯುತ್ತಿದ್ದ ನೀರಿನಲ್ಲಿ ರಸ್ತೆ (Road) ದಾಟಲು ಮುಂದಾಗಿದ್ದಾರೆ. ಈ ವೇಳೆ ರಸ್ತೆ ದಾಟಲಾಗದೆ ಅಪಾಯಕ್ಕೆ ಸಿಲುಕಿದ್ದರು. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು
Advertisement
Advertisement
ತಾಯಿ-ಮಗ ಹರಿಯುತ್ತಿದ್ದ ನೀರಿನಲ್ಲಿ ರಸ್ತೆ ದಾಟಲು ಮುಂದದಾಗ ಸ್ಥಳದಲ್ಲಿ ನಿಂತಿದ್ದ ಅರಸೀಕೆರೆ ಪಟ್ಟಣದ ಗುಜುರಿ ವ್ಯಾಪಾರಿ ಸಿದ್ದಪ್ಪ ನಗರದ ನಿವಾಸಿ ಮುನಾವರ್ ಖಾನ್ ಹಾಗೂ ಅವರ ಪುತ್ರ ಖಲಂದರ್ ಖಾನ್ ರಸ್ತೆ ಮಧ್ಯೆ ರಭಸವಾಗಿ ನೀರು ಹರಿಯುತ್ತಿದ್ದು ಹೋಗಬೇಡಿ ಎಂದು ತಿಳಿಸಿದ್ದರು. ಮುನಾವರ್ ಖಾನ್ ಮಾತಿಗೆ ಕಿವಿಗೊಡದ ತಾಯಿ, ಮಗ ಬೈಕ್ ತಳ್ಳಿಕೊಂಡು ಹೋಗಿ ಹರಿಯುವ ನೀರಿನಲ್ಲಿ ಸಿಲುಕಿದ್ದಾರೆ. ಮುಂದೆ ಹೋಗಲು ಆಗದೆ, ಹಿಂದೆ ಬರಲು ಆಗದೆ ನೀರಿನಲ್ಲಿ ಸಿಲುಕಿಕೊಂಡು ಪರದಾಡಿದ್ದಾರೆ. ಈ ಸಂದರ್ಭದಲ್ಲಿ ಮುನಾವರ್ ಖಾನ್ ಹಗ್ಗ ಎಸೆದು ಬೈಕ್ ಸಮೇತ ತಾಯಿ, ಮಗ ಇಬ್ಬರನ್ನು ರಕ್ಷಿಸಿದ್ದಾರೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಾಯಿ, ಮಗನ ರಕ್ಷಣೆಯ ವೀಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಪ್ರಾಣ ಉಳಿಸಿದ ಮುನಾವರ್ ಖಾನ್‍ಗೆ ತಾಯಿ, ಮಗ ಇಬ್ಬರು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಬಾಲಕಿಯರ ಮೃತದೇಹ ಪತ್ತೆ – ಅತ್ಯಾಚಾರ, ಕೊಲೆ ಆರೋಪ